ಐಪಿಎಲ್ 2019: ನಿಷೇಧಿತ ಆಟಗಾರ ವಾರ್ನರ್ ಉಳಿಸಿಕೊಂಡ ಸನ್ ರೈಸರ್ಸ್!

ಬೆಂಗಳೂರು, ನವೆಂಬರ್ 15: ಐಪಿಎಲ್ 2019ರ ಟೂರ್ನಿಗಾಗಿ ತಂಡವನ್ನು ಬಲಗೊಳಿಸಿಕೊಳ್ಳಲು ಫ್ರಾಂಚೈಸಿಗಳ ನಡುವೆ ಬಿರುಸಿನ ಪೈಪೋಟಿ ಶುರುವಾಗಿದೆ. ಈ ನಡುವೆ ಆಸ್ಟ್ರೇಲಿಯಾ ತಂಡದ ನಿಷೇಧಿತ ಆಟಗಾರ ಡೇವಿಡ್ ವಾರ್ನರ್ ಅವರನ್ನು ಸನ್ ರೈಸರ್ಸ್ ಹೈದರಾಬಾದ್ ತಂಡ ಉಳಿಸಿಕೊಂಡಿದೆ.
2018ರ ಐಪಿಎಲ್ ಸೀಸನ್ ನಲ್ಲಿ ಸನ್ ರೈಸರ್ಸ್ ಹೈದರಾಬಾದ್, ತಮ್ಮ ತಂಡದ ನಾಯಕನಾಗಿ ಡೇವಿಡ್ ವಾರ್ನರ್ ಅವರನ್ನು ಹೆಸರಿಸಿತ್ತು. ಆದರೆ ಚೆಂಡು ವಿರೂಪ ಪ್ರಕರಣದಲ್ಲಿ ವಾರ್ನರ್ ತಪ್ಪಿತಸ್ಥನಾಗಿ ನಿಷೇಧಕ್ಕೆ ಒಳಗಾದ್ದರಿಂದ ನಾಯಕತ್ವವನ್ನು ಬೇರೆಯವರಿಗೆ ವಹಿಸಿತ್ತು.
ಕೇಪ್ ಟೌನ್‌ನಲ್ಲಿ ನಡೆದಿದ್ದ ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್ ಪಂದ್ಯದ ವೇಳೆ ಡೇವಿಡ್ ವಾರ್ನರ್, ಕೆಮರಾನ್ ಬ್ಯಾನ್‌ಕ್ರಾಫ್ಟ್, ಸ್ಟೀವ್ ಸ್ಮಿತ್ ಬಾಲ್ ಟ್ಯಾಂಪರಿಂಗ್‌ನಲ್ಲಿ ಪಾಲ್ಗೊಂಡು ನಿಷೇಧಕ್ಕೆ ಒಳಗಾಗಿದ್ದರು. ವಾರ್ನರ್-ಸ್ಮಿತ್‌ಗೆ 1 ವರ್ಷ, ಬ್ಯಾನ್‌ಕ್ರಾಫ್ಟ್‌ಗೆ 9 ತಿಂಗಳ ನಿಷೇಧ ಹೇರಲಾಗಿತ್ತು.

ಬಿಟ್ಟುಕೊಡಲೊಲ್ಲದ ರೈಸರ್ಸ್
ಕಳೆದ ಮಾರ್ಚ್ ನಲ್ಲಿ ಡೇವಿಡ್ ವಾರ್ನರ್ ಸೇರಿ ಆಸೀನ್‌ನ ಇನ್ನಿಬ್ಬರು ಆಟಗಾರರು ನಿಷೇಧಕ್ಕೆ ಒಳಗಾಗಿದ್ದರು. ಈ ಬಾರಿಯ ಐಪಿಎಲ್ ವೇಳೆ ಸ್ಮಿತ್, ಬ್ಯಾನ್‌ಕ್ರಾಫ್ಟ್ ಮತ್ತು ವಾರ್ನರ್ ನಿಷೇಧ ತೆರವಾಗುವುದರಲ್ಲಿದೆ. ಈಗಾಗಲೇ ಡೇವಿಡ್ ಮತ್ತು ಸ್ಮಿತ್ ಇಬ್ಬರೂ ಕ್ಲಬ್ ಕ್ರಿಕೆಟ್ ನಲ್ಲಿ ಆಡುತ್ತಿದ್ದಾರೆ. ಉತ್ತಮ ಆಟವನ್ನೂ ಪ್ರದರ್ಶಿಸುತ್ತಿದ್ದಾರೆ. ಹೀಗಾಗಿ ಡೇವಿಡ್ ವಾರ್ನರ್ ಅವರನ್ನು ಸನ್‌ರೈಸರ್ಸ್ ಹೈದರಾಬಾದ್ ತನ್ನಲ್ಲೇ ಉಳಿಸಿಕೊಂಡು ಜಾಣತನ ಮೆರೆದಿದೆ.

ಈಗಲೂ ರ್ಯಾಂಕಿಂಗ್‌ನಲ್ಲಿ ಸ್ಥಾನ
ಡೇವಿಡ್ ಮತ್ತು ಸ್ಟೀವ್ ನಿಷೇಧಕ್ಕೆ ಒಳಗಾಗಿ ಅನೇಕ ತಿಂಗಳು ಕಳೆದಿದ್ದಾಗಿದೆ. ಈ ನಡುವೆ ಅನೇಕ ಟೂರ್ನಿಗಳೂ ಆಗಿ ಹೋಗಿವೆ. ಆದರೆ ಈ ಇಬ್ಬರೂ ಪ್ರತಿಭಾನ್ವಿತರು ಈಗಲೂ ಐಸಿಸಿ ರ್ಯಾಂಕಿಂಗ್‌ನಲ್ಲಿ ಉತ್ತಮ ಸ್ಥಾನದಲ್ಲೇ ಉಳಿದಿದ್ದಾರೆ. ಟೆಸ್ಟ್ ಕ್ರಿಕೆಟ್ ನಲ್ಲಿ ಸ್ಮಿತ್ ದ್ವಿತೀಯ ಸ್ಥಾನದಲ್ಲಿ ವಾರ್ನರ್ 5ನೇ ಸ್ಥಾನದಲ್ಲಿದ್ದರೆ, ಏಕದಿನದಲ್ಲಿ ವಾರ್ನರ್ ಈಗಲೂ 6ನೇ ಸ್ಥಾನಿಗ!

ಒಳ/ಹೊರಗಿನಾಟ
ಡಿಸೆಂಬರ್ 18ರಂದು ನಡೆಯಲಿರುವ ಐಪಿಎಲ್ 2019ರ ಆಟಗಾರರ ಹರಾಜಿಗೂ ಮುನ್ನವೇ ಫ್ರಾಂಚೈಸಿಗಳ ನಡುವೆ ಒಳ ಹೊರಗಿನಾಟ ಶುರುವಾಗಿದೆ. ಸನ್‌ರೈಸರ್ನ್ ಹೈದರಾಬಾದ್ ನಲ್ಲಿ ಒಳ ಬಂದವರಿಗಿಂತ ಹೊರ ಹೋದವರ ಪಟ್ಟಿ ದೊಡ್ಡದಿದೆ. ಹಾಗೇ ಉಳಿಸಿಕೊಂಡವರ ಸಾಲು ಇನ್ನೂ ದೊಡ್ಡದೇ.

ಬೇಕು/ಬೇಡಾದವರು
ಒಳ ಬಂದವರು: ವಿಜಯ್ ಶಂಕರ್, ಅಭಿಷೇಕ್ ಶರ್ಮಾ, ಶಹಬಾಜ್ ನದೀಮ್.
ಹೊರಬಿದ್ದವರು: ಶಿಖರ್ ಧವನ್, ಸಚಿನ್ ಬೇಬಿ, ತಾನ್ಮೇ ಅಗರ್ವಾಲ್, ವೃದ್ಧಿಮಾನ್ ಸಹಾ, ಕ್ರಿಸ್ ಜೋರ್ಡನ್, ಕಾರ್ಲೋಸ್ ಬ್ರಾಥ್ವೈಟ್, ಅಲೆಕ್ಸ್ ಹೇಲ್ಸ್, ಬಿಪುಲ್ ಶರ್ಮಾ, ಸೈಯದ್ ಮೆಹ್ದಿ ಹಸನ್.
ಉಳಿಸಿಕೊಂಡವರು: ಡೇವಿಡ್ ವಾರ್ನರ್, ಯೂಸುಫ್ ಪಠಾಣ್, ರಶೀದ್ ಖಾನ್, ಶಕೀಬ್ ಅಲ್ ಹಸನ್, ಬಿಲ್ಲಿ ಸ್ಟ್ಯಾನ್ಲೇಕ್, ಕೇನ್ ವಿಲಿಯಮ್ಸನ್, ಮೊಹಮ್ಮದ್ ನಬಿ, ಭುವನೇಶ್ವರ ಕುಮಾರ್, ಮನೀಶ್ ಪಾಂಡೆ, ಟಿ ನಟರಾಜನ್, ರಿಕಿ ಭುಯಿ, ಸಂದೀಪ್ ಶರ್ಮಾ, ಶ್ರೀವತ್ಸ್ ಗೋಸ್ವಾಮಿ, ಸಿದ್ಧಾರ್ಥ ಕೌಲ್, ಖಲೀಲ್ ಅಹ್ಮದ್, ಬಸಿಲ್ ಥಾಂಪಿ , ದೀಪಕ್ ಹೂಡಾ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications