ಡೆಲ್ಲಿ ವಿರುದ್ಧದ ಆರ್‌ಸಿಬಿ ಸೋಲಿಗೆ ಕಾರಣ ತಿಳಿಸಿದ ಎಬಿ ಡಿವಿಲಿಯರ್ಸ್
ಗೆಲುವಿನ ಹಾದಿಗೆ ಮರಳಿದೆ ಎಂಬ ನಿರೀಕ್ಷೆ ಹುಟ್ಟಿಸಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಹೀನಾಯ ಪ್ರದರ್ಶನ ನೀಡಿ ಸೋಲು ಅನುಭವಿಸಿದೆ. ಆರಂಭದಲ್ಲಿ ಬೌಲಿಂಗ್ ಮತ್ತು ನಂತರ ಬ್ಯಾಟಿಂಗ್ ಎರಡರಲ್ಲಿಯೂ ಆರ್‌ಸಿಬಿ ಕಳಪೆ ಪ್ರದರ್ಶನ ನೀಡಿದೆ. ಆರ್‌ಸಿಬಿಯ ಕಳಪೆ ಸಾಧನೆ ಅಂಕದಲ್ಲಿ ಮಾತ್ರವಲ್ಲ, ಅದರ ರನ್ ರೇಟ್ ಮೇಲೂ ಹೊಡೆತ ನೀಡಿದೆ.
ಡೆಲ್ಲಿ ಕ್ಯಾಪಿಟಲ್ಸ್ ನೀಡಿದ್ದ 196 ರನ್ ಗುರಿಯನ್ನು ಬೆನ್ನತ್ತಿದ ಆರ್‌ಸಿಬಿ ಕೇವಲ 137 ರನ್ ಗಳಿಸಲು ಶಕ್ತವಾಯಿತು. ಡೆಲ್ಲಿ ಕ್ಯಾಪಿಟಲ್ ಬ್ಯಾಟಿಂಗ್ ವೇಳೆ ಪವರ್ ಪ್ಲೇನಲ್ಲಿ ದುಬಾರಿಯಾಗಿದ್ದ ಬೌಲರ್‌ಗಳು ಮಧ್ಯಂತರ ಅವಧಿಯಲ್ಲಿ ರನ್‌ಗೆ ಕಡಿವಾಣ ಹಾಕಿದ್ದರು. ಆದರೆ ಕೊನೆಯಲ್ಲಿ ಮತ್ತೆ ಕೈಕೊಟ್ಟರು. ಸುಮಾರು 10ರ ಸರಾಸರಿಯಲ್ಲಿ ರನ್ ಗಳಿಸಬೇಕಿದ್ದ ತಂಡ ಆರಂಭದಿಂದಲೇ ಪ್ರಮುಖ ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಅದರಿಂದ ಮತ್ತೆ ಚೇತರಿಸಿಕೊಳ್ಳುವ ಪ್ರಯತ್ನವನ್ನೇ ಮಾಡಲಿಲ್ಲ. ಆಲೌಟ್ ಆಗಲಿಲ್ಲ ಎನ್ನುವುದೊಂದೇ ಅಭಿಮಾನಿಗಳಲ್ಲಿ ಸಮಾಧಾನ ಮೂಡಿಸಿದೆ.
ಉತ್ತಮ ತಂಡವಾಗಿದ್ದರೂ, ಅನುಭವಿ ಮತ್ತು ಯುವ ಆಟಗಾರರು ಸೇರಿಕೊಂಡಿದ್ದರೂ ಸಮಗ್ರ ಪ್ರದರ್ಶನ ಆರ್‌ಸಿಬಿಯಿಂದ ಬರುತ್ತಿಲ್ಲ. ಡೆಲ್ಲಿ ವಿರುದ್ಧದ ಸೋಲಿಗೆ ಕಾರಣ ಏನು ಎಂದು ಆರ್‌ಸಿಬಿಯ ಪ್ರಮುಖ ಆಟಗಾರ ಎಬಿ ಡಿವಿಲಿಯರ್ಸ್ ಹೇಳಿದ್ದಾರೆ. ಮುಂದೆ ಓದಿ.

ಡೆಲ್ಲಿ ಕ್ಯಾಪಿಟಲ್ಸ್‌ಗೆ ಶ್ರೇಯಸ್ಸು
ಆರಂಭದಲ್ಲಿ ಬಿರುಸಿನ ಆಟವಾಡಿದ ಶ್ರೇಯಸ್ಸನ್ನು ಎಬಿಡಿ, ಡೆಲ್ಲಿ ತಂಡಕ್ಕೆ ನೀಡಿದ್ದಾರೆ. 196 ಖಂಡಿತವಾಗಿಯೂ ದೊಡ್ಡ ಮೊತ್ತ. ಅದಕ್ಕೆ ಅವರಿಗೆ ಶ್ರೇಯಸ್ಸು ನೀಡಬೇಕು. ಅವರು ಮೊದಲ ಆರು ಓವರ್ ತುಂಬಾ ಚೆನ್ನಾಗಿ ಆರಂಭ ನೀಡಿದರು. ನಾವು ಸಹ ಅವರನ್ನು ನಿಯಂತ್ರಿಸುವಲ್ಲಿ ಚೆನ್ನಾಗಿ ಆಡಿದ್ದೆವು. ನಮ್ಮ ರಕ್ಷಣಾತ್ಮಕ ಬೌಲಿಂಗ್‌ಅನ್ನು ಅಳವಡಿಸಿಕೊಳ್ಳುವಲ್ಲಿ ನಾವು ಬಹಳ ನಿಧಾನಗತಿ ಅನುಸರಿಸಿದ್ದೆವು ಎಂದಿದ್ದಾರೆ.

ಬೌಲಿಂಗ್ ಸಾಮರ್ಥ್ಯ ಬಳಸಿಕೊಳ್ಳಲಿಲ್ಲ
ಇದು ಪರಿಸ್ಥಿತಿಯನ್ನು ಚೆನ್ನಾಗಿ ಬಳಸಿಕೊಳ್ಳಬೇಕಾದಂತಹ ಪಿಚ್‌ಗಳಲ್ಲಿ ಒಂದು. ಆ ಪರಿಸ್ಥಿತಿಗೆ ಹೊಂದಿಕೊಂಡು ನಿಖರವಾಗಿ ಬೌಲಿಂಗ್ ಮಾಡಬೇಕಿತ್ತು. ದುರದೃಷ್ಟವಶಾತ್ ನಾವು ಸುಮಾರು 20 ರನ್ ಅನ್ನು ಹೆಚ್ಚುವರಿಯಾಗಿ ಬಿಟ್ಟುಕೊಟ್ಟೆವು ಎಂದು ಎಬಿ ಡಿವಿಲಿಯರ್ಸ್, ಬೌಲಿಂಗ್ ವೈಫಲ್ಯದ ಬಗ್ಗೆ ಹೇಳಿದ್ದಾರೆ.
ಆರ್‌ಸಿಬಿ ಸೋಲಿನ ಬೆನ್ನಲ್ಲೇ ಇದೇನು ಹರಿದಾಡುತ್ತಿರುವ ಹೊಸ ಸುದ್ದಿ

ಫೀಲ್ಡಿಂಗ್‌ನಲ್ಲಿ ಯಡವಟ್ಟುಗಳು
ನಾವು ನಮ್ಮ ಕೌಶಲಗಳನ್ನು ಸರಿಯಾಗಿ ಪ್ರದರ್ಶಿಸದ ಆ ದಿನಗಳಲ್ಲಿ ಒಂದು. ನಾವು ಒಂದು ಕ್ಯಾಚ್ ಬಿಟ್ಟೆವು, ಫೀಲ್ಡಿಂಗ್‌ನಲ್ಲಿ ಒಂದಷ್ಟು ತಪ್ಪುಗಳನ್ನು ಮಾಡಿದೆವು. ಕೆಲವು ಗಲಿಬಿಲಿಗಳು ಅವರಿಗೆ ಕೊನೆಯಲ್ಲಿ 20-30 ರನ್‌ಗಳನ್ನು ಹೆಚ್ಚುವರಿಯಾಗಿ ನೀಡಿದೆವು. ಇದು ನಾವು ಬ್ಯಾಟಿಂಗ್‌ಗೆ ಇಳಿಯುವಾಗ ದೊಡ್ಡ ಮಟ್ಟದ ಬದಲಾವಣೆ ಉಂಟುಮಾಡುತ್ತಿತ್ತು ಎಂದಿದ್ದಾರೆ.

ಬಹಳ ಕೆಟ್ಟದಿನ
ಆರ್‌ಸಿಬಿಯ ಬ್ಯಾಟಿಂಗ್‌ನಲ್ಲಿ ಮಾಡಿದ ತಪ್ಪನ್ನು ಅವರು ಒಪ್ಪಿಕೊಂಡಿದ್ದಾರೆ. ಡೆಲ್ಲಿ ವಿರುದ್ಧದ ಪಂದ್ಯದಲ್ಲಿ ಬೌಲಿಂಗ್ ಜತೆಗೆ ಬ್ಯಾಟಿಂಗ್ ಕೂಡ ಕಳಪೆಯಾಗಿತ್ತು. ಇದು ನಮ್ಮ ತಂಡಕ್ಕೆ ಬಹಳ ಕೆಟ್ಟ ದಿನ ಎಂದು ಡಿವಿಲಿಯರ್ಸ್ ಹೇಳಿದ್ದಾರೆ.

ಫೀಲ್ಡಿಂಗ್ ಆಯ್ದುಕೊಂಡಿದ್ದಕ್ಕೆ ಕಾರಣ
ಕಳೆದ ಪಂದ್ಯದಲ್ಲಿ ಚೆನ್ನೈ ಚೇಸಿಂಗ್‌ನಲ್ಲಿ ಗೆದ್ದಿತ್ತು. ನಾವು ಮುಂಬೈ ವಿರುದ್ಧ ಕಳೆದ ಪಂದ್ಯವನ್ನು ಇಲ್ಲಿ ಆಡಿದ್ದೆವು. 200ಕ್ಕೂ ಅಧಿಕದ ಉತ್ತಮ ಮೊತ್ತ ಗಳಿಸಿದ್ದೆವು. ಮುಂಬೈ ಸಹ ಚೇಸಿಂಗ್‌ನಲ್ಲಿ ಸಮೀಪ ಬಂದಿದ್ದರು ಎಂದು ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿದ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ.

ಇಬ್ಬನಿ ಬೀಳದಿರುವುದು ಡೆಲ್ಲಿಗೆ ನೆರವಾಯಿತು
ರಾತ್ರಿ ಅಷ್ಟಾಗಿ ಇಬ್ಬನಿ ಇರಲಿಲ್ಲ. ಎರಡನೆಯ ಇನ್ನಿಂಗ್ಸ್ ವೇಳೆ ಚೆಂಡು ಹೆಚ್ಚು ಒದ್ದೆಯಾಗುತ್ತಿರಲಿಲ್ಲ. ಇದನ್ನು ನೆಪ ಎಂದು ಜಾರಿಕೊಳ್ಳುವುದಿಲ್ಲ. ನಾನು ಮೊದಲೇ ಹೇಳಿದಂತೆ ನಾವು ಚೆನ್ನಾಗಿ ಬ್ಯಾಟಿಂಗ್ ಮಾಡಲಿಲ್ಲ. ಯಾವುದೇ ಉತ್ತಮ ಜತೆಯಾಟ ನೀಡಲಿಲ್ಲ. ಆದರೆ ಸ್ವಲ್ಪ ಒದ್ದೆಯಾಗುವ ವಾತಾವರಣ ಇದ್ದಿದ್ದರೂ ದೆಹಲಿ ಬೌಲರ್‌ಗಳಿಗೆ ಕಷ್ಟವಾಗುತ್ತದೆ ಎಂದು ಲೆಕ್ಕಾಚಾರ ಹಾಕಿದ್ದೆವು. 40 ಓವರ್ ಉದ್ದಕ್ಕೂ ಒಣ ಹವೆ ಇತ್ತು. ಅವರದು ನಮಗಿಂತ ಒಳ್ಳೆಯ ತಂಡವಾಗಿತ್ತು ಎಂದು ಡಿವಿಲಿಯರ್ಸ್ ಹೇಳಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications