ಸಾಲು ಸಾಲು ಸೋಲು, ಐಪಿಎಲ್ ಅನಗತ್ಯ ದಾಖಲೆ ಹಂಚಿಕೊಂಡ ಆರ್‌ಸಿಬಿ!

ಬೆಂಗಳೂರು, ಏಪ್ರಿಲ್ 8: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಒಂದುಸಾರಿಯೂ ಟ್ರೋಫಿ ಗೆದ್ದಿಲ್ಲ ನಿಜ. ಆದರೆ ಆರ್‌ಸಿಬಿ ಸೀಸನ್ ಆರಂಭದಲ್ಲೇ ತೀರಾ ಕಳಪೆ ಪ್ರದರ್ಶನ ನೀಡಿದ್ದು ಈಸಾರಿಯೆ. ಇದಕ್ಕಾಗಿ ಬೆಂಗಳೂರು ಅನಗತ್ಯ ದಾಖಲೆಯನ್ನೂ ನಿರ್ಮಿಸಿದೆ.
ಮೈಖೇಲ್ ಕನ್ನಡ - ಐಪಿಎಲ್ 2019 'ವಿಶೇಷ ಮುಖಪುಟ' (ಫಲಿತಾಂಶಗಳು, ಪಾಯಿಂಟ್ ಟೇಬಲ್, ಕುತೂಹಲಕಾರಿ ಅಂಶಗಳು ಇಲ್ಲಿವೆ!)
ಭಾನುವಾರ (ಏಪ್ರಿಲ್ 7) ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ 20ನೇ ಪಂದ್ಯದಲ್ಲಿ ಬೆಂಗಳೂರು ತಂಡ ಡೆಲ್ಲಿ ವಿರುದ್ಧ 4 ವಿಕೆಟ್‌ನಿಂದ ಸೋಲುವ ಮೂಲಕ ಐಪಿಎಲ್ ನಲ್ಲಿ ಸತತ 6 ಸೋಲುಗಳ ಮುಖಭಂಗ ಅನುಭವಿಸಿತು.
ಹಾಗಂತ ಐಪಿಎಲ್‌ನಲ್ಲಿ ಹೀಗೆ ತಂಡವೊಂದು ಸತತ ಪಂದ್ಯಗಳನ್ನು ಸೋತಿದ್ದು ಇದೇ ಮೊದಲಲ್ಲ. ಐಪಿಎಲ್‌ನಲ್ಲಿ ಸಾಲು ಸೋಲಿನ ಬಾಲ ಹಿಡಿದ ತಂಡಗಳತ್ತ ಒಂದು ಇಣುಕು ಹಾಕೋಣ ಬನ್ನಿ.

ಮಿಸ್ ಫೀಲ್ಡಿಂಗ್ ಚಾಳಿ
ತಂಡದ ಸೋಲಿಗೆ ಮುಖ್ಯ ಕಾರಣವೆಂದರೆ ಬ್ಯಾಟಿಂಗ್ ವಿಭಾಗದ ನಿರ್ಲಕ್ಷ್ಯದ ಆಟ, ಅದಕ್ಕೂ ಮಿಗಿಲಾಗಿ ಮಿಸ್ ಫೀಲ್ಡಿಂಗ್ ಮತ್ತು ಕ್ಯಾಚ್ ಕೈಚೆಲ್ಲುವ ಚಾಳಿ ಆರ್‌ಸಿಬಿ ತಂಡವನ್ನೂ ತಂಡದ ಕಪ್ತಾನ ವಿರಾಟ್ ಕೊಹ್ಲಿಯನ್ನೂ ತೀವ್ರ ಅವಮಾನಕ್ಕೀಡಾಗುವಂತೆ ಮಾಡಿದೆ.

ಸತತ ಸೋತ ತಂಡವಾಗಿ ಆರ್‌ಸಿಬಿ
ಐಪಿಎಲ್‌ನಲ್ಲಿ ಈ ರೀತಿ ಸಾಲುಸಾಲು ಸೋಲಿನ ಅವಮಾನ ಅನುಭವಿಸಿದ್ದು ಬೆಂಗಳೂರು ಮಾತ್ರ ಅಲ್ಲ. ಬೆಂಗಳೂರಿಗೂ ಮೊದಲೇ ಅನೇಕ ತಂಡಗಳು ಸೀಸನ್‌ನ ಆರಂಭದಲ್ಲೇ ಸತತ ಪಂದ್ಯಗಳನ್ನು ಸೋತಿವೆ. ಆದರೆ ಹೀಗೆ ಸತತ ಹೆಚ್ಚು ಪಂದ್ಯಗಳನ್ನು ಸೋತ ತಂಡದ ಬೆನ್ನಹಿಂದೆ ಈಗ ಬೆಂಗಳೂರೂ ನಿಂತಿದೆ.

ಡೆಲ್ಲಿಗೆ ಮೊದಲ ಸ್ಥಾನ
ಐಪಿಎಲ್‌ನಲ್ಲಿ ಸತತ ಆರು ಪಂದ್ಯಗಳ ಸೋತ ಕೆಟ್ಟ ದಾಖಲೆಗೆ ಈಗ ಡೆಲ್ಲಿ ಕ್ಯಾಪಿಟಲ್ಸ್ ಎಂದು ಹೆಸರು ಬದಲಿಸಿಕೊಂಡಿರುವ ಡೆಲ್ಲಿ ಡೇರ್ ಡೆವಿಲ್ಸ್ ಮೊದಲ ಬಾರಿಗೆ ಗುರುತಿಸಿಕೊಂಡಿತ್ತು. 2013ರ ಐಪಿಎಲ್ ಸೀಸನ್‌ನಲ್ಲಿ ಡೆಲ್ಲಿ ಸಾಲು ಸಾಲಾಗಿ ಆರು ಪಂದ್ಯಗಳನ್ನು ಸೋತು ಮುಖಭಂಗಕ್ಕೀಡಾಗಿತ್ತು. ಡೆಲ್ಲಿ ವಿರುದ್ಧ ಸೋತು ಕೆಟ್ಟ ದಾಖಲೆಗಾಗಿ ಡೆಲ್ಲಿ ಜೊತೆಗೇ ಗುರುತಿಸಿಕೊಂಡಿದ್ದು ಆರ್‌ಸಿಬಿಯ ದುರಾದೃಷ್ಟ!

ಮುಂಬೈಗೆ ಸಾಲುಸೋಲು ಮಾಮೂಲು
ಅತೀ ಹೆಚ್ಚು ಸಾರಿ ಸಾಲು ಸಾಲಾಗಿ ಸೋತ ಕೆಟ್ಟ ದಾಖಲೆ ನಿಜವಾಗಿಯೂ ಮುಂಬೈ ಇಂಡಿಯನ್ಸ್‌ಗೆ ಸಲ್ಲಬೇಕು. ಆದರೆ ಅದೃಷ್ಟಕರ ಸಂಗತಿಯೆಂದರೆ ಮುಂಬೈ ಹಾಗೆ ಸೋತೂ ಐಪಿಎಲ್‌ನಲ್ಲಿ ಮೂರುಬಾರಿ ಚಾಂಪಿಯನ್ ಪಟ್ಟ ಗೆದ್ದಿದೆ. ಸತತ 6 ಸಾರಿ ಸೋತ ತಂಡಗಳಲ್ಲಿ ಡೆಲ್ಲಿ (2013)-ಆರ್‌ಸಿಬಿ (2019), 5 ಸಾರಿ ಸೋತ ತಂಡಗಳಲ್ಲಿ ಡೆಕ್ಕನ್ ಚಾರ್ಜರ್ಸ್ (2012), ಮುಂಬೈ ಇಂಡಿಯನ್ಸ್ (2014), 4 ಸಾರಿ ಸೋತ ತಂಡಗಳಲ್ಲಿ ಮುಂಬೈ ಇಂಡಿಯನ್ಸ್ (2008), ಮುಂಬೈ ಇಂಡಿಯನ್ಸ್ (2015) ತಂಡಗಳು ಇವೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications