ಐಪಿಎಲ್ 2019: 'ಆರ್‌ಸಿಬಿ' ತಂಡಕ್ಕೆ ಬೇಕಾದವರು, ಬೇಡವಾದವರ ಪಟ್ಟಿ!

ಬೆಂಗಳೂರು, ನವೆಂಬರ್ 15: ಐಪಿಎಲ್ 12ನೇ ಆವೃತ್ತಿಯ ಕಾವೇರುತ್ತಿದ್ದು, ರಾಯಲ್ ಚಾಲೆಂಜರ್ಸ್ ಬೆಂಗಳೂರು ಕೂಡ ತನ್ನ ತಂಡದಲ್ಲಿನ ಆಟಗಾರರಲ್ಲಿ ಬದಲಾವಣೆ ಮಾಡಿಕೊಂಡಿದೆ. ಇಲ್ಲಿ ಹೊರ ಹೋದವರಿಗಿಂತ ಉಳಿಸಿಕೊಂಡವರ ಪಟ್ಟಿ ದೊಡ್ಡದಿದೆ.
ಕೊಹ್ಲಿ ನಾಯಕತ್ವದ ಆರ್ಸಿಬಿಗೆ ಆಸ್ಟ್ರೇಲಿಯಾ ಆಟಗಾರ ಮಾರ್ಕಸ್ ಸ್ಟೊಯಿನಿಸ್ ಸೇರಿಕೊಂಡಿದ್ದಾರೆ. ಆದರೆ ಕ್ವಿಂಟನ್ ಡಿಕಾಕ್ ಅವರನ್ನು ಮುಂಬೈ ಇಂಡಿಯನ್ಸ್ ಗೆ 2.8 ಕೋ.ರೂ.ಗೆ ಆರ್ಸಿಬಿ ಮಾರಾಟ ಮಾಡಿದೆ. ಮನ್‌ದೀಪ್ (1.4 ಕೋ.ರೂ) ಅವರನ್ನು ಪಂಜಾಬ್‌ಗೆ ಮಾರಾಟ ಮಾಡಿರುವ ಆರ್ಸಿಬಿ, ಪಂಜಾಬ್‌ನಿಂದ ಸ್ಟೊಯಿನಿಸ್ ಅವರನ್ನು 6.2 ಕೋ.ರೂ.ಗೆ ಬದಲಿಸಿಕೊಂಡಿದೆ.
ಬೇಡವಾದವರು: ಕ್ವಿಂಟನ್ ಡಿ ಕಾಕ್, ಮನ್ದೀಪ್ ಸಿಂಗ್, ಬ್ರೆಂಡನ್ ಮೆಕಲಮ್, ಕ್ರಿಸ್ ವೋಕ್ಸ್, ಕೋರಿ ಆಂಡರ್ಸನ್, ಸರ್ಫ್ರಾಜ್ ಖಾನ್. ಒಳ ಬಂದವರು: ಮಾರ್ಕಸ್ ಸ್ಟೊಯಿನಿಸ್.
ಬೇಕಾದವರು/ಉಳಿಸಿಕೊಂಡವರು: ವಿರಾಟ್ ಕೊಹ್ಲಿ, ಎಬಿ ಡಿ ವಿಲಿಯರ್ಸ್, ಪಾರ್ಥಿವ್ ಪಟೇಲ್, ವಾಷಿಂಗ್ಟನ್ ಸುಂದರ್, ಪವನ್ ನೇಗಿ, ಮೊಯೆನ್ ಅಲಿ, ಕೋಲಿನ್ ಡಿ ಗ್ರಾಂಡ್ಹೋಮ್, ಯುಜುವೇಂದ್ರ ಚಾಹಲ್ ಚಾಹಲ್, ಮೊಹಮ್ಮದ್ ಸಿರಾಜ್, ಟಿಮ್ ಸೌಥಿ, ಉಮೇಶ್ ಯಾದವ್, ನವದೀಪ್ ಸೈನಿ, ಕುಲ್ವಂತ್ ಖೇಜೋಲಿಯ, ನಥನ್ ಕೌಲ್ಟರ್-ನೈಲ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications