ಬಹುಶಃ ಅನುಷ್ಕಾನೂ ಕೊಹ್ಲೀನ ಈ ಪರಿ ಅಪ್ಪಿರಲಿಕ್ಕಿಲ್ಲ: ಟ್ವಿಟರ್ ತಮಾಷೆ!

ಬೆಂಗಳೂರು, ಏಪ್ರಿಲ್ 22: ಚಿನ್ನ ಸ್ವಾಮೀ ಸ್ಟೇಡಿಯಂನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಆಟಗಾರರಾದ ಡೇಲ್ ಸ್ಟೇನ್ ಮತ್ತು ವಿರಾಟ್ ಕೊಹ್ಲಿ, ಎದುರಾಳಿ ತಂಡದ ವಿಕೆಟ್ ಉರುಳಿದಾಗ ಪರಸ್ಪರ ಅಪ್ಪಿ ಸಂಭ್ರಮಾಚರಿಸಿದ್ದರು. ಈ ವಿಡಿಯೋ/ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಓಡಾಡುತ್ತಿದೆ.
ಮೈಖೇಲ್ ಕನ್ನಡ-ಐಪಿಎಲ್ ವಿಶೇಷ ಮುಖಪುಟ
ಭಾನುವಾರ (ಏಪ್ರಿಲ್ 21) ಬೆಂಗಳೂರಿನಲ್ಲಿ ನಡೆದ ಐಪಿಎಲ್ 39ನೇ ಪಂದ್ಯದ ವೇಳೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಇದರಲ್ಲಿ ಆರ್‌ಸಿಬಿ ಕೇವಲ 1 ರನ್‌ನಿಂದ ಜಯಿಸಿತ್ತು. ಈ ಗೆಲುವಿಗೆ ಬೆಂಗಳೂರು ತಂಡದ ವೇಗಿ ಡೇಲ್ ಸ್ಟೇನ್ ಕೂಡ ಕಾರಣರಾಗಿದ್ದರು.
ಚೆನ್ನೈ ಇನ್ನಿಂಗ್ಸ್‌ನ ಮೊದಲ ಓವರ್‌ನಲ್ಲೇ ಡೇಲ್ ಸ್ಟೇನ್ ಅವರು ಸಿಎಸ್‌ಕೆಯ ಶೇನ್ ವ್ಯಾಟ್ಸನ್ ಮತ್ತು ಸುರೇಶ್ ರೈನಾ ವಿಕೆಟ್ ಮುರಿದಿದ್ದರು. ಆಗ ಸ್ಟೇನ್ ಮತ್ತು ಕೊಹ್ಲಿ ಅಪ್ಪಿ ಸಂಭ್ರಮಿಸಿದ್ದರು. ಆರ್‌ಸಿಬಿ ಸಂಭ್ರಮ, ಚೆನ್ನೈ ಜಿದ್ದಿಯ ಹೋರಾಟ, ಆರ್‌ಸಿಬಿ ರೋಚಕ ಗೆಲುವು ಇತ್ಯಾದಿಗಳಿಗೆ ಸಂಬಂಧಿಸಿ ಇಲ್ಲೊಂದಿಷ್ಟು ಟ್ವೀಟ್ ಪ್ರತಿಕ್ರಿಯೆಗಳಿವೆ.
ಯಪ್ಪೋ.. ಅದೇನ್ ಬೌಲಿಂಗ್ ಮಾಡ್ತವ್ನಪ್ಪ!
ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿದಿದ್ದ ಆರ್‌ಸಿಬಿ 161 ರನ್ ಕಲೆ ಹಾಕಲಷ್ಟೇ ಶಕ್ತವಾಗಿತ್ತು. ಸಿಎಸ್‌ಕೆ ಪಾಲಿಗೆ ಇದೇನೂ ಸವಾಲಿನ ಮೊತ್ತವಾಗಿರಲಿಲ್ಲ. ಹೀಗಾಗಿಯೇ ಸಿಎಸ್‌ಕೆ ಇನ್ನಿಂಗ್ಸ್ ವೇಳೆ ಆರ್‌ಸಿಬಿ ಮಾರಕ ಬೌಲಿಂಗ್ ಪ್ರದರ್ಶಿಸುವುದು ಅನಿವಾರ್ಯವಾಗಿತ್ತು. ಅದರಂತೆ ಸ್ಟೇನ್ ಮೊದಲ ಓವರ್‌ನಲ್ಲೇ ಇಬ್ಬರು ಅಪಾಯಕಾರಿ ಆಟಗಾರರನ್ನು ಔಟ್ ಮಾಡಿದ್ದು ನೋಡಿ ಆರ್‌ಸಿಬಿ ಕೋಚ್ ಆಶೀಷ್ ನೆಹ್ರಾ ಹೀಗಂದುಕೊಂಡಿರಬಹುದು ಎಂದು ಇಲ್ಲೊಬ್ಬರು ತಮಾಷೆಯಾಗಿ ಟ್ವೀಟ್ ಮಾಡಿದ್ದಾರೆ.
ಆರ್ಸಿಬಿಯ ಸ್ಫೂರ್ತಿಯನ್ನು ಸ್ಟೇನ್ ಎತ್ತಿದ್ದಾರೆ
ಸಿಎಸ್‌ಕೆ ಪ್ರಮುಖ ವಿಕೆಟ್ ಉರುಳಿದಾಗ ಕೊಹ್ಲಿ-ಸ್ಟೇನ್ ಸಂಭ್ರಮಿಸಿದ್ದರ ಕುರಿತು ಸ್ಟಾರ್ ಸ್ಪೋರ್ಟ್ಸ್ ಕೂಡ ಟ್ವೀಟ್ ಮಾಡಿದೆ. ಡೇಲ್ ಸ್ಟೇನ್ ಅವರು ಆರ್‌ಸಿಬಿಯ ಸ್ಫೋರ್ತಿ(ಕೊಹ್ಲಿ)ಯನ್ನು ಎತ್ತಿದ್ದಾರೆ ಎಂದು ಐಪಿಎಲ್ ಅಧಿಕೃತ ಪ್ರಸಾರಕ ಸ್ಟಾರ್ ಸ್ಪೋರ್ಟ್ಸ್ ಟ್ವೀಟ್ ಮಾಡಿದೆ.
ಹಳೆಯ ಫೋಟೋ ನೆನಪಿಸಿದ ಕೊಹ್ಲಿ
ಡೇಲ್ ಸ್ಟೇನ್ ಮತ್ತು ಕೊಹ್ಲಿ 2010ರಲ್ಲಿ ಆರ್‌ಸಿಬಿ ಪರ ಹೀಗೇ ಸಂಭ್ರಮಿಸಿದ್ದರ ಫೋಟೋವನ್ನು ತೋರಿಸಿ ಪ್ರತಿಕ್ರಿಯಿದ ಟ್ವಿಟರ್ ವಿಡಿಯೋವನ್ನು ಇಂಡಿಯನ್ ಪ್ರೀಮಿಯರ್ ಲೀಗ್ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹಾಕಿಕೊಂಡಿದೆ. ಇದರಲ್ಲಿ ಕೊಹ್ಲಿ 2010 ಮತ್ತು 2019ರ ಫೋಟೋವನ್ನು ತೋರಿಸಿ ಗತ ಕ್ಷಣವನ್ನೊಮ್ಮೆ ಮೆಲುಕು ಹಾಕಿದ್ದಾರೆ.
ಅನುಷ್ಕನೂ ಹೀಗೆ ಅಪ್ಪಿರಲಿಕ್ಕಿಲ್ಲ
ಡೇಲ್ ಸ್ಟೇನ್-ವಿರಾಟ್ ಕೊಹ್ಲಿ ಅಪ್ಪಿ ಸಂಭ್ರಮಿಸಿದ್ದರ ಫೋಟೋವನ್ನು ಟ್ವಿಟರ್ ನಲ್ಲಿ ಹಾಕಿಕೊಂಡಿರುವ ಸೋಷಿಯಲ್ ಮೀಡಿಯಾ ಟ್ವಿಟರ್ ಪೇಜ್, 'ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಕೂಡ ಕೊಹ್ಲಿಯನ್ನು ಹೀಗೆ ಅಪ್ಪಿರಲಿಕ್ಕಿಲ್ಲ, ಚೆನ್ನಾಗಿ ಆಡಿದ್ದೀರಿ ಡೇಲ್ ಸ್ಟೇನ್' ಎಂದು ಬರೆದುಕೊಂಡಿದೆ.
ಗುಂಡಿನಂತೆ ಸಿಡಿದ ಸ್ಟೇನ್
ಭಾನುವಾರದ ಸಿಎಸ್‌ಕೆ vs ಆರ್‌ಸಿಬಿ ಪಂದ್ಯದಲ್ಲಿ ಸ್ಟೇನ್ ನಿಜಕ್ಕೂ ಅದ್ಭುತ ಪ್ರದರ್ಶನ ನೀಡಿದ್ದರು. ಆರಂಭದಲ್ಲಿ ಸ್ಟೇನ್ ವ್ಯಾಟ್ಸನ್ ಮತ್ತು ರೈನಾ ವಿಕೆಟ್ ಮುರಿದಿದ್ದರಿಂದ ಚೆನ್ನೈ ಒತ್ತಡಕ್ಕೀಡಾಯಿತು. ಪಂದ್ಯದಲ್ಲಿ ಸ್ಟೇನ್, ಸ್ಟೆನ್ ಗನ್‌ನಂತೆ ಸಿಡಿದರು ಎಂದು ಇಲ್ಲೊಬ್ಬರು ಟ್ವೀಟ್ ಮಾಡಿದ್ದಾರೆ.
ಅಭಿಮಾನಿಯ ನಿಷಾದ ನೋಟ
ಚೆನ್ನೈ ವಿರುದ್ಧ ಬೆಂಗಳೂರು ಮಾರಕ ಬೌಲಿಂಗ್ ನಡೆಸಿ ಸಂಭ್ರಮಿಸಿದ್ದನ್ನು ಚೆನ್ನೈ ಸೂಪರ್ ಕಿಂಗ್ಸ್ ಅಪ್ಪಟ ಅಭಿಮಾನಿಯೊಬ್ಬ ಬೇಸರದಿಂದ ನೋಡುತ್ತಿರುವ ಫೋಟೋವನ್ನು ವಿಜಯೇಂದ್ರ ಎಂಬವರು ಟ್ವಿಟರ್‌ನಲ್ಲಿ ಹಾಕಿಕೊಂಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications