Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಚೆನ್ನೈ ಗೆಲುವಿನ ನಾಗಾಲೋಟಕ್ಕೆ ರಾಯಲ್ಸ್ ನಿಂದ ಬ್ರೇಕ್?

IPL 2019, Rajasthan Royals vs Chennai Super Kings : Probable XIs, Match Prediction

ಜೈಪುರ, ಏಪ್ರಿಲ್ 11: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್ ) 2019ರ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ನ ಗೆಲುವಿನ ನಾಗಲೋಟಕ್ಕೆ ಬ್ರೇಕ್ ಹಾಕಲು 'ಡಾರ್ಕ್ ಹಾರ್ಸ್' ರಾಜಸ್ಥಾನ್ ರಾಯಲ್ಸ್ ಸಜ್ಜಾಗುತ್ತಿದೆ.

ಸವಾಯಿ ಮಾನ್ ಸಿಂಗ್ ಸ್ಟೇಡಿಯಂನಲ್ಲಿ ಅಗ್ರಸ್ಥಾನದಲ್ಲಿರುವ ಚೆನ್ನೈ ತಂಡದ ವಿರುದ್ಧ ರಾಜಸ್ಥಾನ್ ರಾಯಲ್ಸ್ ಸೇಡು ತೀರಿಸಿಕೊಳ್ಳಲು ಕಾದಿದೆ. ಚೆಪಾಕ್ ನಲ್ಲಿ 8 ರನ್ ಗಳ ಗೆಲುವು ಸಾಧಿಸಿದ್ದ ಚೆನ್ನೈ ಸಹಜವಾಗಿ ಬಲಿಷ್ಠ ತಂಡವಾಗಿದೆ.

ಕಳೆದ ಪಂದ್ಯದಲ್ಲಿ ಕೆಕೆಆರ್ ವಿರುದ್ಧ ರಾಜಸ್ಥಾನ್ 8 ವಿಕೆಟ್ ಗಳ ಸೋಲು ಕಂಡಿದೆ. ಆದರೆ, ಸ್ಮಿತ್ 73ರನ್ ಗಳಿಸಿ ಲಯಕ್ಕೆ ಮರಳಿದ್ದಾರೆ. ಇನ್ನೊಂದೆಡೆ ಕೆಕೆಆರ್ ವಿರುದ್ಧ ಚೆನ್ನೈ ಗೆಲುವು ಸಾಧಿಸಿದ್ದು, ಹಿರಿಯ ಸ್ಪಿನ್ನರ್ ಗಳನ್ನು ಸೂಕ್ತವಾಗಿ ಬಳಸಿಕೊಳ್ಳುತ್ತಿದೆ.

ಈ ಮೈದಾನದಲ್ಲಿ ಮೊದಲು ಬ್ಯಾಟಿಂಗ್ ಮಾಡಿದವರ ರನ್ ಸರಾಸರಿ 156ರನ್ ಹಾಗೂ ಎರಡನೇ ಇನ್ನಿಂಗ್ಸ್ 143ರನ್ ನಷ್ಟಿದೆ. ಉಭಯ ತಂಡಗಳು 21 ಬಾರಿ ಮುಖಾಮುಖಿಯಾಗಿದ್ದು, ರಾಜಸ್ಥಾನ್ 8 ಬಾರಿ ಹಾಗೂ ಚೆನ್ನೈ 13 ಬಾರಿ ಗೆಲುವು ಸಾಧಿಸಿವೆ. ಆದರೆ, ಈ ಮೈದಾನದಲ್ಲಿ 6 ಬಾರಿ ಮುಖಾಮುಖಿಯಾಗಿದ್ದು, ರಾಜಸ್ಥಾನ್ 4 ಬಾರಿ ಹಾಗೂ ಚೆನ್ನೈ 2 ಬಾರಿ ಮಾತ್ರ ಜಯ ದಾಖಲಿಸಿದೆ.

ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಸಂಜು ಸಾಮ್ಸನ್, ಉನದ್ಕತ್ ಸೇರ್ಪಡೆ ಸಾಧ್ಯತೆಯಿದೆ. ಚೆನ್ನೈ ತಂಡಕ್ಕೆ ವೇಗಿ ಶಾರ್ದೂಲ್ ಠಾಕೂರ್ ಆಡಬಹುದು

ಚೆನ್ನೈ ಸೂಪರ್ ಕಿಂಗ್ಸ್

ಶೇನ್ ವಾಟ್ಸನ್, ಫಾಫ್ ಡು ಪ್ಲೆಸಿಸ್, ಸುರೇಶ್ ರೈನಾ, ಅಂಬಟಿ ರಾಯುಡು, ಕೇದಾರ್ ಜಾಧವ್, ಎಂಎಸ್ ಧೋನಿ(ನಾಯಕ, ವಿಕೆಟ್ ಕೀಪರ್), ಸ್ಕಾಟ್ ಕುಗ್ಗೆಲೆನ್, ರವೀಂದ್ರ ಜಡೇಜ, ದೀಪಕ್ ಚಾಹರ್, ಹರ್ಭಜನ್ ಸಿಂಗ್/ ಶಾರ್ದೂಲ್ ಠಾಕೂರ್, ಇಮ್ರಾನ್ ತಾಹೀರ್.

1
45901

ರಾಜಸ್ಥಾನ್ ರಾಯಲ್ಸ್

ಅಜಿಂಕ್ಯ ರಹಾನೆ(ನಾಯಕ), ಪ್ರಶಾಂತ್ ಛೋಪ್ರಾ/ ಸಂಜು ಸಾಮ್ಸನ್, ಸ್ಟೀವ್ ಸ್ಮಿತ್, ಜೋಸ್ ಬಟ್ಲರ್ (ವಿಕೆಟ್ ಕೀಪರ್), ಬೆನ್ ಸ್ಟೋಕ್ಸ್, ಮಿದುನ್/ಜಯದೇವ್ ಉನದ್ಕತ್, ಧವಳ್ ಕುಲಕರ್ಣಿ, ರಾಹುಲ್ ತ್ರಿಪಾಠಿ, ಶ್ರೇಯಸ್ ಗೋಪಾಲ್, ಕೆ ಗೌತಮ್, ಜೊಫ್ರಾ ಆರ್ಚರ್.

Story first published: Thursday, April 11, 2019, 14:46 [IST]
Other articles published on Apr 11, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+