Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಡೆಲ್ಲಿ ವಿರುದ್ಧ ಬೆಂಗಳೂರು ತಂಡದ ಈ 11 ಮಂದಿ ಗೆಲ್ಲಿಸಬಲ್ಲರೇ?

IPL 2019, RCB vs DC: Probable XIs, Match Prediction

ಬೆಂಗಳೂರು, ಏಪ್ರಿಲ್ 07: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್ ) 2019ರಲ್ಲಿ ಮೊದಲ ಗೆಲುವಿನ ಹುಡುಕಾಟದಲ್ಲಿರುವ ವಿರಾಟ್ ಕೊಹ್ಲಿ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ಕಣಕ್ಕಿಳಿಯುತ್ತಿದೆ.

ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯದಲ್ಲಿ ಯಾವುದು ನೆಚ್ಚಿನ ತಂಡ ಎಂದು ಹೇಳುವುದು ಕಷ್ಟ. ಆದರೆ, ಈ ಬಾರಿಯ ಐಪಿಎಲ್ ನಲ್ಲಿ ಡೆಲ್ಲಿ ಗೆಲುವಿನ ರುಚಿ ಕಂಡಿದೆ. ಗೆಲುವಿನ ಹೊಸ್ತಿಲಿಗೆ ಬಂದು ಪಂದ್ಯ ಸೋತಿದೆ.

ಇಲ್ಲಿ ತನಕ ಐಪಿಎಲ್ ನಲ್ಲಿ ಉಭಯ ತಂಡಗಳು 22 ಬಾರಿ ಮುಖಾಮುಖಿಯಾಗಿದ್ದು, ಅರ್ ಸಿಬಿ 15 ಬಾರಿ, ಡಿಸಿ 6 ಬಾರಿ ಗೆಲುವು ಸಾಧಿಸಿವ್ ಒಂದು ಪಂದ್ಯದಲ್ಲಿ ಫಲಿತಾಂಶ ಹೊರ ಬಂದಿಲ್ಲ. ಬೆಂಗಳೂರಿನಲ್ಲಿ 10 ಪಂದ್ಯಗಳು ನಡೆದಿದ್ದು ಇದರಲ್ಲಿ 6 ಆರ್ ಸಿಬಿ, 3 ಡಿಸಿ ಹಾಗೂ 1 ಪಂದ್ಯ ಫಲಿತಾಂಶವಿಲ್ಲ.

2018ರ ಮೇ 12ರಂದು ಕಳೆದ ಬಾರಿ ಎದುರಾದಾಗ ಅರ್ ಸಿಬಿ 187/5, ಡಿಸಿ 181/4, ಎಬಿ ಡಿ ವಿಲಿಯರ್ಸ್ 37 ಎಸೆತಗಳಲ್ಲಿ 72ರನ್ ಗಳಿಸಿದ್ದರು

ಅರ್ ಸಿಬಿ ತಂಡದಲ್ಲಿ ವೇಗಿಗಳಾದ ಟಿ ಸೌಥಿ, ಮೊಹಮ್ಮದ್ ಸಿರಾಜ್, ಉಮೇಶ್ ಯಾದವ್ ಅವರು ರನ್ ನಿಯಂತ್ರಿಸಲು ವಿಫಲರಾಗಿದ್ದಾರೆ. ವೇಗಿಗಳನ್ನು ಬದಲಾಯಿಸಬಹುದು. ಯಜುವೇಂದ್ರ ಚಾಹಲ್ ಗೆ ಪವನ್ ನೇಗಿ ಸಾಥ್ ನೀಡಬಲ್ಲರು,

ಡೆಲ್ಲಿ ತಂಡದಲ್ಲಿ ಹೆಚ್ಚಿನ ಬದಲಾವಣೆ ನಿರೀಕ್ಷೆಯಿಲ್ಲ. ಸ್ಪಿನ್ನರ್ ಸಂದೀಪ್, ಅಮಿತ್ ಮಿಶ್ರಾ ಇಬ್ಬರಲ್ಲಿ ಒಬ್ಬರು ಆಡುವ ನಿರೀಕ್ಷೆಯಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ
ಪಾರ್ಥೀವ್ ಪಟೇಲ್(ವಿಕೆಟ್ ಕೀಪರ್), ವಿರಾಟ್ ಕೊಹ್ಲಿ(ನಾಯಕ) ಎಬಿ ಡಿ ವಿಲಿಯರ್ಸ್, ಮೋಯಿನ್ ಅಲಿ, ಮಾರ್ಕೊಸ್ ಸ್ಟೋಯಿನಿಸ್, ಅಕ್ಷಯ್ ದೀಪ್ ನಾಥ್, ಉಮೇಶ್ ಯಾದವ್, ಯಜುವೇಂದ್ರ ಚಾಹಲ್, ನವದೀಪ್ ಸೈನಿ, ಪವನ್ ನೇಗಿ, ಟಿಮ್ ಸೌಥಿ

1
45896

ಡೆಲ್ಲಿ ತಂಡ
ಶಿಖರ್ ಧವನ್, ಪೃಥ್ವಿ ಶಾ, ಶ್ರೇಯಸ್ ಆಯ್ಯರ್ (ನಾಯಕ), ರಿಷಬ್ ಪಂತ್, ಕಾಲಿನ್ ಇನ್ ಗ್ರಾಮ್, ಅಕ್ಷರ್ ಪಟೇಲ್, ರಾಹುಲ್ ತೆವಾಟಿಯಾ, ಹರ್ಷಲ್ ಪಟೇಲ್/ ಇಶಾಂತ್ ಶರ್ಮ, ಕ್ರಿಸ್ ಮೊರಿಸ್, ಕಾಗಿಸೋ ರಬಾಡಾ, ಸಂದೀಪ್ ಲಾಮಿಚಾನೆ

Story first published: Sunday, April 7, 2019, 15:57 [IST]
Other articles published on Apr 7, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+