For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2019: ಈ ವಿಡಿಯೋ ನಿಮ್ಮಲ್ಲಿ ಧೋನಿ ಮೇಲಿನ ಅಭಿಮಾನ ಹೆಚ್ಚಿಸುತ್ತೆ!

IPL 2019: MS Dhoni wins hearts after this special gesture in Mumbai

ಮುಂಬೈ, ಏಪ್ರಿಲ್ 4: ಎಂಎಸ್ ಧೋನಿ ಯಾವತ್ತಿಗೂ ಕ್ರಿಕೆಟ್ ಪ್ರೇಮಿಗಳ ಮೆಚ್ಚಿನ ಆಟಗಾರನೆ. ಇದಕ್ಕೆ ಹಲವಾರು ಕಾರಣಗಳಿವೆ. ಆದರೆ ಕೂಲ್ ಕ್ಯಾಪ್ಟನ್ ಧೋನಿ ಮತ್ತು ಧೋನಿ ಅಭಿಮಾನಿಗಳಿರುವ ಈ ವಿಡಿಯೋ ಧೋನಿ ಮೇಲಿನ ಅಭಿಮಾನಿ ಇನ್ನೂ ಹೆಚ್ಚಿಸುವಂತಿದೆ.

ಮೈಖೇಲ್ ಕನ್ನಡ - ಐಪಿಎಲ್ 2019 'ವಿಶೇಷ ಮುಖಪುಟ'

ಬುಧವಾರ (ಏಪ್ರಿಲ್ 4) ಮುಂಬೈಯ ವಾಂಖೇಡೆ ಸ್ಟೇಡಿಯಂನಲ್ಲಿ ನಡೆದ ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವಣ ಐಪಿಎಲ್ ಪಂದ್ಯದ ವೇಳೆ ಸಿಎಸ್‌ಕೆ ನಾಯಕ ಧೋನಿ ಅಭಿಮಾನಿಗಳ ಜೊತೆ ಕಾಣಿಸಿಕೊಂಡಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ವಯಸ್ಸಾದ ಹೆಂಗಸೊಬ್ಬರು 'ಐ ಆ್ಯಮ್ ಹಿಯರ್ ಓನ್ಲಿ ಫಾರ್ ಧೋನಿ' (ನಾನಿಲ್ಲಿರೋದು ಧೋನಿಗಾಗಿ ಮಾತ್ರ) ಎಂದು ಬರೆದಿದ್ದ ಪೋಸ್ಟರ್ ಹಿಡಿದು ನಿಂತಿದ್ದರು. ಆಗ ಡ್ರೆಸ್ಸಿಂಗ್ ರೂಮ್‌ನಿಂದ ಹೊರ ಬಂದ ಧೋನಿ ಆ ವಯಸ್ಸಾದ ಹೆಂಗಸು ಮತ್ತೊಬ್ಬಳು ಯುವತಿಯ ಜೊತೆ ಜೊತೆ ಸೆಲ್ಫಿ ತೆಗೆದುಕೊಂಡರು, ಆಟೋಗ್ರಾಫ್ ನೀಡಿದರು. ಈ ವಿಡಿಯೋ ವೈರಲ್ ಆಗಿದೆ.

ಇಂಡಿಯನ್ ಪ್ರೀಮಿಯರ್ ಲೀಗ್ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲೂ ಈ ವಿಡಿಯೋವನ್ನು ಹಾಕಿಕೊಂಡಿದೆ. ಅಭಿಮಾನಿಗಳ ಜೊತೆ ಹಮ್ಮಿಲ್ಲದೆ ಬೆರೆಯುವ, ಅವರೊಟ್ಟಿಗೆ ಒಂದಷ್ಟು ಹೊತ್ತು ಕಳೆಯುವ, ಸಮಯ ಮೀಸಲಿಡುವ ಧೋನಿ ಬಗ್ಗೆ ಅಭಿಮಾನಿಗಳಲ್ಲಿ ಪ್ರೀತಿ ಇನ್ನಷ್ಟು ಹೆಚ್ಚಾಗಿರುವುದಂತೂ ನಿಜ.

Story first published: Thursday, April 4, 2019, 18:21 [IST]
Other articles published on Apr 4, 2019
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+