Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ನೀನು ನನ್ನ ದಿನವನ್ನು ನಾಶ ಮಾಡಿಬಿಟ್ಟೆ, ವಾರ್ನರ್‌ಗೆ ಹೇಳಿದ ಸ್ಯಾಮ್ಸನ್!

IPL 2019: You destroyed my day, Sanju Samson tells David Warner

ಹೈದರಾಬಾದ್, ಮಾರ್ಚ್ 30: ಶುಕ್ರವಾರ (ಮಾರ್ಚ್ 29) ಸನ್ ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಆಟಗಾರ ಸಂಜು ಸ್ಯಾಮ್ಸನ್ ಐಪಿಎಲ್ 2019ರ ಚೊಚ್ಚಲ ಶತಕ ಬಾರಿಸಿದ್ದರು. ಆದರೆ ರಾಜಸ್ಥಾನ್ ಪಂದ್ಯ ಸೋತಿದ್ದರಿಂದ ಸಂಜು ಸಾಧನೆ ಮೂಲೆ ಗುಂಪಾಯ್ತು. ಈ ಬಗ್ಗೆ ಸ್ಯಾಮ್ಸನ್ ಪ್ರತಿಕ್ರಿಯಿಸಿದ್ದಾರೆ.

'ನೀನು ನನ್ನ ದಿನವನ್ನು ನಾಶ ಮಾಡಿಬಿಟ್ಟೆ. ನೀನು ಅದ್ಭುತ ಬ್ಯಾಟಿಂಗ್ ತೋರಿದ್ದರಿಂದ ತಂಡ ಗೆಲ್ಲಲು ನನ್ನ 100 ರನ್ ಸಾಕಾಗಲಿಲ್ಲ. ನೀನು ಇನ್ನಿಂಗ್ಸ್‌ ಆರಂಭಿಸಿದ ರೀತಿಗೆ ಮತ್ತು ಪವರ್ ಪ್ಲೇನಲ್ಲಿ ನಮ್ಮ ಹಿನ್ನಡೆಯಿಂದ ನಾವು ಪಂದ್ಯ ಸೋತೆವು' ಎಂದು ಸ್ಯಾಮ್ಸನ್, ವಾರ್ನರ್ ಮುಂದೆ ಹೇಳಿಕೊಂಡಿದ್ದಾರೆ.

ಮುಂಬೈ ಇಂಡಿಯನ್ಸ್ vs ಕಿಂಗ್ಸ್‌ XI ಪಂಜಾಬ್, Live ಸ್ಕೋರ್‌ಕಾರ್ಡ್

1
45765

ಟಾಸ್ ಗೆದ್ದು ಬ್ಯಾಟಿಂಗ್‌ಗೆ ಇಳಿದ ರಾಜಸ್ಥಾನ್ ರಾಯಲ್ಸ್ ಪರ ಸಂಜು 55 ಎಸೆತಗಳಿಗೆ 102 ರನ್ ಬಾರಿಸಿದ್ದರು. ರಾಜಸ್ಥಾನ್ ರಾಯಲ್ಸ್ ತಂಡ 198 ರನ್ ಗಳಿಸಿತ್ತು. ಗುರಿ ಬೆನ್ನಟ್ಟಿದ ಸನ್ ರೈಸರ್ಸ್ ಹೈದರಾಬಾದ್ ಪರ ಆರಂಭಿಕ ಆಟಗಾರ ಡೇವಿಡ್ ವಾರ್ನರ್ ಬಿರುಸಿನ ಬ್ಯಾಟಿಂಗ್ ಮೂಲಕ 69 ರನ್ (37 ಎಸೆತ) ಸೇರಿಸಿ ತಂಡ 19ನೇ ಓವರ್‌ನಲ್ಲೇ 201 ರನ್ ಬಾರಿಸಲು ನೆರವಾಗಿದ್ದರು.

ಹೈದರಾಬಾದ್ ತಂಡ ಈ ಪಂದ್ಯವನ್ನು 5 ವಿಕೆಟ್‌ಗಳಿಂದ ಗೆದ್ದಿತ್ತು. 'ನಾವು ಸುಮಾರು 250 ರನ್ ಕಲೆ ಹಾಕಬೇಕಿತ್ತು. ನಿನ್ನಂತವರು ನನ್ನ ಜಾಗದಲ್ಲಿರುತ್ತಿದ್ದರೆ ಅದು ಸಾಧ್ಯವಾಗುತ್ತಿತ್ತು' ಎಂದು ಪಂದ್ಯದ ಬಳಿಕ ಮಾತನಾಡಿದ ಸಂಜು, ವಾರ್ನರ್ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

32ರ ಹರೆಯದ ಅಸ್ಟ್ರೇಲಿಯಾ ಕ್ರಿಕೆಟಿಗ ವಾರ್ನರ್ ಕೂಡ ಸಂಜು ಸ್ಯಾಮ್ಸನ್ ಅವರನ್ನು ಶ್ಲಾಘಿಸಿದ್ದಾರೆ. 'ನಾವು ಉತ್ತಮ ಆರಂಭ ಕಾಣಲು ಸಂಜುವಿನ ಗಂಭೀರ ಬ್ಯಾಟಿಂಗ್‌ ಕಾರಣವಾಗಿತ್ತು. ಹೀಗಾಗಿ ಉತ್ತಮ ಆಟದ ಎಲ್ಲಾ ಕ್ರೆಡಿಟ್ ಸಂಜುಗೆ ಸಲ್ಲಬೇಕು. ಆತ ನಿಜಕ್ಕೂ ಉತ್ತಮ ಆಟವಾಡಿದ' ಎಂದು ವಾರ್ನರ್ ಹೇಳಿದ್ದಾರೆ.

Story first published: Saturday, March 30, 2019, 16:34 [IST]
Other articles published on Mar 30, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+