
ಹೈದರಾಬಾದ್, ಮಾರ್ಚ್ 29: ರಾಜಸ್ಥಾನ್ ರಾಯಲ್ಸ್ (ಆರ್‌ಆರ್) ಪ್ರತಿನಿಧಿಸಿದ್ದ ಕೇರಳದ ಯುವ ಕ್ರಿಕೆಟಿಗ ಸಂಜು ಸ್ಯಾಮ್ಸನ್ ಅವರು ಐಪಿಎಲ್ 2019ರ ಚೊಚ್ಚಲ ಶತಕ ಬಾರಿಸಿ ಮಿಂಚಿದರು. ಹೈದರಾಬಾದ್‌ನಲ್ಲಿ ನಡೆದ ಐಪಿಎಲ್ 8ನೇ ಪಂದ್ಯದಲ್ಲಿ ಸ್ಯಾಮ್ಸನ್ ಮೂಲಕ ಟೂರ್ನಿಯ ಮೊದಲ ಶತಕ ದಾಖಲಿಸಲ್ಪಟ್ಟಿತು.
ಐಪಿಎಲ್ 2019: ಹೈದರಾಬಾದ್ vs ರಾಜಸ್ಥಾನ್, Live ಸ್ಕೋರ್‌ಕಾರ್ಡ್
ಹೈದರಾಬಾದ್‌ನ ರಾಜೀವ್ ಗಾಂಧಿ ಇಂಟರ್ ನ್ಯಾಷನಲ್ ಸ್ಟೇಡಿಯಂನಲ್ಲಿ ಶುಕ್ರವಾರ (ಮಾರ್ಚ್ 29) ನಡೆದ ಸನ್ ರೈಸರ್ಸ್ ಹೈದರಾಬಾದ್ ಮತ್ತು ರಾಜಸ್ಥಾನ್ ರಾಯಲ್ಸ್ ತಂಡಗಳ ನಡುವಿನ ಪಂದ್ಯದಲ್ಲಿ ಸ್ಯಾಮ್ಸನ್ 55 ಎಸೆತಗಳಿಗೆ 102 ರನ್ ಸಿಡಿಸಿದರು. ಐಪಿಎಲ್‌ನಲ್ಲಿ ಸಂಜು ದಾಖಲಿಸಿದ ಎರಡನೇ ಶತಕವಿದು.
ಸನ್ ರೈಸರ್ಸ್ ವಿರುದ್ಧದ ಈ ಪಂದ್ಯದಲ್ಲಿ ಸಂಜು ಶತದ ನರವಿನೊಂದಿಗೆ ರಾಜಸ್ಥಾನ್ 20 ಓವರ್‌ಗೆ 2 ವಿಕೆಟ್ ಕಳೆದು 198 ರನ್ ಗಳಿಸಿತು. ಐಪಿಎಲ್‌ನಲ್ಲಿ 78 ಇನ್ನಿಂಗ್ಸ್‌ಗಳಲ್ಲಿ ಸ್ಯಾಮ್ಸನ್ 127.23 ಸ್ಟ್ರೈಕ್‌ರೇಟ್‌ನಂತೆ 26.72ರ ಸರಾಸರಿಯಲ್ಲಿ 1897 ರನ್ ಕಲೆ ಹಾಕಿದ್ದಾರೆ. ವಿಶ್ವಕಪ್ ನೆಲೆಯಲ್ಲಿ ಬಿಸಿಸಿಐಯು ಸಂಜುವಿನತ್ತ ಗಮನ ಹರಿಸುವಂತಾಗಿದೆ ಎಂಬ ಮಾತುಗಳು ಕ್ರಿಕೆಟ್ ವಲಯದಲ್ಲಿ ಕೇಳಿ ಬಂದಿವೆ.