For Quick Alerts
ALLOW NOTIFICATIONS  
For Daily Alerts
 

ಐಪಿಎಲ್‌ 2019: ಪ್ಲೇ ಆಫ್ಸ್‌ ರೇಸ್‌ನಲ್ಲಿ ಉಳಿಯಲು ರೈಸರ್ಸ್‌-ಕಿಂಗ್ಸ್‌ ಕದನ

ಇದು ಇಲ್ಲಿ ಹೈದರಾಬಾದ್ ಕೊನೇ ಪಂದ್ಯ..!
IPL 2019: Sunrisers Hyderabad bank on home comfort against Kings XI Punjab

ಹೈದರಾಬಾದ್‌, ಏಪ್ರಿಲ್‌ 29: ಸೋಲು-ಗೆಲುವಿನ ಅಲೆಯಲ್ಲಿ ತೇಲಿ ಬಂದಿರುವ ಆತಿಥೇಯ ಸನ್‌ರೈಸರ್ಸ್‌ ಹೈದರಾಬಾದ್‌ ತಂಡ ಪ್ಲೇ ಆಫ್ಸ್‌ ರೇಸ್‌ನಲ್ಲಿ ಉಳಿಯಲು ತನ್ನದೇ ಸ್ಥಿತಿಯಲ್ಲಿರುವ ಕಿಂಗ್ಸ್‌ ಇಲೆವೆನ್‌ ಪಂಜಾಬ್‌ ಎದುರು ಇಲ್ಲಿನ ರಾಜೀವ್‌ ಗಾಂಧಿ ಅಂತಾರಾಷ್ಟ್ರೀಯ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ಸೋಮವಾರ ಜಯ ದಕ್ಕಿಸಿಕೊಳ್ಳುವ ಲೆಕ್ಕಾಚಾರದಲ್ಲಿದೆ.

ಹೈದರಬಾದ್‌ ತಂಡ ಈ ಬಾರಿ ಮನೆಯಿಂದಾಚೆ ಆಡಿದ ಒಟ್ಟು ಪಂದ್ಯಗಳಲ್ಲಿ ನಾಲ್ಕರಲ್ಲಿ ಮುಗ್ಗರಿಸಿದೆ. ಇನ್ನು ತವರಿನಲ್ಲಿ ಹೆಚ್ಚು ಪಂದ್ಯಗಳನ್ನು ಗೆದ್ದಿರುವ ಹೈದರಾಬಾದ್‌ ಮನೆಯಂಗಣದ ಪ್ರೇಕ್ಷಕರ ಎದುರು ಆಡುತ್ತಿರುವ ಕೊನೆ ಲೀಗ್‌ ಪಂದ್ಯದಲ್ಲಿಕಿಂಗ್ಸ್ ಇಲೆವೆನ್‌ ವಿರುದ್ಧ ಜಯ ದಾಖಲಿಸಿ ಪ್ಲೇ ಆಫ್ಸ್‌ ಹಾದಿಯನ್ನು ಕೊಂಚ ಸುಗಮವನ್ನಾಗಿಸಿಕೊಳ್ಳಲು ಎದುರು ನೋಡುತ್ತಿದೆ.

ಏಕೆಂದರೆ, ತನ್ನ ಪಾಲಿನ ಇನ್ನುಳಿದ ಪಂದ್ಯಗಳಲ್ಲಿ ರೈಸರ್ಸ್‌ ಪಡೆ ಬಲಿಷ್ಠ ಮುಂಬೈ ಇಂಡಿಯನ್ಸ್‌ ಮತ್ತು ಅಪಾಯಕಾರಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಎದುರು ಅವರದ್ದೇ ಅಂಗಣದಲ್ಲಿ ಪೈಪೋಟಿ ನಡೆಸಲಿದೆ. ಸದ್ಯ ಆಡಿದ 11 ಪಂದ್ಯಗಳಿಂದ 5 ಜಯದೊಂದಿಗೆ 10 ಅಂಕಗಳನ್ನು ಪಡೆದು ಅಂಕಪಟ್ಟಿಯಲ್ಲಿ 4ನೇ ಸ್ಥಾನದಲ್ಲಿರುವ ರೈಸರ್ಸ್‌ಗೆ ಮುಂದಿನ ಪ್ರತಿ ಪಂದ್ಯವೂ ಮಾಡು ಇಲ್ಲವೆ ಮಡಿಯಂತಾಗಿದೆ.

ಮತ್ತೊಂದೆಡೆ ಸ್ಥಿರ ಪ್ರದರ್ಶನ ಕಾಯ್ದುಕೊಳ್ಳುವಲ್ಲಿ ವಿಫಲವಾಗುತ್ತಿರುವ ಕಿಂಗ್ಸ್‌ ಇಲೆವೆನ್‌ ಪಂಜಾಬ್‌ ಕೂಡ ಇದೇ ಸ್ಥಿತಿಯಲ್ಲಿದ್ದು, 11 ಪಂದ್ಯಗಳಿಂದ 10 ಅಂಕಗಳನ್ನು ಗಳಿಸಿ ಅಂಕಪಟ್ಟಿಯಲ್ಲಿ 6ನೇ ಸ್ಥಾನ ಹೊಂದಿದೆ. ಒಟ್ಟಾರೆ ಸೋಮವಾರದ ಪಂದ್ಯದಲ್ಲಿ ಸೋಲುವ ತಂಡಕ್ಕೆ ಪ್ಲೇ ಆಫ್ಸ್‌ ಹಾದಿ ದುರ್ಗಮವಾಗಲಿದೆ.

ರೈಸರ್ಸ್‌ ಸಂಭಾವ್ಯ 11
ಡೇವಿಡ್‌ ವಾರ್ನರ್‌, ಶ್ರೀವತ್ಸ ಗೋಸ್ವಾಮಿ (ವಿಕೆಟ್‌ಕೀಪರ್‌), ಕೇನ್‌ ವಿಲಿಯಮ್ಸನ್‌, ಮನೀಶ್‌ ಪಾಂಡೆ, ವಿಜಯ್‌ ಶಂಕರ್‌, ಮೊಹಮ್ಮದ್‌ ನಬಿ, ದೀಪಕ್‌ ಹೂಡಾ, ಭುವನೇಶ್ವರ್‌ ಕುಮಾರ್‌, ಸಿದ್ಧಾರ್ಥ್‌ ಕೌಲ್‌/ಸಂದೀಪ್‌ ಶರ್ಮಾ, ಖಲೀಲ್‌ ಅಹ್ಮದ್‌.

ಕಿಂಗ್ಸ್‌ ಸಂಭಾವ್ಯ 11
ಲೋಕೇಶ್‌ ರಾಹುಲ್‌, ಕ್ರಿಸ್‌ ಗೇಲ್‌, ಮಯಾಂಕ್‌ ಅಗರ್ವಾಲ್‌, ಡೇವಿಡ್‌ ಮಿಲ್ಲರ್‌, ಮಂದೀಪ್‌ ಸಿಂಗ್‌, ನಿಕೊಲಾಸ್‌ ಪೂರನ್‌ (ವಿಕೆಟ್‌ಕೀಪರ್‌), ಆರ್‌. ಅಶ್ವಿನ್‌, ಹಾರ್ಡಸ್‌ ವಿಲ್ಜೊಯೆನ್‌, ಅಂಕಿತ್‌ ರಜಪೂತ್‌/ಸ್ಯಾಮ್‌ ಕರ್ರನ್‌/ಅರ್ಷದೀಪ್‌ ಸಿಂಗ್‌, ಮುರುಗನ್‌ ಅಶ್ವಿನ್‌, ಮೊಹಮ್ಮದ್‌ ಶಮಿ.

Story first published: Monday, April 29, 2019, 14:57 [IST]
Other articles published on Apr 29, 2019
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+