ಐಪಿಎಲ್ 2020: ಆಸಿಸ್ ಪ್ರವಾಸಕ್ಕೆ ಸೂರ್ಯಕುಮಾರ್ ಆಯ್ಕೆಯಾಗಬೇಕಿತ್ತು: ಆಕಾಶ್ ಚೋಪ್ರ

ಆಸ್ಟ್ರೇಲಿಯಾ ವಿರುದ್ಧದ ಸರಣಿಗೆ ಆಯ್ಕೆಯಾಗದ ಬಳಿಕ ಸೂರ್ಯಕುಮಾರ್ ಯಾದವ್ ಪರವಾಗಿ ಸಾಕಷ್ಟು ಅಭಿಪ್ರಾಯಗಳು ವ್ಯಕ್ತವಾಗುತ್ತಿದೆ. ಆರ್‌ಸಿಬಿ ವಿರುದ್ಧದ ಪಂದ್ಯದಲ್ಲೂ ಮ್ಯಾಚ್ ವಿನ್ನಿಂಗ್ ಪ್ರದರ್ಶನವನ್ನು ನೀಡುವ ಮೂಲಕ ಸೂರ್ಯಕುಮಾರ್ ತಮ್ಮನ್ನು ಕಡೆಗಣಿಸಿದ್ದಕ್ಕೆ ಬ್ಯಾಟ್‌ನಿಂದಲೇ ಉತ್ತರವನ್ನು ನೀಡಿದ್ದಾರೆ. ಈ ಇನ್ನಿಂಗ್ಸ್ ಬಳಿಕ ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಟ್ವಿಟ್ಟರ್‌ನಲ್ಲಿ ಆಕಾಶ್ ಚೋಪ್ರ ಸೂರ್ಯ ಕುಮಾರ್ ಯಾದವ್ ಕಡೆಗಣನೆಯ ಬಗ್ಗೆ ಟ್ವಿಟ್ ಮಾಡಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. "ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಗೆ ಸೂರ್ಯ ಕುಮಾರ್ ಯಾದವ್ ವಿಮಾನ ಹತ್ತಬೇಕಾಗಿತ್ತು" ಎಂದು ಆಕಾಶ್ ಟ್ವೀಟ್ ಮಾಡಿದ್ದಾರೆ.
ಇನ್ನೊಂದು ಟ್ವೀಟ್‌ನಲ್ಲಿ ಆಕಾಶ್ ಚೋಪ್ರ "ನನಗೆ ನಿಮ್ಮ ವರ್ತನೆ ಇಷ್ಟವಾಯಿತು ಊರ್ಯಕುಮಾರ್ ಯಾದವ್-- 'ಮೈ ಹೂ ನಾ'. ಮುಂಬೈ 16 ಅಂಕಗಳಿಗೆ ಏರಿಕೆಯಾಗಿದೆ. ಅಧಿಕೃತವಾಗಿ ಇನ್ನೂ ತೇರ್ಗಡೆ ಹೊಂದಿಲ್ಲ. ಆದರೆ ತೇರ್ಗಡೆ ಹೊಂದಲು ಸರತಿಯಲ್ಲಿ ತುಂಬಾ ಮುಂದಿದೆ." ಎಂದು ಬರೆದುಕೊಂಡಿದ್ದಾರೆ.
ಈ ಮೊದಲು ಕೂಡ ಆಕಾಶ್ ಚೋಪ್ರ ಸೂರ್ಯ ಕುಮಾರ್ ಯಾದವ್ ಬಗ್ಗೆ ಗಟ್ಟಿ ಧ್ವನಿಯಲ್ಲಿ ಮಾತನಾಡಿದ್ದರು. ಭಾರತ ತಂಡದಲ್ಲಿ ಅವರು ಅವಕಾಶವನ್ನು ಪಡೆದುಕೊಳ್ಳಲಿದ್ದಾರೆ ಎಂದು ಭರವಸೆಯನ್ನು ವ್ಯಕ್ತಪಡಿಸಿದ್ದರು. "ಸೂರ್ಯಕುಮಾರ್ ಯಾದವ್ ಆಟದ ಗತಿಯನ್ನೇ ಬದಲಾಯಿಸಬಲ್ಲ ಕ್ರಿಕೆಟಿಗ. ಅವರು ಭಾರತ ಕ್ರಿಕೆಟ್ ತಂಡದ ಭಾಗವಾಗಲಿದ್ದಾರೆ. ಈ ಮಾತನ್ನು ನಾನು ನನ್ನ ಹೃದಯಾಂತರಾಳದಿಂದ ಹೇಳುತ್ತಿದ್ದೇನೆ" ಎಂದಿದ್ದರು ಚೋಪ್ರ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications