ಆಕರ್ಷಕ ಕ್ಯಾಚ್‌ನಿಂದ ಕ್ರಿಸ್‌ಲಿನ್ ವಿಕೆಟ್ ಮುರಿದ ರಿಷಬ್ ಪಂತ್: ವಿಡಿಯೋ

ನವದೆಹಲಿ, ಮಾರ್ಚ್ 30: ನವದೆಹಲಿಯ ಫಿರೋಜಾ ಶಾ ಕೋಟ್ಲಾ ಸ್ಟೇಡಿಯಂನಲ್ಲಿ ನಡೆದ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಐಪಿಎಲ್ ಪಂದ್ಯದಲ್ಲಿ ವಿಕೆಟ್ ಕೀಪರ್ ಪಂತ್ ಆಕರ್ಷಕ ಕ್ಯಾಚ್ ಮೂಲಕ ಕೋಲ್ಕತ್ತಾ ಬ್ಯಾಟ್ಸ್ಮನ್ ಕ್ರಿಸ್‌ಲಿನ್ ಅವರನ್ನು ಪೆವಿಲಿಯನ್‌ಗೆ ಅಟ್ಟಿದರು.
ಕೋಲ್ಕತ್ತ ನೈಟ್ ರೈಡರ್ಸ್ vs ಡೆಲ್ಲಿ ಕ್ಯಾಪಿಟಲ್ಸ್ Live Score ಕೆಳಗಿದೆ
ಶನಿವಾರ (ಮಾರ್ಚ್ 30) ನಡೆದ ಡೆಲ್ಲಿ-ಕೋಲ್ಕತ್ತಾ ನಡುವಿನ ಐಪಿಎಲ್ 10ನೇ ಪಂದ್ಯದಲ್ಲಿ ಕೆಕೆಆರ್ ಇನ್ನಿಂಗ್ಸ್ ವೇಳೆ 7ನೇ ಓವರ್ ಎಸೆಯಲು ಕಾಗಿಸೋ ರಬಾಡಾ ಬಂದಿದ್ದರು. ರಬಾಡಾ, ಓವರ್‌ನ 5ನೇ ಎಸೆತ ಎಸೆದರು. ಆಗ ಸ್ಟ್ರೈಕ್‌ನಲ್ಲಿದ್ದ ಕ್ರಿಸ್‌ಲಿನ ಪುಲ್ ಶಾಟ್ ಹೊಡೆದರು.
ಕ್ರಿಸ್ ಲಿನ್ ಬ್ಯಾಟ್ ತಾಗಿದ ಚೆಂಡು ಕೀಪರ್ ನಿಂತಿಲ್ಲಿಗೆ ಮೇಲೆ ಚಿಮ್ಮಿತು. ಆಗ ಜಿಗಿದ ಪಂತ್ ಅದ್ಭುತ ರೀತಿಯಲ್ಲಿ ಚೆಂಡನ್ನು ಹಿಡಿದರು. ಪಂತ್ ಕ್ಯಾಚ್ ಮಾಡಿದ್ದನ್ನು ಕಂಡು ರಬಾಡಾ ಮುಖದಲ್ಲೂ ಹರ್ಷ ವ್ಯಕ್ತವಾಯಿತು. ಪಂದ್ಯದಲ್ಲಿ ಪಂತ್, ದಿನೇಶ್ ಕಾರ್ತಿಕ್ ಕ್ಯಾಚ್ ಕೂಡ ಸೇರಿ ಒಟ್ಟು 2 ಕ್ಯಾಚ್ ಪಡೆದರು (ಟ್ವಿಟರ್ ನಲ್ಲಿರುವ ವಿಡಿಯೋ ಲಿಂಕ್ ಅನುಸರಿಸಿ).
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications