Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಎಂಎಸ್ ಧೋನಿಯ ಆರೋಗ್ಯ ಸ್ಥಿತಿಯ ಮಾಹಿತಿ ನೀಡಿದ ಸ್ಟೀಫನ್ ಫ್ಲೆಮಿಂಗ್

IPL 2019: Stephen Fleming provides update on MS Dhoni’s fitness

ನವದೆಹಲಿ, ಏಪ್ರಿಲ್ 30: ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಎಂಎಸ್ ಧೋನಿ ಸುಧಾರಿಸುತ್ತಿದ್ದಾರೆ. ಆದರೆ ಮುಂದಿನ ಪಂದ್ಯದಲ್ಲಿ ಪಾಲ್ಗೊಳ್ಳುತ್ತಾರೋ ಇಲ್ಲವೋ ಎಂಬುದರ ಬಗ್ಗೆ ಬುಧವಾರ (ಮೇ 1) ನಡೆಯುವ ಪಂದ್ಯಕ್ಕೂ ಮುನ್ನ ತಿಳಿಸುವುದಾಗಿ ಸಿಎಸ್‌ಕೆ ಹೆಡ್ ಕೋಚ್ ಸ್ಟೀಫನ್ ಫ್ಲೆಮಿಂಗ್ ಹೇಳಿದ್ದಾರೆ.

ಬುಧವಾರ ಚೆನ್ನೈಯ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆಯಲಿರುವ ಐಪಿಎಲ್ 50ನೇ ಪಂದ್ಯದಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಕಾದಾಡಲಿವೆ. ಈ ಪಂದ್ಯದ ಟಾಸ್ ಗೂ ಮುನ್ನ ಧೋನಿ ಲಭ್ಯತೆ ಬಗ್ಗೆ ಮಾಹಿತಿ ನೀಡಲಿದ್ದೇವೆ ಎಂದು ಪ್ಲೆಮಿಂಗ್ ತಿಳಿಸಿದರು.

'ಧೋನಿ ಸುಧಾರಿಸಿಕೊಳ್ಳುತ್ತಿದ್ದಾರೆ. ಕಳೆದ ವಾರ ಅವರ ಆರೋಗ್ಯ ತೀವ್ರ ಹದಗೆಟ್ಟಿತ್ತು. ತಂಡದಲ್ಲಿ ಅವರ ಲಭ್ಯತೆ ಬಗ್ಗೆ ನಿಮಗೆ ನಾಳೆ ತಿಳಿಸುತ್ತೇವೆ' ಎಂದು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯಕ್ಕೂ ಮುನ್ನ ಮಂಗಳವಾರ (ಏಪ್ರಿಲ್ 30) ಸುದ್ದಿಗಾರರೊಂದಿಗೆ ಮಾತನಾಡುತ್ತ ಸ್ಟೀಫನ್ ಹೇಳಿದರು.

ಮಂಗಳವಾರ ಧೋನಿ ಅವರು ಸಿಎಸ್‌ಕೆ ಅಭ್ಯಾಸದಲ್ಲಿ ಪಾಲ್ಗೊಂಡಿರಲಿಲ್ಲ. ಜ್ವರದಿಂದ ಬಳಲುತ್ತಿದ್ದರಿಂದ ಧೋನಿ ಏಪ್ರಿಲ್ 26ರಂದು ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲೂ ಮೈದಾನಕ್ಕಿಳಿದಿರಲಿಲ್ಲ. ಆ ಪಂದ್ಯದಲ್ಲಿ ಚೆನ್ನೈ ಸೋತಿತ್ತು. ಒಟ್ಟಿಗೆ ಧೋನಿ ಈ ಐಪಿಎಲ್‌ನಲ್ಲಿ ಎರಡು ಪಂದ್ಯಗಳಿಂದ ಹೊರಗುಳಿದಿದ್ದರು.

Story first published: Tuesday, April 30, 2019, 23:04 [IST]
Other articles published on Apr 30, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+