ಐಪಿಎಲ್ ಇತಿಹಾಸದಲ್ಲಿ ಮೊದಲ ಬಾರಿಗೆ ಆವೃತ್ತಿಯೊಂದರಲ್ಲಿ ಮೂರನೇ ಸೂಪರ್ ಓವರ್!

ಈ ಬಾರಿಯ ಐಪಿಎಲ್ ಸಾಕಷ್ಟು ರೋಚಕತೆಯಿಂದ ತುಂಬಿರುವುದಕ್ಕೆ ಈವರೆಗೆ ನಡೆದಿರುವ ಪೈಪೋಟಿಯ ಪಂದ್ಯಗಳೇ ಸಾಕ್ಷಿ. ಇದಕ್ಕೆ ಮತ್ತೊಂದು ಇದೀಗ ಸೇರ್ಪಡೆಗೊಂಡಿದೆ. ಭಾನುವಾರ ನಡೆದ ಸನ್‌ಸೈಸರ್ಸ್ ಹೈದರಾಬಾದ್ ಹಾಗೂ ಕೊಲ್ಕತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯ ಟೈ ಫಲಿತಾಂಶದೊಂದಿಗೆ ಮುಕ್ತಾಯವಾಗಿ ಸೂಪರ್ ಓವರ್‌ನಲ್ಲಿ ವಿಜೇತ ತಂಡವನ್ನು ನಿರ್ಧರಿಸಲಾಯಿತು. ಈ ಮೂಲಕ ಇದು ಈ ಟೂರ್ನಿಯ ಮೂರನೇ ಸೂಪರ್ ಓವರ್‌ಗೆ ಸಾಕ್ಷಿಯಾಯಿತು.
ಕಳೆದ 12 ಐಪಿಎಲ್ ಆವೃತ್ತಿಗಳಲ್ಲಿ ಇದೇ ಮೊದಲ ಬಾರಿಗೆ ಆವೃತ್ತಿಯೊಂದರಲ್ಲಿ ಮೂರು ಪಂದ್ಯಗಳು ಟೈ ಫಲಿತಾಂಶವನ್ನು ಕಂಡಂತಾಗಿದೆ. ಹೀಗಾಗಿ ಈ ಹಿಂದಿನ ಟೂರ್ನಿಗಳಿಗಿಂತ ಈ ಬಾರಿಯ ಐಪಿಎಲ್ ವಿಶೇಷವೆನಿಸಿದೆ. 2013 ಹಾಗೂ 2019ರ ಟೂರ್ನಿಗಳು ತಲಾ ಎರಡು ಟೈ ಪಂದ್ಯಗಳಿಗೆ ಸಾಕ್ಷಿಯಾಗಿದ್ದು ಈವರೆಗಿನ ದಾಖಲೆ.
ಇದಕ್ಕೂ ಮುನ್ನ ಈ ಟೂರ್ನಿಯ ಎರಡನೇ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ಪಂದ್ಯ ಟೈ ಫಲಿತಾಂಶದೊಂದಿಗೆ ಅಂತ್ಯವಾಗಿತ್ತು. ಬಳಿಕ ಸೂಪರ್ ಓವರ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಗೆಲುವು ಸಾಧಿಸಿತ್ತು. ಈ ಮೂಲಕ ಟೂರ್ನಿಗೆ ರೋಚಕ ಆರಂಭ ದೊರೆತಿತ್ತು.
ಅದಾದ ಬಳಿಕ ಟೂರ್ನಿಯ ಹತ್ತನೇ ಪಂದ್ಯವೂ ಟೈ ಫಲಿತಾಂಶದೊಂದಿಗೆ ಅಂತ್ಯವಾಗಿತ್ತು. ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಮುಂಬೈ ಇಂಡಿಯನ್ಸ್ ತಂಡಗಳು ಮುಖಾಮುಖಿಯಾಗಿದ್ದ ಈ ಪಂದ್ಯದಲ್ಲಿ ಸೂಪರ್ ಓವರ್‌ನಲ್ಲಿ ಮುಂಬೈ ಇಂಡಿಯನ್ಸ್ ತಂಡಕ್ಕೆ ಸೋಲಿನ ರುಚಿ ತೋರಿಸಿತ್ತು ಆರ್‌ಸಿಬಿ.
ಇದೀಗ ಭಾನುವಾರ ನಡೆದ 35ನೇ ಪಂದ್ಯವೂ ಟೈ ಫಲಿತಾಂಶವನ್ನು ಕಂಡು ಸೂಪರ್ ಓವರ್‌ನಲ್ಲಿ ಕೆಕೆಆರ್ ಗೆದ್ದು ಬೀಗಿತ್ತು. ಟೂರ್ನಿಯಲ್ಲಿ ಇದೇ ಮೊದಲ ಬಾರಿಗೆ ಆಡುವ ಬಳಗದಲ್ಲಿ ಕಾಣಿಸಿಕೊಂಡ ಲೂಕಿ ಫರ್ಗ್ಯೂಸನ್ ಇಂದಿನ ಪಂದ್ಯದಲ್ಲಿ ಹೀರೋ ಎನಿಸಿದರು. ಮೊದಲಿಗೆ ಇಪ್ಪತ್ತು ಓವರ್‌ಗಳ ಪಂದ್ಯದಲ್ಲಿ ಅದ್ಭುತ ದಾಳಿ ಸಂಘಟಿಸಿದ್ದ ಫರ್ಗ್ಯೂಸನ್ ಸೂಪರ್ ಓವರ್‌ನಲ್ಲಿ ಕೇವಲ ಮೂರೇ ಎಸೆತಕ್ಕೆ ಸನ್‌ರೈಸರ್ಸ್ ತಂಡವನ್ನು ಕಟ್ಟಿ ಹಾಕುವಲ್ಲಿ ಯಶಸ್ವಿಯಾದರು. ಈ ಮೂಲಕ ಗೆಲುವಿಗೆ ಕಾರಣರಾದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications