
ಬೆಂಗಳೂರು, ಏಪ್ರಿಲ್ 5: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನಲ್ಲಿ ಅತ್ಯಧಿಕ ರನ್ ಸಾಧಕನಾಗಿ ಗುರುತಿಸಿಕೊಂಡಿದ್ದಾರೆ. ಶುಕ್ರವಾರ (ಏಪ್ರಿಲ್ 5) ನಡೆದ ಐಪಿಎಲ್ 17ನೇ ಪಂದ್ಯದಲ್ಲಿ ಕೊಹ್ಲಿ ಈ ದಾಖಲೆ ಸೃಷ್ಟಿಸಿದರು.
ಪಂದ್ಯದ Live Score ಕೆಳಗಿದೆ. ಸ್ಕೋರ್‌ಕಾರ್ಡ್‌ಗೆ ಕಳಗಿನ ಲಿಂಕ್ ಕ್ಲಿಕ್ ಮಾಡಿ
ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಕೊಹ್ಲಿ, ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ 49 ಎಸೆತಕ್ಕೆ 84 ರನ್ ಸಿಡಿಸಿದರು. ಇದರಲ್ಲಿ 9 ಬೌಂಡರಿ ಮತ್ತು 2 ಸಿಕ್ಸರ್‌ಗಳು ಸೇರಿದ್ದವು. ಇದರೊಂದಿಗೆ ಒಟ್ಟು 5,110 ರನ್ ಮೂಲಕ ಐಪಿಎಲ್ ಅತ್ಯಧಿಕ ರನ್‌ಗಾಗಿ ಅಗ್ರ ಸ್ಥಾನದಲ್ಲಿದ್ದ ಸುರೇಶ್ ರೈನಾ ಅವರನ್ನು ಕೊಹ್ಲಿ ಸರಿಗಟ್ಟಿದ್ದಾರೆ.
ಚೆನ್ನೈ ಸೂಪರ್ ಕಿಂಗ್ಸ್ ನ ಸುರೇಶ್ ರೈನಾ 5,086 ರನ್‌ನೊಂದಿಗೆ ಐಪಿಎಲ್ ಅತ್ಯಧಿಕ ರನ್ ದಾಖಲೆ ಹೊಂದಿದ್ದರು. ಇಷ್ಟೇ ಅಲ್ಲ ಟಿ20 ಕ್ರಿಕೆಟ್‌ನಲ್ಲಿ 8000 ರನ್ ಗಡಿ ದಾಟಿದ ಎರಡನೇ ಆಟಗಾರನಾಗಿಯೂ ಕೊಹ್ಲಿ ಗುರುತಿಸಿಕೊಂಡಿದ್ದಾರೆ. ಈ ಯಾದಿಯಲ್ಲೂ ರೈನಾ ಮೊದಲ ಸ್ಥಾನದಲ್ಲಿದ್ದಾರೆ.
ವಿಶ್ವಮಟ್ಟದಲ್ಲಿ ಟಿ20 ರನ್ ಸಾಧಕರನ್ನು ಪರಿಗಣಿಸಿದರೆ ಮೊದಲ ಸ್ಥಾನದಲ್ಲಿ ವೆಸ್ಟ್ ಇಂಡೀಸ್ ದಾಂಡಿಗ ಕ್ರಿಸ್ ಗೇಲ್ ಇದ್ದಾರೆ. ಗೇಲ್ ಟಿ20ಯಲ್ಲಿ ಒಟ್ಟು 374 ಪಂದ್ಯಗಳಲ್ಲಿ 12,457 ರನ್ ಕಲೆ ಹಾಕಿದ್ದಾರೆ. ದ್ವಿತೀಯ ಸ್ಥಾನದಲ್ಲಿರುವ ನ್ಯೂಜಿಲ್ಯಾಂಡ್‌ನ ಬ್ರೆಂಡನ್ ಮೆಕಲಮ್ 9,922 ರನ್ ದಾಖಲೆ ಹೊಂದಿದ್ದಾರೆ.