ಐಪಿಎಲ್ 2019: ಆರ್‌ಸಿಬಿ ಸಹಾಯಕ ಕೋಚ್ ಆಗಿ ಮಿಥುನ್ ಮನ್ಹಾಸ್ ಆಯ್ಕೆ


ಬೆಂಗಳೂರು, ಫೆಬ್ರವರಿ 13: ದೆಹಲಿಯ ಮಾಜಿ ಬ್ಯಾಟ್ಸ್ಮನ್ ಮಿಥುನ್ ಮನ್ಹಾಸ್ ಅವರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ತನ್ನ ತಂಡದ ಸಹಾಯಕ ಕೋಚ್ ಆಗಿ ನೇಮಿಸಿದೆ. ಇದಕ್ಕೂ ಮುನ್ನ ದಕ್ಷಿಣ ಆಫ್ರಿಕಾ ಮಾಜಿ ಆಟಗಾರ ಗ್ಯಾರಿ ಕಸ್ಟರ್ನ್ ಅವರನ್ನು ಬ್ಯಾಟಿಂಗ್‌ಗೆ ಕೋಚ್‌ನಿಂದ ಮುಖ್ಯಕೋಚ್ ಆಗಿ ಆರ್‌ಸಿಬಿ ನೇಮಿಸಿಕೊಂಡಿತ್ತು.
2008ರಲ್ಲಿ ಐಪಿಎಲ್ ಆರಂಭವಾದಾಗಿನಿಂದ ಹಿಡಿದು ಕಳೆದ ಸೀಸನ್‌ವರೆಗೂ ಒಂದೇ ಒಂದು ಸಾರಿ ಐಪಿಎಲ್ ಚಾಂಪಿಯನ್ ಪಟ್ಟ ಅಲಂಕರಿಸದ ಮೂರು (ಆರ್‌ಸಿಬಿ, ಡಿಸಿ, ಕೆXIಪಿ) ತಂಡಗಳಲ್ಲಿ ಆರ್‌ಸಿಬಿಯೂ ಒಂದು. ಹೀಗಾಗಿ ಈ ಬಾರಿ ಪ್ರಶಸ್ತಿ ಗೆಲ್ಲಲೇಬೇಕು ಅನ್ನೋ ಪಣತೊಟ್ಟಂತೆ ಬೆಂಗಳೂರು ಫ್ರಾಂಚೈಸಿ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ.
ತಾನು ಆರ್‌ಸಿಬಿ ಸಹ ಕೋಚ್ ಆಗಿ ನೇಮಕವಾಗಿರುವುದನ್ನು ಖಾತರಿ ಪಡಿಸಿರುವ ಮನ್ಹಾಸ್, 'ಈ ಐಪಿಎಲ್ ಸೀಸನ್‌ನಲ್ಲಿ ನಾವು ಪ್ರಶಸ್ತಿ ಗೆಲ್ಲಲೇಬೇಕನ್ನೋ ಗುರಿ ಹೊಂದಿದ್ದೇವೆ' ಎಂದು ಪ್ರತಿಕ್ರಿಯಿಸಿದರು. ಮುಖ್ಯ ಕೋಚ್ ಆಗಿ ಕಸ್ಟರ್ನ್, ಸಹ ಕೋಚ್ ಆಗಿ ಮಿಥುನ್, ಬೌಲಿಂಗ್ ಕೋಚ್ ಆಗಿ ಮಾಜಿ ವೇಗಿ ಆಶೀಶ್ ನೆಹ್ರಾ ಈಗ ಆರ್‌ಸಿಬಿ ತಂಡದಲ್ಲಿದ್ದಾರೆ. ಹೀಗಾಗಿ ಈ ಸಾರಿ ಕಪ್ ನಮ್ದೇ ಬಿಡಿ.
ಅಂದ್ಹಾಗೆ, ಹಿಂದೆ ಚೆನ್ನೈ ಸೂಪರ್ ಕಿಂಗ್ಸ್ ಪರ ಆಲ್‌ರೌಂಡರ್ ಆಗಿ ಆಡಿದ್ದ 39ರ ಹರೆಯದ ಮನ್ಹಾಸ್, 2017ರಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಸಹಾಯಕ ಕೋಚ್ ಹುದ್ದೆಯನ್ನು ನಿಭಾಯಿಸಿದ್ದರು. ಚೆನ್ನೈ ಹೊರತಾಗಿ ಡೆಲ್ಲಿ ಡೇರ್‌ಡೆವಿಲ್ಸ್, ಪುಣೆ ವಾರಿಯರ್ಸ್ ತಂಡದ ಪರವಾಗಿಯೂ ಆಡಿದ ಅನುಭವ ಹೊಂದಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications