For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2019: ಸಂಜೆ 4, ರಾತ್ರಿ 8ಕ್ಕೆ ಪಂದ್ಯಗಳು ಆರಂಭ

 IPL 2019 to have 8 pm start

ನವದೆಹಲಿ, ಮಾರ್ಚ್ 08: ಐಪಿಎಲ್ 2019ರ ಪಂದ್ಯಗಳ ಆರಂಭ ಸಮಯ ಬದಲಾವಣೆ ಬಗ್ಗೆ ಬಂದಿದ್ದ ಸುದ್ದಿಗಳನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ತಳ್ಳಿ ಹಾಕಿದೆ. ಐಪಿಎಲ್ 12ನೇ ಆವೃತ್ತಿಯ ಎಲ್ಲ ಲೀಗ್ ಪಂದ್ಯಗಳ ಆರಂಭದ ಸಮಯದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಹೇಳಿದೆ.

ಎಲ್ಲಾ ಪಂದ್ಯಗಳು ರಾತ್ರಿ 8 ಗಂಟೆಗೆ ಪಂದ್ಯ ಆರಂಭಗೊಳ್ಳಲಿದ್ದು, ಎರಡು ಪಂದ್ಯಗಳಿದ್ದ ದಿನದಂದು ಸಂಜೆ 4 ಹಾಗೂ ರಾತ್ರಿ 8 ಗಂಟೆಗೆ ಪಂದ್ಯಗಳು ಆರಂಭಗೊಳ್ಳಲಿವೆ ಎಂದು ಆಡಳಿತಾಧಿಕಾರಿಗಳ ಸಮಿತಿ (ಸಿಒಎ) ಮುಖ್ಯಸ್ಥ ವಿನೋದ್ ರಾಯ್ ಹೇಳಿದರು. ಐಪಿಎಲ್ ಪಂದ್ಯಗಳನ್ನು 7 ಗಂಟೆಗೆ ಆರಂಭಿಸಲು ಬಿಸಿಸಿಐ ಮೇಲೆ ಒತ್ತಡ ಬಂದಿತ್ತು. ಆದರೆ, ಫ್ರಾಂಚೈಸಿಗಳಿಂದ ಪಂದ್ಯದ ಸಮಯ ಬದಲಾವಣೆಗೆ ವಿರೋಧ ಬಂದಿತ್ತು.

ಕಳೆದ ಐಪಿಎಲ್ ಫೈನಲ್ ಹಾಗೂ ಪ್ಲೇಆಫ್ ಪಂದ್ಯಗಳನ್ನು ರಾತ್ರಿ 7 ಗಂಟೆಗೆ ಆರಂಭಿಸಲಾಗಿತ್ತು. ಲೀಗ್ ಪಂದ್ಯಗಳು 8 ಗಂಟೆಗೆ ಆರಂಭವಾಗಿತ್ತು. ಮಾರ್ಚ್ 23ರಂದು ಆರಂಭವಾಗಲಿರುವ ಐಪಿಎಲ್​ನ ಮೊದಲ 17 ಪಂದ್ಯಗಳ ವೇಳಾಪಟ್ಟಿಯನ್ನು ಪ್ರಕಟಮಾಡಲಾಗಿದೆ. ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸೆಣಸಾಡಲಿವೆ. ಲೋಕಸಭೆ ಚುನಾವಣೆ ದಿನಾಂಕ ಘೋಷಣೆಯಾದ ಬಳಿಕ ಉಳಿದ ಪಂದ್ಯಗಳ ವೇಳಾಪಟ್ಟಿ ಬಿಡುಗಡೆಯಾಗಲಿದೆ.

ಮಾರ್ಚ್ 23ರಿಂದ ಏಪ್ರಿಲ್ 5ರ ವರೆಗಿನ ಎರಡು ವಾರಗಳ ಅವಧಿಯಲ್ಲಿ ಒಟ್ಟು 17 ಐಪಿಎಲ್ ಪಂದ್ಯಗಳು ನಡೆಯಲಿವೆ. ಇರುವ ಎಂಟು ಫ್ರಾಂಚೈಸಿಗಳಿಗನುಗುಣವಾಗಿ ಎಂಟೂ ತಾಣಗಳಲ್ಲಿ ಪಂದ್ಯಗಳು ನಡೆಯಲಿವೆ

Story first published: Friday, March 8, 2019, 16:42 [IST]
Other articles published on Mar 8, 2019
Read in English: IPL 2019 to have 8 pm start
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+