Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IPL 2019: ಮುಂಬೈ ಇಂಡಿಯನ್ಸ್ ನೂತನ ಜೆರ್ಸಿ ಬಿಡುಗಡೆ-ವಿಡಿಯೋ

IPL 2019: Mumbai Indians release jersey for the latest edition - Watch

ಮುಂಬೈ, ಫೆಬ್ರವರಿ 25: ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಬಿಟ್ಟರೆ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಅತೀ ಹೆಚ್ಚು ಟ್ರೋಫಿ ಗೆದ್ದ ತಂಡವಾಗಿ ಮುಂಬೈ ಇಂಡಿಯನ್ಸ್ ಗುರುತಿಸಿಕೊಂಡಿದೆ. ಎರಡೂ ತಂಡಗಳು ತಲಾ 3 ಸಾರಿ ಪ್ರಶಸ್ತಿ ಜಯಿಸಿವೆ. ಐಪಿಎಲ್ 12ನೇ ಆವೃತ್ತಿಗಾಗಿ ಮುಂಬೈ ಇಂಡಿಯನ್ಸ್ ತಂಡ ನೂತನ ಜೆರ್ಸಿ ಬಿಡುಗಡೆ ಮಾಡಿದೆ.

ಭಾನುವಾರ (ಫೆಬ್ರವರಿ 24) ಮುಂಬೈ ಇಂಡಿಯನ್ಸ್ ತನ್ನ ನೂತನ ಜೆರ್ಸಿ ಬಿಡುಗಡೆಗೊಳಿಸಿ ಅದರ ವಿಡಿಯೋವನ್ನು ಟ್ವಿಟರ್ ನಲ್ಲಿ ಹಾಕಿಕೊಂಡಿತ್ತು. ಹಿಂದಿನ ಜೆರ್ಸಿಗಿಂತ ಈಗಿನ ಜೆರ್ಸಿ ಕೊಂಚ ಭಿನ್ನವಾಗಿದೆ. ಟ್ವಿಟರ್ ವಿಡಿಯೋದಲ್ಲಿ ನಾಯಕ ರೋಹಿತ್ ಶರ್ಮಾ, ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ, ಕೃನಾಲ್ ಪಾಂಡ್ಯ, ವೇಗಿ ಜಸ್‌ಪ್ರೀತ್ ಬೂಮ್ರಾ ಕಾಣಿಸಿಕೊಂಡಿದ್ದಾರೆ.

ಮಾರ್ಚ್ 23ರಿಂದ ಐಪಿಎಲ್ ಪಂದ್ಯಾಟ ಆರಂಭಗೊಳ್ಳಲಿದೆ. ಸದ್ಯ ಐಪಿಎಲ್ ಆರಂಭಿಕ ಎರಡು ವಾರಗಳ ವೇಳಾಪಟ್ಟಿಯನ್ನಷ್ಟೇ ಬಿಸಿಸಿಐ ಬಿಡುಗಡೆಗೊಳಿಸಿದೆ. ಈ ವೇಳಾಪಟ್ಟಿಯ ಪ್ರಕಾರ ಮುಂಬೈ ಇಂಡಿಯನ್ಸ್ ತಂಡ ಮಾರ್ಚ್ 24ರಂದು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಮುಂಬೈಯಲ್ಲಿ ಮೊದಲ ಪಂದ್ಯವನ್ನಾಡಲಿದೆ. ಈ ಪಂದ್ಯ 6.30 pmಗೆ ಆರಂಭಗೊಳ್ಳಲಿದೆ.

Story first published: Monday, February 25, 2019, 13:42 [IST]
Other articles published on Feb 25, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+