Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಪಿಎಲ್ 2020: ಸಿಎಸ್‌ಕೆಯ ಓರ್ವ ಆಟಗಾರ ಹಾಗೂ 12 ಸಿಬ್ಬಂದಿಗಳಿಗೆ ಕೊರೊನಾ ವೈರಸ್ ದೃಢ!

IPL 2020: 1 CSK player, 12 support staff members test positive for Covid-19

ಚೆನ್ನೈ ಸೂಪರ್ ಕಿಂಗ್ಸ್‌ ತಂಡದ ಓರ್ವ ಆಟಗಾರ ಹಾಗೂ 12ಸಿಬ್ಬಂದಿಗಳಿಗೆ ಕೊರೊನಾ ವೈರಸ್ ದೃಢಪಟ್ಟಿದೆ ಎಂದು ಇಂಡಿಯಾ ಟುಡೆ ವರದಿ ಮಾಡಿದೆ. ಚೆನ್ನೈ ಸೂಪರ್ ಕಿಂಗ್ಸ್ ಇಂದು ತನ್ನ ಕ್ವಾರಂಟೈನ್ ಅವಧಿಯನ್ನು ವಿಸ್ತರಿಸಿದಾಗಲೇ ಈ ಬಗ್ಗೆ ಅನುಮಾನಗಳು ಮೂಡಿತ್ತು.

ಕೊರೊನ ವೈರಸ್‌ಗೆ ತುತ್ತಾಗಿರುವ ಆಟಗಾರ ಸಹಿತ ಎಲ್ಲಾ ಸಿಬ್ಬಂದಿಗಳ ಆರೋಗ್ಯವೂ ಸ್ಥಿರವಾಗಿದ್ದು ಎಲ್ಲರನ್ನೂ ಪ್ರತ್ಯೇಕವಾಗಿರಿಸಲಾಗಿದೆ ಎಂಬ ಮಾಹಿತಿ ದೊರೆತಿದೆ. ಸಿಎಸ್‌ಕೆ ಫ್ರಾಂಚೈಸಿ ಬಿಸಿಸಿಐನ ಆರೋಗ್ಯ ಅಧಿಕಾರಿಗಳ ನಿರ್ದೇಶನದಂತೆ ಎಲ್ಲಾ ರೀತಿಯ ಸುರಕ್ಷತಾ ಮಾರ್ಗಸೂಚಿಗಳನ್ನು ಅಳವಡಿಸಿಕೊಂಡಿದೆ ಎನ್ನಲಾಗಿದೆ.

ಓರ್ವ ವೇಗಿ ಹಾಗೂ 12 ಸಿಬ್ಬಂದಿಗಳು

ಓರ್ವ ವೇಗಿ ಹಾಗೂ 12 ಸಿಬ್ಬಂದಿಗಳು

ಚೆನ್ನೈ ಸೂಪರ್ ಕಿಂಗ್ಸ್ ತಂಡ ಕಳೆದ 21ನೇ ತಾರೀಕಿನಂದು ದುಬೈಗೆ ಬಂದಿಳಿದಿತ್ತು. ಬಳಿಕ ಎಲ್ಲಾ ಆಟಗಾರರೂ ಕ್ವಾರಂಟೈನಲ್ಲಿದ್ದು ಈ ಅವಧಿಯಲ್ಲಿ ಮೂರು ಕೊರೊನಾ ಪರೀಕ್ಷೆಯಲ್ಲಿ ಭಾಗಿಯಾಗಿದ್ದರು. ಆದರೆ ಈ ಪರೀಕ್ಷೆಯಲ್ಲಿ ಓರ್ವ ವೇಗದ ಬೌಲರ್ ಹಾಗೂ ಸಪೋರ್ಟಿಂಗ್ ಸ್ಟಾಫ್ ಹಾಗೂ ಸಾಮಾಜಿಕ ಜಾಲತಾಣ ವಿಭಾಗದ ಸಿಬ್ಬಂದಿಗಳು ಕೊರೊನಾ ವೈರಸ್‌ಗೆ ತುತ್ತಾಗಿರುವುದು ತಿಳಿದುಬಂದಿದೆ.

ಇಂದಿನಿಂದ ಅಭ್ಯಾಸ ಆರಂಭಿಸಬೇಕಿತ್ತು

ಇಂದಿನಿಂದ ಅಭ್ಯಾಸ ಆರಂಭಿಸಬೇಕಿತ್ತು

ಸಿಎಸ್‌ಕೆ ತಂಡ ಇಂದಿನಿಂದ ತನ್ನ ಅಭ್ಯಾಸ ಶಿಬಿರವನ್ನು ಆರಂಭಿಸಬೇಕಾಗಿತ್ತು. ಆದರೆ ಇದ್ದಕ್ಕಿಂತೆ ಕಾರಣವನ್ನು ನೀಡದೆಯೇ ಈ ಕ್ವಾರಂಟೈನ್ ಅವಧಿಯನ್ನು ವಿಸ್ತರಣೆ ಮಾಡಿತ್ತು. ಸಿಎಸ್‌ಕೆ ತಂಡದ ಈ ನಿರ್ಧಾರಕ್ಕೆ ಕಾರಣ ಈ ಸುದ್ದಿಯೊಂದಿಗೆ ಬಹಿರಂಗವಾಗಿದೆ.

ಅಧಿಕೃತ ಮಾಹಿತಿ ನೀಡಿಲ್ಲ

ಅಧಿಕೃತ ಮಾಹಿತಿ ನೀಡಿಲ್ಲ

ಕೊರೊನಾ ವೈರಸ್ ದೃಢಪಟ್ಟಿರುವ ವಿಚಾರಕ್ಕೆ ಸಂಬಂಧಿಸಿದಂತೆ ಬಿಸಿಸಿಐ ಅಥವಾ ಸಿಎಸ್‌ಕೆ ಫ್ರಾಂಚೈಸಿ ಈವರೆಗೂ ಯಾವುದೇ ಅಧಿಕೃತ ಮಾಹಿತಿಯನ್ನು ನೀಡಿಲ್ಲ. ಮಾಹಿತಿಗಳ ಪ್ರಕಾರ ಚೆನ್ನೈನಲ್ಲಿನ ಕ್ಯಾಂಪ್‌ನಲ್ಲಿ ಆಟಗಾರ ಹಾಗೂ ಸಿಬ್ಬಂಧಿಗಳ ಮಧ್ಯೆ ಸಂಪರ್ಕದಿಂದಾಗಿ ಹರಡಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಚೆನ್ನೈನಲ್ಲಿ ಅಭ್ಯಾಸ ಶಿಬಿರ

ಚೆನ್ನೈನಲ್ಲಿ ಅಭ್ಯಾಸ ಶಿಬಿರ

ಯುಎಇಗೆ ಪ್ರವಾಸವನ್ನು ಕೈಗೊಳ್ಳುವ ಮುನ್ನ ಚೆನ್ನೈ ಸೂಪರ್ ಕಿಂಗ್ಸ್ ತಂಡ ಚೆನ್ನೈನಲ್ಲಿ ತರಬೇತಿ ಶಿಬಿರವನ್ನು ಹಮ್ಮಿಕೊಂಡಿತ್ತು. ಅಧಿಕೃತವಾಗಿ ಶಿಬಿರವನ್ನು ಯುಎಇಗೆ ತೆರಳುವ ಮುನ್ನವೇ ನಡೆಸಿದ ಏಕೈಕ ತಂಡವಾಗಿತ್ತು ಸಿಎಸ್‌ಕೆ. ಇದರಲ್ಲಿ ಹಿರಿಯ ಆಟಗಾರರಾದ ಎಂಸ್ ಧೋನಿ, ಸುರೇಶ್ ರೈನಾ ಹಾಗೂ ಅಂಬಾಟಿ ರಾಯುಡು, ಪಿಯೂಷ್ ಚಾವ್ಲಾ, ದೀಪಕ್ ಚಾಹರ್ ಸೇರಿದಂತೆ ವಿದೇಶಿ ಆಟಗಾರರನ್ನು ಹೊರತು ಪಡಿಸಿ ಬಹುತೇಕ ಆಟಗಾರರು ಪಾಲ್ಗೊಂಡಿದ್ದರು.

Story first published: Friday, August 28, 2020, 21:29 [IST]
Other articles published on Aug 28, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+