Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಡೆಲ್ಲಿ ವಿರುದ್ಧ ಹೈದರಾಬಾದ್, ಸಮಬಲದ ಹೋರಾಟ ನಿರೀಕ್ಷೆ

IPL 2019, SRH vs DC : Probable XIs, Match Prediction

ಕೋಲ್ಕತ್ತಾ, ಏಪ್ರಿಲ್ 14: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2019ರ ಮಾಜಿ ಚಾಂಪಿಯನ್ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ಸೆಣಸಲಿದ್ದು, ಈ ಪಂದ್ಯ ಗೆಲ್ಲಲು ಶ್ರೇಯಸ್ ಅಯ್ಯರ್ ಪಡೆ ತೀವ್ರವಾಗಿ ಯತ್ನಿಸಲಿದೆ. ಅಂಕಪಟ್ಟಿಯಲ್ಲಿ ಡೆಲ್ಲಿ 4ನೇ ಸ್ಥಾನ ಹಾಗೂ ಹೈದರಾಬಾದ್ 6ನೇ ಸ್ಥಾನದಲ್ಲಿವೆ.

ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ಇಂದು ರಾತ್ರಿ 8 ಗಂಟೆಗೆ ಪಂದ್ಯ ಆರಂಭವಾಗಲಿದ್ದು, ತವರು ಮೈದಾನದಲ್ಲಿ ಮೇಲುಗೈ ಸಾಧಿಸಲು ಸನ್ ರೈಸರ್ಸ್ ಹೈದರಾಬಾದ್ ಹವಣಿಸಲಿದೆ. ಈ ಮೈದಾನದಲ್ಲಿ ಉಭಯ ತಂಡಗಳು ಒಟ್ಟು 13 ಬಾರಿ ಎದುರಾಗಿದ್ದು, 9 ಬಾರಿ ಹೈದರಾಬಾದ್ ಗೆಲುವು ಸಾಧಿಸಿದೆ.

ಸನ್ ರೈಸರ್ಸ್ ಹೈದರಾಬಾದ್ ತಂಡದ ಬೌಲಿಂಗ್ ಬಲಿಷ್ಠವಾಗಿದ್ದು, ಮೊಹಮ್ಮದ್ ನಬಿ ಹಾಗೂ ರಶೀದ್ ಖಾನ್ ಅಲ್ಲದೆ, ಸಂದೀಪ್ ಶರ್ಮ ಕೂಡಾ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ನಾಯಕ ಕೇನ್ ವಿಲಿಯಮ್ಸನ್ ಗೆ ಸ್ಥಾನ ದೊರೆದಷ್ಟು ತಂಡ ಬಲಿಷ್ಠವಾಗುತ್ತಾ ಮುಂದುವರೆದಿದೆ. ಇನ್ನೊಂದೆಡೆ ಡೆಲ್ಲಿ ಕ್ಯಾಪಿಟಲ್ಸ್ ವಿಕೆಟ್ ಕಳೆದುಕೊಳ್ಳುವುದನ್ನು ತಪ್ಪಿಸಲು ಯತ್ನಿಸಲಿದೆ. ಬೌಲಿಂಗ್ ನಲ್ಲಿ ಕ್ರಿಸ್ ಮೊರಿಸ್, ರಬಾಡಾಗೆ ಇಶಾಂತ್, ಲಾಮಿಚಾನೆ ಸಾಥ್ ನೀಡುತ್ತಿದ್ದಾರೆ.

ಸನ್ ರೈಸರ್ಸ್ ಹೈದರಾಬಾದ್
ಭುವನೇಶ್ವರ್ ಕುಮಾರ್ (ನಾಯಕ), ಡೇವಿಡ್ ವಾರ್ನರ್, ಜಾನಿ ಬೈರ್ಸ್ಟೊ(ವಿಕೆಟ್ ಕೀಪರ್), ಮೊಹಮ್ಮದ್ ನಬಿ, ಮನೀಶ್ ಪಾಂಡೆ, ಯೂಸುಫ್ ಪಠಾಣ್, ವಿಜಯ್ ಶಂಕರ್, ದೀಪಕ್ ಹೂಡಾ, ರಶೀದ್ ಖಾನ್, ಸಂದೀಪ್ ಶರ್ಮ, ಸಿದ್ದಾರ್ಥ್ ಕೌಲ್.

1
45906

ಡೆಲ್ಲಿ ಕ್ಯಾಪಿಟಲ್ಸ್
ಶ್ರೇಯಸ್ ಅಯ್ಯರ್ (ನಾಯಕ), ರಿಷಬ್ ಪಂತ್(ವಿಕೆಟ್ ಕೀಪರ್), ಕ್ರಿಸ್ ಮೊರಿಸ್, ಅಕ್ಷರ್ ಪಟೇಲ್, ಇಶಾಂತ್ ಶರ್ಮ,ಸಂದೀಪ್ ಲಾಮಿಚಾನೆ, ರಾಹುಲ್ ತೇವಾಟಿಯಾ, ಕಾಗಿಸೋ ರಬಾಡಾ, ಪೃಥ್ವಿ ಶಾ, ಶಿಖರ್ ಧವನ್ ಹಾಗೂ ಕಾಲಿನ್ ಇನ್ ಗ್ರಾಮ್.

Story first published: Sunday, April 14, 2019, 13:51 [IST]
Other articles published on Apr 14, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+