ಐಪಿಎಲ್ 2019: ಚೆನ್ನೈ ಸ್ಟೇಡಿಯಂನಲ್ಲಿ ಇತಿಹಾಸ ಬರೆದ ಆರ್ ಅಶ್ವಿನ್

ಚೆನ್ನೈ, ಏಪ್ರಿಲ್ 6: ಚೆನ್ನೈಯ ಚೆಪಕ್ ಸ್ಟೇಡಿಯಂನಲ್ಲಿ ನಡೆದ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಕಿಂಗ್ಸ್ ಇಲೆವೆನ್ ಪಂಜಾಬ್ ನಡುವಿನ ಪಂದ್ಯದಲ್ಲಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅಪರೂಪದ ದಾಖಲೆಯನ್ನು ನಿರ್ಮಿಸಿದ್ದಾರೆ. ಈ ಮೈದಾನದಲ್ಲಿ ಅಶ್ವಿನ್ ಟಿ20 50+ ವಿಕೆಟ್‌ಗಳನ್ನು ಪಡೆದ ಸಾಧನೆಗೆ ಕಾರಣರಾದರು.
ಐಪಿಎಲ್ 19ನೇ ಪಂದ್ಯ, ಮುಂಬೈ vs ಹೈದರಾಬಾದ್, Live ಸ್ಕೋರ್‌ಕಾರ್ಡ್
ಶನಿವಾರ (ಏಪ್ರಿಲ್ 6) ನಡೆದ ಐಪಿಎಲ್ 18ನೇ ಪಂದ್ಯದಲ್ಲಿ ಪಂಜಾಬ್ ನಾಯಕ ಅಶ್ವಿನ್ 4 ಓವರ್ ಎಸೆದು 23 ರನ್ ನೀಡಿ ಚೆನ್ನೈಯ 3 ವಿಕೆಟ್ ಮುರಿದಿದ್ದರು. ಇದರೊಂದಿಗೆ ಚೆಪಕ್ ಸ್ಟೇಡಿಯಂನಲ್ಲಿ ಟಿ20 5೦+ ವಿಕೆಟ್ ಪಡೆದ ಮೊದಲ ಕ್ರಿಕೆಟಿಗನಾಗಿ ಇತಿಹಾಸ ಬರೆದರು.
ಚೆಪಕ್ ಸ್ಟೇಡಿಯಂನಲ್ಲಿ ಐಪಿಎಲ್ ಅತ್ಯಧಿಕ ವಿಕೆಟ್ ಪಡೆದವರಲ್ಲೂ ಆರ್ ಅಶ್ವಿನ್ ಮೊದಲ ಸ್ಥಾನದಲ್ಲಿದ್ದಾರೆ. ಈ ಮೈದಾನದಲ್ಲಿ ಅಶ್ವಿನ್ ಒಟ್ಟು 46 ವಿಕೆಟ್ ಪಡೆದಿದ್ದರೆ, ಡ್ವೇನ್ ಬ್ರಾವೋ 44, ಅಲ್ಬಿ ಮಾರ್ಕೆಲ್ 36, ಡೌಗ್ ಬೋಲಿಂಜರ್ 20 ವಿಕೆಟ್ ಸಾಧನೆ ಹೊಂದಿದ್ದಾರೆ.
ಟಿ20ಯಲ್ಲಿ ಒಟ್ಟಾರೆ ಪಂದ್ಯಗಳನ್ನು ಪರಿಗಣಿಸಿದರೆ ಚೆಪಕ್ ಸ್ಟೇಡಿಯಂನಲ್ಲಿ ಅಶ್ವಿನ್ ಒಟ್ಟು 51 ವಿಕೆಟ್‌ಗಳನ್ನು ಕೆಡವಿದ್ದಾರೆ. ಶನಿವಾರದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ 160 ರನ್ ಗಳಿಸಿತ್ತು. ಗುರಿ ಬೆನ್ನಟ್ಟಿದ ಪಂಜಾಬ್ 138 ರನ್ ಗಳಿಸಿ 22 ರನ್‌ಗಳಿಂದ ಸೋಲೊಪ್ಪಿಕೊಂಡಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications