Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಪಿಎಲ್: 500ರನ್ ಕ್ಲಬ್ಬಿಗೆ ಡೆಲ್ಲಿ ಕ್ಯಾಪ್ಟನ್ ಶ್ರೇಯಸ್ ಎಂಟ್ರಿ

IPL 2020: After Shikhar Dhawan Shreyas Iyer completes 500 runs this season

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2020ರಲ್ಲಿ 500 ಪ್ಲಸ್ ರನ್ ಗಳಿಸಿದ ಆಟಗಾರರ ಪಟ್ಟಿಗೆ ಡೆಲ್ಲಿ ಕ್ಯಾಪಿಟಲ್ಸ್ ನಾಯಕ ಶ್ರೇಯಸ್ ಅಯ್ಯರ್ ಸೇರ್ಪಡೆಗೊಂಡಿದ್ದಾರೆ.

ಅತಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್ ಮನ್ ಗಳ ಪಟ್ಟಿಯಲ್ಲಿ ಕಾಣಿಸಿಕೊಂಡಿರುವ ಶಿಖರ್ ಧವನ್ ನಂತರ ಶ್ರೇಯಸ್ ಈ ಪಟ್ಟಿ ಸೇರಿದ ಎರಡನೇ ಡೆಲ್ಲಿ ಆಟಗಾರ ಎನಿಸಿಕೊಂಡಿದ್ದಾರೆ.

ಐಪಿಎಲ್ ಅಂತಿಮ ಹಣಾಹಣಿಯಲ್ಲಿ ನಾಯಕ ಶ್ರೇಯಸ್ ಅಯ್ಯರ್ ಅವರು 50 ಎಸೆತಗಳಲ್ಲಿ 65ರನ್(6 ಬೌಂಡರಿ, 2 ಸಿಕ್ಸರ್) ಬಾರಿಸಿದರು. ಈ ಮೂಲಕ ಐಪಿಎಲ್ 2020ರಲ್ಲಿ 500ರನ್ ಗಡಿ ದಾಟಿದರು. ಒಟ್ಟು 17 ಪಂದ್ಯಗಳಿಂದ 519ರನ್ ಗಳಿಸಿದ್ದಾರೆ. ಇದು ಇಲ್ಲಿ ತನಕ ಐಪಿಎಲ್ ನಲ್ಲಿ ಅವರ ಉತ್ತಮ ರನ್ ಗಳಿಕೆಯಾಗಿದೆ. 2019ರಲ್ಲಿ 463 ಗಳಿಸಿದ್ದೆ ಅಧಿಕ ಮೊತ್ತವಾಗಿತ್ತು.

ಕೆಎಲ್ ರಾಹುಲ್ ಅವರು 14 ಪಂದ್ಯಗಳಲ್ಲಿ670ರನ್ ಗಳಿಸಿ, ಈಗಲೂ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದರೆ, ಶಿಖರ್ ಧವನ್ ಆರೆಂಜ್ ಕ್ಯಾಪ್ ರೇಸಿನಲ್ಲಿ ಈಗ ಕೆಎಲ್ ರಾಹುಲ್ ನಂತರ 2ನೇ ಸ್ಥಾನದಲ್ಲಿದ್ದಾರೆ.

ಐಪಿಎಲ್ 2020ರಲ್ಲಿ 500 ಪ್ಲಸ್ ರನ್ ಗಳಿಕೆ ಟಾಪ್ 5
670 ರನ್ : ಕೆಎಲ್ ರಾಹುಲ್
618: ಶಿಖರ್ ಧವನ್
548: ಡೇವಿಡ್ ವಾರ್ನರ್
519: ಶ್ರೇಯಸ್ ಅಯ್ಯರ್
503: ಕ್ವಿಂಟಾನ್ ಡಿ ಕಾಕ್

ಐಪಿಎಲ್ ನಲ್ಲಿ 500 ಪ್ಲಸ್ ಹೆಚ್ಚು ಬಾರಿ ಗಳಿಸಿದ ಆಟಗಾರರ ಪಟ್ಟಿ
ಡೇವಿಡ್ ವಾರ್ನರ್: 5 ಬಾರಿ
ವಿರಾಟ್ ಕೊಹ್ಲಿ: 5 ಬಾರಿ
ಶಿಖರ್ ಧವನ್: 4 ಬಾರಿ

ಕೆಎಲ್ ರಾಹುಲ್, ಕ್ರಿಸ್ ಗೇಲ್, ಸುರೇಶ್ ರೈನಾ, ಗೌತಮ್ ಗಂಭೀರ್ 3 ಬಾರಿ 500ರನ್ ಗಡಿ ದಾಟಿದ್ದಾರೆ. ಈ ಪೈಕಿ ಕೆಎಲ್ ರಾಹುಲ್ ಅವರು ಸತತವಾಗಿ 3 ಬಾರಿ 500 ಪ್ಲಸ್ ರನ್ ಗಳಿಸಿದ್ದರೆ, ವಾರ್ನರ್ ಸತತ 4 ಬಾರಿ ಈ ಸಾಧನೆ ಮಾಡಿದ್ದಾರೆ.

Story first published: Tuesday, November 10, 2020, 22:01 [IST]
Other articles published on Nov 10, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+