RCB ಅಭಿಮಾನಿಗಳಿಗೆ ಭಾವನಾತ್ಮಕ ಸಂದೇಶ ರವಾನಿಸಿದ ಕೊಹ್ಲಿ!

'ನೀವು ಇಲ್ಲಾಂದ್ರೆ ನಾವು ಏನು ಅಲ್ಲಾ' ಎಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ನಾಯಕ
ಬೆಂಗಳೂರು, ಮೇ 05: ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಈ ಸಲಾನೂ ಕಪ್ ಗೆದ್ದು ಕೊಡುವಲ್ಲಿ ವಿಫಲಗೊಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಸಂಪೂರ್ಣ ಬೆಂಬಲ ಒದಗಿಸಿದ ಎಲ್ಲಾ ಅಭಿಮಾನಿಗಳಿಗೆ ಕ್ಯಾಪ್ಟನ್ ವಿರಾಟ್ ಕೊಹ್ಲಿಅದ್ಭುತ ರೀತಿಯಲ್ಲಿ ಗೌರವ ಸಲ್ಲಿಸಿದ್ದಾರೆ.
ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಶನಿವಾರ ನಡೆದ ಪಂದ್ಯದಲ್ಲಿ 4 ವಿಕೆಟ್‌ಗಳ ಜಯ ದಾಖಲಿಸಿದ ರಾಯಲ್ ಚಾಲೆಂಜರ್ಸ್, ಪ್ರಸಕ್ತ ಐಪಿಎಲ್‌ನ ತನ್ನ ಅಂತಿಮ ಲೀಗ್ ಪಂದ್ಯದಲ್ಲಿ ತವರಿನ ಪ್ರೇಕ್ಷಕರಿಗೆ ಜಯದ ಸವಿಯನ್ನು ಉಣಬಡಿಸಿ ಅಭಿಯಾನ ಅಂತ್ಯಗೊಳಿಸಿತು.
ಟೂರ್ನಿಯಲ್ಲಿ ಆರ್‌ಸಿಬಿ ಸವಾಲು ಅಂತ್ಯಗೊಂಡ ಬಳಿಕ ಭಾನುವಾರ ತಮ್ಮ ಅಧಿಕೃತ ಟ್ವಿಟರ್ ಖಾತೆ ಮೂಲಕ ಅಭಿಮಾನಿಗಳ ಮನ ಮುಟ್ಟವ ಸಂದೇಶವನ್ನು ವಿರಾಟ್ ಕೊಹ್ಲಿ ಟ್ವೀಟ್ ಮಾಡಿದ್ದಾರೆ.
"ತಂಡದ ಎಲ್ಲಾ ಆಟಗಾರರಿಗೆ, ಸಹಾಯಕ ಸಿಬ್ಬಂದಿಗೆ, ಗ್ರೌಂಡ್ ಸ್ಟಾಫ್ ಮತ್ತು ಅಭಿಮಾನಿಗಳಿಗೆ ಧನ್ಯವಾದಗಳು. ನಿಮ್ಮೆಲ್ಲರ ಪ್ರೀತಿ ಹಾಗೂ ಬೆಂಬಲಕ್ಕೆ ಧನ್ಯವಾದಗಳು.'' ಎಂದು ಟ್ವೀಟ್ ಮಾಡಿರುವ ಕೊಹ್ಲಿ ಅಂತ್ಯದಲ್ಲಿ 'ನೀವು ಇಲ್ಲಾಂದ್ರೆ ನಾವು ಏನು ಅಲ್ಲಾ' ಎಂದು ಕನ್ನಡದಲ್ಲೂ ಸಂದೇಶ ರವಾನಿಸಿ ಅಭಿಮಾನಿಗಳ ಪ್ರೀತಿಗೆ ಪಾತ್ರರಾಗಿದ್ದಾರೆ.
ಕೊಹ್ಲಿ ಅವರ ಈ ಟ್ವೀಟ್‌ಗೆ 3 ಗಂಟೆಗಳ ಒಳಗಾಗಿ 30 ಸಾವಿರಕ್ಕೂ ಅಧಿಕ ಲೈಕ್ಸ್‌ಗಳು ಹರಿದು ಬಂದಿದ್ದು, 5 ಸಾವಿರಕ್ಕೂ ಹೆಚ್ಚು ಬಾರಿ ರೀ ಟ್ವೀಟ್ ಆಗಿದೆ.
ಚೆನ್ನಾಗಿ ಹೇಳಿದ್ರಿ: ಆರ್‌ಸಿಬಿ
ಕ್ಯಾಪ್ಟನ್ ಕೊಹ್ಲಿ ಅವರ ಟ್ವೀಟ್‌ಗೆ ಕೂಡಲೇ ಪ್ರತಿಕ್ರಿಯೆ ನೀಡಿದ ಆರ್‌ಸಿಬಿ ತಂಡ ತನ್ನ ಅಧಿಕೃತ ಖಾತೆಯಲ್ಲಿ 'ಚೆನ್ನಾಗಿ ಹೇಳಿದ್ರಿ' ಎಂದು ರೀ ಟ್ವೀಟ್ ಮಾಡಿದೆ.
ಗೆದ್ರೂ-ಸೋತ್ರೂ ಸಪೂರ್ಟ್ ಇದ್ದೇ ಇರುತ್ತೆ
ರಾಯಲ್ ಚಾಲೆಂಜರ್ಸ್ ತಂಡ ಇನ್ನು ಹತ್ತು ವರ್ಷ ಕಪ್ ಗೆಲ್ಲದೇ ಇದ್ದರೂ ಬೆಂಬಲ ಮಾತ್ರ ನಿಲ್ಲಿಸುವುದಿಲ್ಲ ಎಂದು ಅಭಿಮಾನಿಯೊಬ್ಬರು ಟ್ವೀಟ್ ಮಾಡಿದ್ದಾರೆ.
ಬ್ಲೂ ಜರ್ಸಿ ಪರ್ಮನೆಂಟ್
ಇನ್ನು ಕೆಲ ಅಭಿಮಾನಿಗಳು ಕೊಹ್ಲಿ ಆರ್‌ಸಿಬಿ ತಂಡದ ಕೆಂಪು ಜರ್ಸಿಯಲ್ಲಿ ಇರುವುದು ಕೇವಲ ತಾತ್ಕಾಲಿಕ, ಭಾರತ ತಂಡದ ಬ್ಲೂ ಜರ್ಸಿಯೊಂದೇ ಅವರಿಗೆ ಶಾಶ್ವತ ಎಂದು ಸಂದೇಶ ನೀಡಿದ್ದಾರೆ.
ವಿಶ್ವಕಪ್ ಗೆಲ್ಲೋಣ
ನಿಮ್ಮ ನಗುವೊಂದೇ ನಮಗೆ ಮುಖ್ಯ. ವಿಶ್ವಕಪ್ ಎತ್ತಿ ಹಿಡಿಯೋಣ. ಥ್ಯಾಂಕ್ಯೂ ವಿರಾಟ್ ಎಂದು ತುಂಬು ಹೃದಯದ ಅಭಿಮಾನ ವ್ಯಕ್ತಪಡಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications