For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2020: ಈ ಸೀಸನ್‌ನಲ್ಲಿ ಕೊಹ್ಲಿ ಮುರಿಯಬಲ್ಲ 4 ದಾಖಲೆಗಳು!

Ipl 2020: 4 Records Virat Kohli Could Break This Season

ಐಪಿಎಲ್ ಸದ್ಯ ಏಪ್ರಿಲ್ 15ರವರೆಗೆ ಮುಂದೂಡಿಕೆಯಾಗಿದೆ. ಈವರೆಗೆಗೂ ಐಪಿಎಲ್ ಆಯೋಜನೆಯ ಬಗ್ಗೆ ಸ್ಪಷ್ತೆ ಇನ್ನೂ ಸಿಕ್ಕಿಲ್ಲ. ಆದರೆ ಬಿಸಿಸಿಐ ಮಾತ್ರ ಐಪಿಎಲ್ ಅನ್ನು ಆಯೋಜನೆ ಮಾಡಲು ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಏನೆಲ್ಲಾ ಆಯ್ಕೆಗಳಿವೆ ಅದನ್ನು ಅವಲೋಕಿಸುತ್ತಿದೆ. ಹೀಗಾಗಿ ಐಪಿಎಲ್ ಮುಂದಕ್ಕೆ ಹೋದರು ರದ್ದಾಗಲಾರದು ಎಂಬುದು ಕ್ರಿಕೆಟ್ ಅಭಿಮಾನಿಗಳ ನಂಬಿಕೆ

ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಐಪಿಎಲ್‌ನಲ್ಲೂ ಉತ್ತಮ ದಾಖಲೆಗಳನ್ನು ಹೊಂದಿದ್ದಾರೆ. ಟೀಮ್ ಇಂಡಿಯಾದಲ್ಲಿ ಸಾಕಷ್ಟು ದಾಖಲೆಗಳನ್ನು ಮಾಡುತ್ತಿರುವ ವಿರಾಟ್ ಕೊಹ್ಲಿ ಐಪಿಎಲ್‌ನಲ್ಲೂ ದಾಖಲೆ ಮಾಡುವುದರಲ್ಲಿ ಹಿಂದೆ ಬಿದ್ದಿಲ್ಲ.

ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ವಿರಾಟ್ ಕೊಹ್ಲಿ ನಾಲ್ಕು ಬಹುಮುಖ್ಯ ದಾಖಲೆಗಳನ್ನು ತಮ್ಮ ಹೆಸರಿಗೆ ಬರೆದುಕೊಳ್ಳುವ ನಿರೀಕ್ಷೆಯಿದೆ. ಅದು ಯಾವುದು ಮುಂದೆ ಓದಿ

ಒಂದೇ ತಂಡದಲ್ಲಿ 200 ಸಿಕ್ಸರ್

ಒಂದೇ ತಂಡದಲ್ಲಿ 200 ಸಿಕ್ಸರ್

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕನಾಗಿರುವ ವಿರಾಟ್ ಕೊಹ್ಲಿ ಆರಂಭದಿಂದಲೂ ಆರ್‌ಸಿಬಿ ತಂಡದ ಸದಸ್ಯರಾಗಿದ್ದಾರೆ. ಆರ್‌ಸಿಬಿ ತಂಡದ ಪರವಾಗಿ ಈವರೆಗೆ 191 ಸಿಕ್ಸರ್‌ಗಳನ್ನು ಸಿಡಿಸಿದ್ದಾರೆ. ವಿರಾಟ್ ಕೊಹ್ಲಿ ಇನ್ನು ಕೇವಲ 9 ಸಿಕ್ಸರ್‌ಗಳನ್ನು ಬಾರಿಸಿದರೆ ಒಂದು ತಂಡದ ಪರವಾಗಿ 200 ಸಿಕ್ಸರ್ ಬಾರಿಸಿದ ಮೊದಲ ಭಾರತೀಯ ಆಟಗಾರ ಎಬ ದಾಖಲೆಯನ್ನು ತಮ್ಮ ಹೆಸರಿಗೆ ಬರೆದುಕೊಳ್ಳಲಿದ್ದಾರೆ.

9000 ಟಿ20 ರನ್ ಗಳಿಸುವ ಮೊದಲ ಭಾರತೀಯ

9000 ಟಿ20 ರನ್ ಗಳಿಸುವ ಮೊದಲ ಭಾರತೀಯ

ಟಿ20 ಕ್ರಿಕೆಟ್‌ನಲ್ಲಿ ಮತ್ತೊಂದು ಮಹತ್ವದ ಮೈಲಿಗಲ್ಲು ಸ್ಥಾಪಿಸುವ ಅವಕಾಶ ವಿರಾಟ್ ಕೊಹ್ಲಿ ಮುಂದಿದೆ. ಸದ್ಯ ವಿರಾಟ್ ಕೊಹ್ಲಿ ಟಿ20 ಕ್ರಿಕೆಟ್‌ನಲ್ಲಿ 8900ರನ್ ದಾಖಲಿಸಿದ್ದಾರೆ. ಇನ್ನು ಕೇವಲ 100 ರನ್‌ಗಳಷ್ಟೇ ಈ ಮೈಲಿಗಲ್ಲು ಸ್ಥಾಪಿಸಲು ಬೇಕಾಗಿದೆ. ವಿರಾಟ್ ಕೊಹ್ಲಿಯ ಬಳಿಕ ರೋಹಿತ್ ಶರ್ಮಾ ಇದ್ದು ರೋಹಿತ್ ಶರ್ಮಾ ಟಿ20 ಕ್ರಿಕೆಟ್‌ನಲ್ಲಿ 8642 ರನ್‌ಗಳಿಸಿದ್ದಾರೆ.

ಸಿಎಸ್‌ಕೆ ವಿರುದ್ಧ 800 ರನ್‌ಗಳಸುವ ಮೊದಲ ಆಟಗಾರ

ಸಿಎಸ್‌ಕೆ ವಿರುದ್ಧ 800 ರನ್‌ಗಳಸುವ ಮೊದಲ ಆಟಗಾರ

ಚೆನ್ನೈ ಸೂಪರ್ ಕಿಂಗ್ಸ್‌ ತಂಡದ ವಿರುದ್ಧ 800 ರನ್ ಗಳಿಸಿದ ಮೊದಲ ಆಟಗಾರ ಎಂಬ ದಾಖಲೆ ಬರೆದುಕೊಳ್ಳುವ ಅವಕಾಶ ವಿರಾಟ್ ಕೊಹ್ಲಿ ಮುಂದಿದೆ. ಐಪಿಎಲ್‌ನಲ್ಲಿ ವಿರಾಟ್ ಕೊಹ್ಲಿ ಚೆನ್ನೈ ವಿರುದ್ಧ 747 ರನ್‌ ಬಾರಿಸಿದ್ದಾರೆ. ಈ ಬಟ್ಟಿಯಲ್ಲೂ ರೋಹಿತ್ ಶರ್ಮಾ ಎರಡನೇ ಸ್ಥಾನದಲ್ಲಿದ್ದು 705 ರನ್‌ಗಳಿಸಿದ್ದಾರೆ. ಈ ಬಾರಿಯ ಐಪಿಎಲ್‌ನಲ್ಲಿ ಚೆನ್ನೈ ವಿರುದ್ಧ ದಾಖಲೆ ಮತ್ತಷ್ಟು ಉತ್ತಮ ಪಡಿಸಿಕೊಳ್ಳು ಇಬ್ಬತರೂ ಆಟಗಾರರಿಗೆ ಅತ್ಯುತ್ತಮ ಅವಕಾಶವಿದೆ.

ಒಂದು ಕ್ರೀಡಾಂಗಣದಲ್ಲಿ 3000ರನ್ ದಾಖಲೆ

ಒಂದು ಕ್ರೀಡಾಂಗಣದಲ್ಲಿ 3000ರನ್ ದಾಖಲೆ

ಒಂದೇ ಕ್ರೀಡಾಂಗಣದಲ್ಲಿ 3000 ರನ್ ದಾಖಲಿಸಿದ ಮೊದಲ ಆಟಗಾರ ಎಂಬ ದಾಖಲೆಗೂ ವಿರಾಟ್ ಕೊಹ್ಲಿ ಸನಿಹದಲ್ಲಿದ್ದಾರೆ. ವಿರಾಟ್ ಕೊಹ್ಲಿಯ ಈ ದಾಖಲೆಗೆ ವೇದಿಕೆಯಾಗಿರುವುದು ಚಿನ್ನಸ್ವಾಮಿ ಕ್ರೀಡಾಂಗಣ. ಈವರೆಗೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ವಿರಾಟ್ ಕೊಹ್ಲಿ ಒಟ್ಟಾರೆಯಾಗಿ 2762 ರನ್‌ಗಳನ್ನು ದಾಖಲಿಸಿದ್ದಾರೆ. ಕೇವಲ ಐಪಿಎಲ್‌ನಲ್ಲಿ ಮಾತ್ರವೇ ವಿರಾಟ್ ಕೊಹ್ಲಿ 2346 ರನ್ ದಾಖಲಿಸಿದ್ದು ಇದು ಕೂಡ ಐಪಿಎಲ್‌ನ ದಾಖಲೆಯಾಗಿದೆ.

Story first published: Thursday, March 19, 2020, 22:04 [IST]
Other articles published on Mar 19, 2020
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+