18 ಆಟಗಾರರನ್ನು ಉಳಿಸಿಕೊಂಡು, 10 ಕೈಬಿಟ್ಟ ಮುಂಬೈ ಇಂಡಿಯನ್ಸ್

ಮುಂಬೈ, ನವೆಂಬರ್ 15 : ಇಂಡಿಯನ್ ಪ್ರೀಮಿಯರ್ ಲೀಗ್(ಐಪಿ ಎಲ್) 2019 ಟೂರ್ನಮೆಂಟ್ ಗಾಗಿ ಮುಂಬೈ ಇಂಡಿಯನ್ಸ್ ತಂಡದಲ್ಲಿ ಬದಲಾವಣೆ ಮಾಡಲಾಗಿದೆ. 18 ಮಂದಿ ಆಟಗಾರರನ್ನು ಉಳಿಸಿಕೊಂಡು, 10 ಮಂದಿ ಆಟಗಾರರನ್ನು ಕೈಬಿಟ್ಟಿದೆ.
10 ಮಂದಿ ಆಟಗಾರರಲ್ಲಿ 4 ಮಂದಿ ಅಂತಾರಾಷ್ಟ್ರೀಯ ಆಟಗಾರರಿದ್ದರೆ, ಒಬ್ಬರು ಮೊದಲ ಪಂದ್ಯ ಹಾಗೂ 5 ಮಂದಿ ಹೊಸ ಆಟಗಾರರಿದ್ದಾರೆ.
ಸ್ಫೋಟಕ ಬ್ಯಾಟಿಂಗಿಗೆ ಹೆಸರಾಗಿರುವ ಬೆನ್ ಕಟ್ಟಿಂಗ್, ಎವಿನ್ ಲೆವಿಸ್, ಮಿಚೆಲ್ ಮೆಕ್ ಕ್ಲೆನ್ಘನ್, ಆಡಂ ಮೆಲ್ನೆ, ಕಿರಾನ್ ಪೊಲ್ಲಾರ್ಡ್ ಅವರು ತಂಡದಲ್ಲಿದ್ದಾರೆ.
ಉಳಿದಂತೆ ಕೃನಾಲ್ ಪಾಂಡ್ಯ, ಜಸ್ ಪ್ರೀತ್ ಬೂಮ್ರಾ, ಮಾಯಾಂಕ್ ಮಾರ್ಕಂಡೆ, ಆದಿತ್ಯಾ ತಾರೆ, ಇಶಾನ್ ಕಿಶಾನ್, ರಾಹುಲ್ ಚಾಹರ್, ಅನುಕುಲ್ ರಾಯ್ ಹಾಗೂ ಸೂರ್ಯ ಕುಮಾರ್ ಯಾದವ್ ತಂಡಕ್ಕೆ ಆಧಾರವಾಗಿದ್ದಾರೆ.

ರೀಟೈನ್ ಆದ ಆಟಗಾರರು
ರೋಹಿತ್ ಶರ್ಮ(ನಾಯಕ), ಹಾರ್ದಿಕ್ ಪಾಂಡ್ಯ, ಜಸ್ ಪ್ರೀತ್ ಬೂಮ್ರಾ, ಕೃನಾಲ್ ಪಾಂಡ್ಯ, ಇಶಾನ್ ಕಿಶಾನ್(ವಿಕೆಟ್ ಕೀಪರ್), ಸೂರ್ಯಕುಮಾರ್ ಯಾದವ್, ಮಾಯಾಂಕ್ ಮಾರ್ಕಂಡೆ, ರಾಹುಲ್ ಚಾಹರ್, ಅನುಕುಲ್ ರಾಯ್, ಸಿದ್ದೇಶ್ ಲಾಡ್, ಆದಿತ್ಯಾ ತಾರೆ, ಕ್ವಿಂಟಾನ್ ಡಿ ಕಾಕ್, ಕಿರಾನ್ ಪೊಲ್ಲಾರ್ಡ್, ಬೆನ್ ಕಟ್ಟಿಂಗ್, ಮಿಚೆಲ್ ಮೆಕ್ ಕ್ಲೆನಘನ್, ಆಡಂ ಮೆಲ್ನೆ, ಜಾಸನ್ ಬೆಹ್ರೊನ್ ಡೊರ್ಫ್

ತಂಡದಿಂದ ಹೊರ ಹಾಕಲ್ಪಟ್ಟ ಆಟಗಾರರು
ಸೌರಬ್ ತಿವಾರಿ, ಪ್ರದೀಪ್ ಸಾಂಗ್ವಾನ್, ಮೊಹ್ಸಿನ್ ಖಾನ್, ಎಂಡಿ ನಿಧೇಶ್, ಶರದ್ ಲುಂಬಾ, ತಜಿಂದರ್ ಸಿಂಗ್ ಧಿಲ್ಲೋನ್, ಜೆಪಿ ಡುಮಿನಿ, ಪಾಟ್ ಕುಮಿನ್ಸ್, ಮುಸ್ತಫಿಜುರ್ ರಹಮಾನ್, ಅಕಿಲ ಧನಂಜಯ

ಇಂಡಿಯನ್ ಪ್ರೀಮಿಯರ್ 3 ಬಾರಿ ಗೆದ್ದಿದೆ
2013, 2015 ಹಾಗೂ 2017ರಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ ಕಪ್ ಎತ್ತಿರುವ ಮುಂಬೈ ಇಂಡಿಯನ್ಸ್ ತಂಡಕ್ಕೆ ಮತ್ತೊಮ್ಮೆ ರೋಹಿತ್ ಶರ್ಮ ನಾಯಕರಾಗಿದ್ದಾರೆ.

ಹಲವು ಆಟಗಾರರಿಗೆ ಕೊಕ್
ಸೌರಬ್ ತಿವಾರಿ, ಪ್ರದೀಪ್ ಸಾಂಗ್ವಾನ್, ಶರದ್ ಲಂಬಾ, ತಜೀಂದರ್ ಸಿಂಗ್ ದಿಲ್ಲೋನ್, ಯುಪಿ ವೇಗಿ ಮೊಹ್ಸೀನ್ ಖಾನ್, ಕೇರಳದ ಎಂಡಿ ನಿಧೇಶ್ ಅವರನ್ನು ತಂಡದಿಂದ ಕೈಬಿಡಲಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications