ಐಪಿಎಲ್ 2019ರ ಪೂರ್ಣ ವೇಳಾಪಟ್ಟಿ ಪ್ರಕಟಗೊಳ್ಳದ್ದಕ್ಕೆ ಕಾರಣ ಬಹಿರಂಗ

ನವದೆಹಲಿ, ಫೆಬ್ರವರಿ 13: ಚುನಾವಣೆಯ ದಿನಾಂಕಗಳು ಪ್ರಕಟಗೊಂಡ ಬಳಿಕ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2019ರ ಸಂಪೂರ್ಣ ವೇಳಾಪಟ್ಟಿ ಪ್ರಕಟಗೊಳಿಸಲಾಗುತ್ತದೆ. ಟೂರ್ನಿಯ ಎಲ್ಲಾ ಪಂದ್ಯಗಳೂ ಭಾರತದಲ್ಲೇ ನಡೆಯಲಿವೆ ಎನ್ನುವ ಮೂಲಕ ಬೋರ್ಡ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ (ಬಿಸಿಸಿಐ) ಐಪಿಎಲ್ ಬಗೆಗಿನ ಎಲ್ಲಾ ಊಹಾಪೋಹಗಳಿಗೆ ತೆರೆ ಎಳೆದಿದೆ.
ಐಪಿಎಲ್ 12ನೇ ಆವೃತ್ತಿಯ ವೇಳಾಪಟ್ಟಿ ಪ್ರಕಟ ವಿಳಂಬಕ್ಕೆ ಕಾರಣವನ್ನು ತಿಳಿಸಿರುವ ಬಿಸಿಸಿಐ, ವಿವಿಧ ಹಂತಗಳಲ್ಲಿ ನಡೆಯುವ ಚುನಾವಣೆಗಳ ದಿನಾಂಕ ಪ್ರಕಟಗೊಳ್ಳುವುದನ್ನು ಕಾಯುತ್ತಿದ್ದೇವೆ. ವಿವಿಧ ಹಂತಗಳಲ್ಲಿ ನಡೆಯುವ ಚುನಾವಣೆಯ ದಿನಾಂಕಗಳಿಗೆ ಅನುಗುಣವಾಗಿ ಪಂದ್ಯಗಳನ್ನು ನಿಗದಿಪಡಿಸುವುದು ಇಲ್ಲಿ ಮುಖ್ಯವಾಗಿದೆ ಎಂದು ಮಾಹಿತಿ ನೀಡಿದೆ.
ಮಾರ್ಚ್ 23ರಿಂದ ಐಪಿಎಲ್ 12ನೇ ಆವೃತ್ತಿ ಆರಂಭಗೊಳ್ಳುವುದರಲ್ಲಿದೆ. 2018ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಚಾಂಪಿಯನ್ ಆಗಿ ಹೊರ ಹೊಮ್ಮಿದ್ದರಿಂದ ಫೈನಲ್ ಪಂದ್ಯ ಚೆನ್ನೈಯಲ್ಲೇ ನಡೆಸಲು ನಿರ್ಧರಿಸಲಾಗಿದೆ ಎಂಬ ಮಾಹಿತಿ ಲಭಿಸಿದೆ.
ಚುನಾವಣಾ ದಿನಾಂಕಗಳು ಮತ್ತು ಐಪಿಎಲ್ ವೇಳಾಪಟ್ಟಿ ಮುಖಾಮುಖಿಯಾಗುವುದರಿಂದ ಈ ಬಾರಿಯ ಐಪಿಎಲ್ ವೇಳಾಪಟ್ಟಿ ಹಲವು ಬಗೆಯ ಊಹಾಪೋಹಗಳಿಗೆ ತುತ್ತಾಗಿತ್ತು. ಈ ಅದ್ದೂರಿ ಟೂರ್ನಿ ಯುಎಇಯಲ್ಲಿ ನಡೆಯುತ್ತದೆ ಎಂದು ಆರಂಭದಲ್ಲಿ ಹೇಳಾಗುತ್ತಿತ್ತು.
ಟೂರ್ನಿಯ ಕೆಲ ಪಂದ್ಯಗಳನ್ನು ಬಾಂಗ್ಲಾದೇಶದಲ್ಲಿ ನಡೆಸಲು ಬಿಸಿಸಿಐ ನಿರ್ಧರಿಸಿದೆ ಎಂಬ ವಿಚಾರಗಳೂ ಕೇಳಿ ಬಂದಿದ್ದವು. ಆದರೆ ಈಗ ಲಭಿಸಿರುವ ಮಾಹಿತಿ ಪ್ರಕಾರ ಬಿಸಿಸಿಐ ಹಿರಿಯ ಅಧಿಕಾರಿಯೊಬ್ಬರು ಐಪಿಎಲ್ 12 ಆವೃತ್ತಿಯ ಬಗ್ಗೆ ಖಾತರಿ ಮಾಹಿತಿ ನೀಡಿದ್ದಾರೆ ಎಂದು ಮೂಲವೊಂದು ತಿಳಿಸಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications