ಜಗತ್ತಿನಲ್ಲಿ ಯಾವುದೇ ಮೈದಾನ ದೊಡ್ಡದಿಲ್ಲ ಎಂದು ನನಗನ್ನಿಸುತ್ತಿದೆ: ರಸೆಲ್

ಬೆಂಗಳೂರು, ಏಪ್ರಿಲ್ 6: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನಲ್ಲಿ ಅದ್ಭುತ ಪ್ರದರ್ಶನದ ಮೂಲಕ ಬೆರಗು ಮೂಡಿಸಿರುವ ಜಮೈಕಾ ಕ್ರಿಕೆಟಿಗ ಆ್ಯಂಡ್ರೆ ರಸೆಲ್, ಯಾವುದೇ ಗ್ರೌಂಡ್‌ಗಳು ದೊಡ್ಡದಿದೆ ಅಂತ ನನಗನ್ನಿಸುತ್ತಿಲ್ಲ ಎಂದಿದ್ದಾರೆ. ಕೋಲ್ಕತ್ತಾ ಪ್ರತಿನಿಧಿಸಿದ್ದ ರಸೆಲ್, ಬೆಂಗಳೂರು ವಿರುದ್ಧ ಮತ್ತೊಂದು ಅಸಾಧಾರಣ ಪ್ರದರ್ಶನ ನೀಡಿದ ಬಳಿಕ ಈ ಅಭಿಪ್ರಾಯ ವ್ಯಕ್ತಪಡಿಸಿದರು.
ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದಿದ್ದ ಐಪಿಎಲ್ 17ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ರಸೆಲ್ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದ್ದರು. ಕೇವಲ 13 ಎಸೆತಗಳಿಗೆ 48 ರನ್ ಚಚ್ಚಿದ್ದ ಆ್ಯಂಡ್ರೆ, ಆರ್‌ಸಿಬಿ ಗೆಲುವಿನಾಸೆಯನ್ನು ಮಣ್ಣುಪಾಲಾಗಿಸಿದ್ದಷ್ಟೇ ಅಲ್ಲ, ಬೆಂಗಳೂರಿಗೆ 5ನೇ ಸೋಲಿನ ಮುಖಭಂಗ ಅನುಭವಿಸುವಂತೆ ಮಾಡಿದ್ದರು.
ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಆತಿಥೇಯ ಬೆಂಗಳೂರು ವಿರಾಟ್ ಕೊಹ್ಲಿ (84 ರನ್), ಎಬಿ ಡಿ ಡಿವಿಲಿಯರ್ಸ್ (63) ಆಕರ್ಷಕ ಅರ್ಧಶತಕದ ನೆರವಿನೊಂದಿಗೆ 205 ರನ್ ಪೇರಿಸಿತ್ತು. ಗುರಿ ಬೆನ್ನಟ್ಟಿದ ಕೋಲ್ಕತ್ತಾ ಆರಂಭದಲ್ಲೇ ವಿಕೆಟ್‌ಗಳನ್ನು ಕಳೆದು ಆಘಾತ ಅನುಭವಿಸಿತ್ತು. ಕೆಕೆಆರ್ ಗೆಲ್ಲುವ ಸಾಧ್ಯತೆ ತೀರಾ ಕಡಿಮೆ ಎನ್ನುವ ಪರಿಸ್ಥಿತಿಯಿತ್ತು. ಆದರೆ ಅಂತಿಮ 3ನೇ ಓವರ್‌ನಲ್ಲಿ ರಸೆಲ್ ಪಂದ್ಯದ ಗತಿಯನ್ನೇ ತಿರುಗಿಸಿದ್ದರು. ಕೋಲ್ಕತ್ತಾವನ್ನು 5 ವಿಕೆಟ್‌ಗಳಿಂದ ಗೆಲ್ಲಿಸಿದ್ದರು.
ಪಂದ್ಯದ ಬಳಿಕ ಮಾತನಾಡಿದ ಆ್ಯಡ್ರೆ, 'ಆಸ್ಟ್ರೇಲಿಯಾದ ಕೆಲ ಮೈದಾನಗಳಲ್ಲೂ ನಾನು ದೊಡ್ಡ ಹೊಡೆತಗಳನ್ನು ಬಾರಿಸಿದ್ದೇನೆ. ನನ್ನ ಹೊಡೆತವನ್ನು ಹಿಮ್ಮೆಟ್ಟಿಸುವಷ್ಟು ದೊಡ್ಡ ಗ್ರೌಂಡ್ ಇದೆ ಎಂದು ನನಗನ್ನಿಸುತ್ತಿಲ್ಲ. ಅಷ್ಟರ ಮಟ್ಟಿಗೆ ನನಗೆ ನನ್ನ ಶಕ್ತಿ ಮತ್ತು ಸಾಮರ್ಥ್ಯದ ಬಗ್ಗೆ ನಂಬಿಕೆಯಿದೆ' ಎಂದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications