Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಪಿಎಲ್ ಪಂದ್ಯದ ವೇಳೆ ಬಟ್ಟೆ ಬದಲಾಯಿಸಿದ ಹುಚ್ಚು ಅಭಿಮಾನಿ: ವಿಡಿಯೋ

CSK ಮುಂದಿನ ನಾಯಕ ಸುರೇಶ್ ರೈನಾ..?! | Oneindia Kannada
IPL 2019: The fan-changing dress when the Mumbai Indians won

ಮುಂಬೈ, ಮೇ 3: ಸೋಲುಗಳು ಚಂದದ ಪಾಠಗಳನ್ನು ಕಲಿಸಿಕೊಡುತ್ತವೆಯಾದರೂ ನಾವೆಲ್ಲರೂ ಗೆಲ್ಲೋದನ್ನೇ ಬಯಸೋರು. ಗೆಲ್ಲೋ ಕುದುರೆಯ ಬಾಲವೇ ಬೇಕು ನಮಗೆ. ಗುರುವಾರ (ಮೇ 2) ಐಪಿಎಲ್ ಪಂದ್ಯದ ವೇಳೆಯೂ ಇಂಥದ್ದೇ ಒಂದು ದೃಶ್ಯ ಕಂಡುಬಂತು. ಕ್ರಿಕೆಟ್ ಅಭಿಮಾನಿಯೊಬ್ಬರು ಮುಂಬೈ-ಹೈದರಾಬಾದ್ ಪಂದ್ಯದ ವೇಳೆ ಬಟ್ಟೆ ಬದಯಾಯಿಸಿ ಸಂಭ್ರಮಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಮುಂಬೈಯ ವಾಂಖೇಡೆ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ 51ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಸನ್ ರೈಸರ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಇದರಲ್ಲಿ ಪಂದ್ಯದ ಫಲಿತಾಂಶ ಸಮಬಲಗೊಂಡಿತ್ತು. ಆದರೆ ಗೆಲುವು ನಿರ್ಧರಿಸಲು ನಡೆದ ಸೂಪರ್ ಓವರ್‌ನಲ್ಲಿ ಮುಂಬೈ ರೋಚಕ ಗೆಲುವು ದಾಖಲಿಸಿತ್ತು.

ಎರಡೂ ತಂಡಗಳ ಮಧ್ಯೆ ಜಿದ್ದಾಜಿದ್ದಿ ಏರ್ಪಡುವಲ್ಲಿ ಕ್ವಿಂಟನ್ ಡಿ ಕಾಕ್ (ಎಂಐ) ಮತ್ತು ಮನೀಶ್ ಪಾಂಡೆ (ಎಸ್‌ಆರ್‌ಎಚ್) ಪ್ರಮುಖ ಕಾರಣರಾಗಿದ್ದರು. ಅಂತೂ ಪಂದ್ಯದಲ್ಲಿ ಮುಂಬೈ ತಂಡ ರೋಚಕ ಗೆಲುವಿನೊಂದಿಗೆ ಪ್ಲೇ ಆಫ್ ಪ್ರವೇಶಿಸಿತು.

ತೀವ್ರ ಜಿದ್ದಜಿದ್ದಿಯ ಈ ಕಾದಾಟದಲ್ಲಿ ಮುಂಬೈ ಗೆಲ್ಲುತ್ತಲೇ ಕ್ರಿಕೆಟ್ ಅಭಿಮಾನಿಯೊಬ್ಬರು ಹೈದರಾಬಾದ್ ಶರ್ಟ್ ಬದಲಾಯಿಸಿ ಮುಂಬೈ ಶರ್ಟ್ ಧರಿಸಿ ಸಂಭ್ರಮಾಚರಿಸಿದ್ದರು. ಈ ವಿಡಿಯೋವನ್ನು ಮುಂಬೈ ಇಂಡಿಯನ್ಸ್ ಫ್ಯಾನ್ಸ್ ಕ್ಲಬ್ ತನ್ನ ಟ್ವಿಟರ್ ಖಾತೆಯಲ್ಲಿ ಹಾಕಿಕೊಂಡಿದೆ.

Story first published: Friday, May 3, 2019, 18:09 [IST]
Other articles published on May 3, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+