For Quick Alerts
ALLOW NOTIFICATIONS  
For Daily Alerts
 

ಐಪಿಎಲ್‌ನಿಂದ 2019ರ ವಿಶ್ವಕಪ್‌ಗೆ ಲಾಭವಾಗಲಿದೆ: ಎಂಎಸ್‌ಕೆ ಪ್ರಸಾದ್

IPL 2019 will benefit India ahead of World Cup 2019, says MSK Prasad

ನವದೆಹಲಿ, ಮಾರ್ಚ್ 2: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2019ರ ಆವೃತ್ತಿಯಿಂದ 2019ರ ವಿಶ್ವಕಪ್‌ಗೂ ಲಾಭವಾಗಲಿದೆ ಎಂದು ಭಾರತ ಕ್ರಿಕೆಟ್ ಆಯ್ಕೆ ಸಮಿತಿಯ ಮುಖ್ಯಸ್ಥ ಎಂಎಸ್‌ಕೆ ಪ್ರಸಾದ್ ಹೇಳಿದ್ದಾರೆ. ಇಂಗ್ಲೆಂಡ್ ಮತ್ತು ವೇಲ್ಸ್‌ನಲ್ಲಿ ಮೇ 30ರಿಂದ ಆರಂಭಗೊಳ್ಳಲಿರುವ ವಿಶ್ವಕಪ್ ಟೂರ್ನಿಗೆ ಸಂಬಂಧಿಸಿ ಐಪಿಎಲ್ ಕೂಡ ಆಟಗಾರರಿಗೆ ನೆರವು ನೀಡಲಿದೆ ಎಂದು ಎಂಎಸ್‌ಕೆ ತಿಳಿಸಿದ್ದಾರೆ.

ಐಪಿಎಲ್ ಟೂರ್ನಿಯ ವೇಳೆ ಭಾರತದ ಪ್ರಮುಖ ಆಟಗಾರರು ವಿಶ್ರಾಂತಿ ಪಡೆಯಬಾರದು. ಬದಲಿಗೆ ಆಡಬೇಕು. ಯಾಕೆಂದರೆ ಟೂರ್ನಿ ಆಟಗಾರರಿಗೆ ಕೌಶಲ ಅಭಿವೃದ್ಧಿಗೆ ನೆರವಾಗುತ್ತದೆ. ಆಟದ ಎಡೆಗಿನ ಅನುಭವ ಹೆಚ್ಚಿಕೊಳ್ಳಲೂ ಈ ಟಿ20 ಮಾದರಿಯ ಟೂರ್ನಿ ಸಹಾಯಕ್ಕೆ ಬರಲಿದೆ ಎಂದು ಪ್ರಸಾದ್ ಅಭಿಪ್ರಾಯಿಸಿದ್ದಾರೆ.

ಐಪಿಎಲ್ ವಿಚಾರದಲ್ಲಿ ನನ್ನಲ್ಲಿ ವಿಭಿನ್ನ ಆಲೋಚನೆಯೊಂದಿದೆ. ಒಂದರ್ಥದಲ್ಲಿ ಅಂತಾರಾಷ್ಟ್ರೀಯ ಟೂರ್ನಿಯೇ ಆಗಿರುವ ಐಪಿಎಲ್, ಆಟದ ವೇಳೆ ಆಟಗಾರರಿಗೆ ಸವಾಲಿನ ಕ್ಷಣಗಳನ್ನು ತಂದಿಡಲಿದೆ. ಬ್ಯಾಟಿಂಗ್, ಬೌಲಿಂಗ್ ಎರಡೂ ವಿಭಾಗವೂ ಸಣ್ಣ ಮಟ್ಟಿನ ಒತ್ತಡವನ್ನು ಒಳಗೊಂಡಿರುತ್ತದೆ. ಇದು ಆಟಗಾರರಿಗೆ ವಿಶ್ವಕಪ್ ವೇಳೆ ಒತ್ತಡ ನಿಭಾಯಿಸುವಿಕೆಗೆ ಅನುಕೂಲವನ್ನೊದಗಿಸಲಿದೆ ಎಂದು ಎಂಎಸ್‌ಕೆ ತಿಳಿಸಿದ್ದಾರೆ.

'ಉದಾಹರಣೆಗೆ ನೀವು 2013 ಮತ್ತು 2017ರ ಚಾಂಪಿಯನ್ಸ್‌ ಟ್ರೋಫಿಯನ್ನು ಗಮನಿಸಿ, ಈ ಟೂರ್ನಿಯಲ್ಲಿ ನಾವು ಉತ್ತಮ ಪ್ರದರ್ಶನ ನೀಡಿದ್ದೆವು. ಕಾರಣ ನಾವು ಐಪಿಎಲ್ ಟೂರ್ನಿಯಲ್ಲೂ ಪಾಲ್ಗೊಂಡಿದ್ದು. ನನ್ನರ್ಥದಲ್ಲಿ ದ್ವಿಪಕ್ಷೀಯ ಸರಣಿಗಳಿಗಿಂತಲೂ ಐಪಿಎಲ್ ಆಟಗಾರರಿಗೆ ಕೌಶಲಾಭಿವೃದ್ಧಿಗೆ ನೆರವಾಗುತ್ತದೆ' ಎಂದು ಎಂಎಸ್‌ಕೆ ಪ್ರಸಾದ್ ವಿವರಿಸಿದರು.

Story first published: Saturday, March 2, 2019, 16:10 [IST]
Other articles published on Mar 2, 2019
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+