ಐಪಿಎಲ್ 2019: 'ಮಹಿಳೆಯರ ಟಿ20 ಚಾಲೆಂಜ್' ಸಮಯದಲ್ಲಿ ಬದಲಾವಣೆ

ನವದೆಹಲಿ, ಏಪ್ರಿಲ್ 29: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನಂತದ್ದೇ ರೀತಿಯಲ್ಲಿ ಮಹಿಳೆಯರ ಟಿ20 ಕ್ರಿಕೆಟ್‌ಗೂ ಬೆಂಬಲಿಸುವ ಪರಿಕಲ್ಪನೆಯಲ್ಲಿ ನಡೆಸಲು ಉದ್ದೇಶಿಸಿರುವ ಮಹಿಳಾ ಟಿ20 ಚಾಲೆಂಜ್ ಪಂದ್ಯಗಳ ಸಮಯದಲ್ಲಿ ಸಣ್ಣ ಬದಲಾವಣೆಯಾಗಿದೆ. ಫೈನಲ್ ಸೇರಿ ಒಟ್ಟು ನಾಲ್ಕು ಪಂದ್ಯಗಳನ್ನು ನಡೆಸಲು ಉದ್ದೇಶಿಸಲಾಗಿರುವ ಈ ಪಂದ್ಯಗಳು ಮೇ 6ರಿಂದ ಆರಂಭಗೊಳ್ಳಲಿವೆ.
ಹರ್ಮನ್ ಪ್ರೀತ್ ಕೌರ್ ನಾಯಕತ್ವದಲ್ಲಿರುವ ಸೂಪರ್‌ನೋವಾಸ್, ಸ್ಮೃತಿ ಮಂಧಾನ ಮುಂದಾಳತ್ವದಲ್ಲಿರುವ ಟ್ರಯಲ್ ಬ್ಲೇಸರ್ಸ್ ಮತ್ತು ಮಿಥಾಲಿ ರಾಜ್ ನಾಯಕತ್ವದ ವೆಲಾಸಿಟಿ ತಂಡಗಳ ನಡುವೆ ಟಿ20 ಕಾದಾಟಗಳು ನಡೆಯಲಿವೆ. ಅಂತಿಮ ಪಂದ್ಯ ಮೇ 11ರಂದು ನಡೆಯಲಿದೆ.
ಆರಂಭದಲ್ಲಿ ಮಹಿಳಾ ಟಿ20ಯ ನಾಲ್ಕೂ ಪಂದ್ಯಗಳನ್ನು 7.30 pmಗೆ ನಡೆಸಲು ನಿರ್ಧರಿಸಲಾಗಿತ್ತು. ಆದರೆ ಮೇ 8ರ ಮಹಿಳಾ ಕ್ರಿಕೆಟ್ 2ನೇ ಪಂದ್ಯದ ವೇಳೆ ಪುರುಷರ ಐಪಿಎಲ್ ಪಂದ್ಯದ ಸಮಯವೂ ಮುಖಾಮುಖಿಯಾಗುವುದರಲ್ಲಿತ್ತು. ಇದಕ್ಕಾಗಿ ಎರಡನೇ ಪಂದ್ಯದ ಸಮಯವನ್ನು 3.30 pmಗೆ ಬದಲಾಯಿಸಿಕೊಳ್ಳಲಾಗಿದೆ.
ಮಹಿಳಾ ಟಿ20 ಚಾಲೆಂಜ್ ವೇಳಾಪಟ್ಟಿ
1ನೇ ಪಂದ್ಯ: ಮೇ 6, 7:30 pmಗೆ, ಸೂಪರ್‌ನೋವಾಸ್ vs ಟ್ರಯಲ್ ಬ್ಲೇಸರ್ಸ್, ಸವಾಯಿ ಮಾನ್ಸಿಂಗ್ ಕ್ರೀಡಾಂಗಣ, ಜೈಪುರ.
2ನೇ ಪಂದ್ಯ: ಮೇ 8, 3:30 pmಗೆ, ಟ್ರಯಲ್ ಬ್ಲೇಸರ್ಸ್ vs ವೆಲಾಸಿಟಿ, ಸವಾಯಿ ಮಾನ್ಸಿಂಗ್ ಕ್ರೀಡಾಂಗಣ, ಜೈಪುರ.
3ನೇ ಪಂದ್ಯ: ಮೇ 9, 7:30 pmಗೆ, ಸೂಪರ್‌ನೋವಾಸ್ vs ವೆಲಾಸಿಟಿ, ಸವಾಯಿ ಮಾನ್ಸಿಂಗ್ ಕ್ರೀಡಾಂಗಣ, ಜೈಪುರ.
4ನೇ ಪಂದ್ಯ: ಮೇ 11, 7:30 pmಗೆ, ಮೊದಲ ಸ್ಥಾನಿ ಮತ್ತು ದ್ವಿತೀಯ ಸ್ಥಾನಿ ತಂಡಗಳ ನಡುವೆ, ಸವಾಯಿ ಮಾನ್ಸಿಂಗ್ ಕ್ರೀಡಾಂಗಣ, ಜೈಪುರ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications