Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಧೋನೀನಾ-ಕೊಹ್ಲೀನಾ?: ಅದ್ದೂರಿ ಐಪಿಎಲ್‌ಗೊಂದು ಕಲರ್‌ಫುಲ್ ವಿಡಿಯೋ

ಧೋನಿನಾ..! ಕೊಹ್ಲಿನಾ..! ನೋಡೆ ಬಿಡೋಣ..? | Oneindia Kannada
IPL 2019: MS Dhoni and Virat Kohli get ready for first clash - Watch

ನವದೆಹಲಿ, ಮಾರ್ಚ್ 15: ಟಿವಿ, ಮೊಬೈಲ್ ಇಲ್ಲ ಕಂಪ್ಯೂಟರ್‌ನಲ್ಲೋ ನಮಗಿಷ್ಟದ ಕ್ರೀಡೆ, ಸಿನಿಮಾ ಅಥವಾ ಇನ್ಯಾವುದೋ ವಿಡಿಯೋ ನೋಡುತ್ತಿದ್ದಾಗ ಚಕ್ಕನೆ ಒಂದು ಜಾಹೀರಾತು ಒಕ್ಕರಿಸಿ ಬಿಟ್ಟಿತು ಅನ್ನಿ; ನಮ್ಮ ಕಂಟ್ರೋಲಿಗೇ ಕಾಯದೆ 'ಥತ್ತರಿಕೆ' ಅಂತ ಅಸಮಾಧಾನವೊಂದು ನಮ್ಮಿಂದ ಹೊರ ಬಿದ್ದಾಗಿರತ್ತೆ. ಹಾಗಂತ ಜಾಹೀರಾತನ್ನು ಇಷ್ಟಪಡೋರಿಲ್ಲ ಎಂದೇನಿಲ್ಲ. ನೋಡಬೇಕನ್ನಿಸೋ ಜಾಹೀರಾತನ್ನು ಇಷ್ಟಪಟ್ಟು ನೋಡೋ ಸಾಲಿನೋರು ನಾವು.

ಕೆಲ ಜಾಹೀರಾತುಗಳು ಬೋರು-ಬೇಜಾರು ಅನ್ನಿಸೋದಿಲ್ಲ. ಬದಲಿಗೆ ಅವು ಬಂದಾಗ ನಮ್ಮ ನೆಚ್ಚಿನ ಸಿನಿಮಾ ಯಾ ವಿಡಿಯೋ ನೋಡುವಷ್ಟೇ ಖುಷಿಯಲ್ಲಿ ನೋಡುತ್ತ ಕುಂತುಬಿಡುತ್ತೇವೆ. ಜಾಹೀರಾತು ಮುಗಿಯೋ ಹೊತ್ತಿಗೆ ನಮ್ಮರಿವಿಗೆ ಬಾರದೆ ತುಟಿಯಂಚಲಿ ಕಿರುನಗು ಕೂಡ ಬಂದಿರುತ್ತೆ. ಅಂಥ ಜಾಹೀರಾತುಗಳ ಸರದಿಯಲ್ಲಿ ಇಲ್ಲೊಂದಿದೆ.

ಇದೇ ಮಾರ್ಚ್ 23ರಿಂದ ಭಾರತದ ಅದ್ದೂರಿ ಕ್ರಿಕೆಟ್ ಹಬ್ಬ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಆರಂಭಗೊಳ್ಳುತ್ತಿದೆ. ಇದರ ಪ್ರಚಾರಾರ್ಥವಾಗಿ ಸ್ಟಾರ್ ಸ್ಪೋರ್ಟ್ಸ್ ಬಳಗ ವಿಭಿನ್ನ ಜಾಹೀರಾತೊಂದನ್ನು ಬಿಟ್ಟಿದೆ. ಕ್ರಿಕೆಟ್ ಕ್ರೇಸಿನ ಝಲಕ್ಕನ್ನು ತೆರೆದಿಡುವ ಈ ಜಾಹೀರಾತನ್ನು ನೋಡಿದಷ್ಟೂ ಬೋರ್ ಅನ್ನಿಸಲ್ಲ (ಆರಂಭಿಕ ಪಂದ್ಯ ಮುಕ್ತಾಯದ ಬಳಿಕ ಬಹುಶಃ ಬೋರ್ ಅನ್ನಿಸಿದರೂ ಅನ್ನಿಸಬಹುದು!). ಆರಂಭಿಕ ಪಂದ್ಯ ಮಾರ್ಚ್ 23ರಂದು ಚೆನ್ನೈಯಲ್ಲಿ ಚೆನ್ನೈ-ಬೆಂಗಳೂರು ನಡುವೆ 8 pmಗೆ ಆರಂಭಗೊಳ್ಳಲಿದೆ.

ಸ್ಟಾರ್ ಸ್ಪೋರ್ಟ್ಸ್ ಸಿದ್ಧಪಡಿಸಿರುವ ಈ ಜಾಹೀರಾತಿನಲ್ಲಿ ರಾಯಲ್ಸ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡದ ಕ್ಯಾಪ್ಟನ್ ಎಂಎಸ್ ಧೋನಿ ಕಾಣಿಸಿಕೊಂಡಿದ್ದಾರೆ. ಆರಂಭಿಕ ಪಂದ್ಯದಲ್ಲಿ ಆರ್‌ಸಿಬಿ-ಸಿಎಸ್‌ಕೆ ಮುಖಾಮುಖಿ ಗಮನದಲ್ಲಿಟ್ಟುಕೊಂಡು ರೂಪುಗೊಂಡಿರುವ, ಕೆಂಪು-ಹಳದಿ ಬಣ್ಣಗಳ ಕತೆ ಉಸುರುವ ಈ ಕಲರ್‌ಫುಲ್ ಜಾಹೀರಾತು ನೋಡೋರಿಗೆ ಖುಷಿ ನೀಡುತ್ತೆ.

Story first published: Friday, March 15, 2019, 15:59 [IST]
Other articles published on Mar 15, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+