Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಪಿಎಲ್: ಆರ್‌ಸಿಬಿ ಆಟಗಾರರಿಗೆ ಕಂಡೀಷನಿಂಗ್ ಕ್ಯಾಂಪ್, ಯೋ ಯೋ ಟೆಸ್ಟ್!

IPL 2019: RCB’s domestic players set to undergo Yo-Yo test at conditioning camp

ಬೆಂಗಳೂರು, ಫೆಬ್ರವರಿ 5: ಮಾರ್ಚ್ ತಿಂಗಳಿನಿಂದ ಐಪಿಎಲ್ 12ನೇ ಆವೃತ್ತಿ ಆರಂಭಗೊಳ್ಳಿದ್ದು, ಅದ್ದೂರಿ ಟೂರ್ನಿಯೆಡೆಗಿನ ಕ್ರೇಜ್ ಕಾವೇರ ತೊಡಗಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡ ಈ ಜನಪ್ರಿಯ ಕ್ರಿಕೆಟ್‌ಗೆ ಸಜ್ಜಾಗುತ್ತಿದೆ. ಆರ್ಸಿಬಿ ತಂಡದ ಪ್ರಮುಖ ಆಟಗಾರರು ಕಂಡೀಷನಿಂಗ್ ಕ್ಯಾಂಪ್‌ನಲ್ಲಿ ಪಾಲ್ಗೊಳ್ಳುತ್ತಿದ್ದಾರೆ.

ತಂಡದ ಒಟ್ಟು ಎಂಟು ಮಂದಿ ಪ್ರಮುಖ ಆಟಗಾರರು ಕ್ಯಾಂಪ್‌ನಲ್ಲಿ ಭಾಗವಹಿಸುತ್ತಿದ್ದಾರೆ. ಇವರಲ್ಲಿ 16ರ ಹರೆಯದ ಬೆಂಗಾಲ್ ಆಟಗಾರ ಪ್ರಯಾಸ್ ರಾಯ್ ಬರ್ಮನ್ ಮತ್ತು ರಣಜಿಯಲ್ಲಿ ಗಮನ ಸೆಳೆದಿದ್ದ ಮಿಲೀಂದ್ ಕುಮಾರ್ ಕೂಡ ಇರಲಿದ್ದಾರೆ ಎಂದು ತಿಳಿದು ಬಂದಿದೆ.

ಉತ್ತರ ಪ್ರದೇಶ ತಂಡದ ನಾಯಕ ಅಕ್ಷದೀಪ್ ನಾಥ್, ಮುಂಬೈ ಆಲ್‌ ರೌಂಡರ್ ಶಿವಂ ದೂಬೆ, ದೆಹಲಿಯ ಪ್ರತಿಭಾನ್ವಿತ ಬ್ಯಾಟ್ಸ್ಮನ್ ಹಿಮ್ಮತ್ ಸಿಂಗ್, ಬೌಲರ್ ಕುಲವಂತ್ ಖೆಜ್ರೋಲಿಯಾ, ತಮಿಳುನಾಡಿನ ವಾಷಿಂಗ್ಟನ್ ಸುಂದರ್ ಮತ್ತು ಕರ್ನಾಟಕದ ದೇವದತ್ ಪಡಿಕಲ್ ಕೂಡ ಎಂಟು ಮಂದಿಯ ಶಿಬಿರಾರ್ಥಿಗಳಲ್ಲಿ ಸೇರಿದ್ದಾರೆ.

ತಂಡದ ತರಬೇತುದಾರರಾದ ಗ್ಯಾರಿ ಕಸ್ಟರ್ನ್ ಮತ್ತು ಆಶೀಷ್ ನೆಹ್ರಾ ಆಟಗಾರರ ಪ್ರಗತಿಯ ಜವಾಬ್ದಾರಿ ಹೊರಲಿದ್ದಾರೆ. ಕ್ಯಾಂಪ್‌ನಲ್ಲಿ ಪಾಲ್ಗೊಳ್ಳುವ ಆಟಗಾರರಿಗೆ ಯೋ ಯೋ ಟೆಸ್ಟ್ ಕೂಡ ನಡೆಸಲಾಗುತ್ತದೆ. ಐದು ದಿನಗಳ ಕ್ಯಾಂಪ್ ಇದಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

Story first published: Tuesday, February 5, 2019, 12:10 [IST]
Other articles published on Feb 5, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+