ಐಪಿಎಲ್: ಆಟಗಾರರ ಹರಾಜಿಗೂ ಮುನ್ನ ಅರಿಯಬೇಕಾದ ಪ್ರಮುಖಾಂಶಗಳು!

ಬೆಂಗಳೂರು, ನವೆಂಬರ್ 17: ಮುಂದಿನ ತಿಂಗಳು ಐಪಿಎಲ್ 2020ರ ಆಟಗಾರ ಹರಾಜು ಪ್ರಕ್ರಿಯೆ ಕ್ರಿಕೆಟ್ ಪ್ರಿಯರನ್ನು ಸೆಳೆಯಲಿದೆ. ಭಾರತದ ಅದ್ದೂರಿ ಕ್ರಿಕೆಟ್ ಹಬ್ಬ ಐಪಿಎಲ್‌ನಲ್ಲಿ ಒಟ್ಟು 8 ತಂಡಗಳು ಜಿದ್ದಾಜಿದ್ದಿ ನಡೆಸಲಿದ್ದು, ಈ ಎಂಟೂ ತಂಡಗಳು ಆಟಗಾರ ಹರಾಜಿನಲ್ಲಿ ಪಾಲ್ಗೊಂಡು ತಂಡಗಳನ್ನು ಬಲ ಪಡಿಸಿಕೊಳ್ಳಲಿವೆ.
ಶುಕ್ರವಾರ (ನವೆಂಬರ್ 15) ಎಲ್ಲಾ ಫ್ರಾಂಚೈಸಿಗಳು ಮುಂಬರುವ ಹರಾಜಿಗಾಗಿ ಸಿದ್ಧತೆ ನಡೆಸಿಕೊಂಡಿವೆ. ಅಂದರೆ ತಮ್ಮ ತಂಡದಲ್ಲಿ ಉಳಿಯುವ, ಹೊರಹೋಗುವ, ಬೇರೆ ತಂಡಗಳಿಂದ ಖರೀದಿಸಿದ ಆಟಗಾರರ ಅಂತಿಮ ಪಟ್ಟಿಯನ್ನು ತಂಡಗಳು ಪ್ರಕಟಿಸಿವೆ.
ಪ್ರತೀ ಫ್ರಾಂಚೈಸಿಗಳೂ ತಮಗೆ ಬೇಕಾದ ನಿರ್ದಿಷ್ಟ ಸಂಖ್ಯೆಯ ಆಟಗಾರರನ್ನು ಹರಾಜು ದಿನ ಆರಿಸಿಕೊಳ್ಳಲಿವೆ. ಈ ಬಾರಿಯ ಐಪಿಎಲ್ ಆಟಗಾರರ ಹರಾಜಿಗೆ ಸಂಬಂಧಿಸಿ ಪ್ರಮುಖ ಮಾಹಿತಿಗಳು ಇಲ್ಲಿವೆ.

ಹರಾಜು ನಡೆಯೋದೆಲ್ಲಿ?
2020ರ ಐಪಿಎಲ್‌ಗಾಗಿ ಆಟಗಾರರ ಹರಾಜು ಪ್ರಕ್ರಿಯೆ ಡಿಸೆಂಬರ್ 19ರಂದು ಕೋಲ್ಕತ್ತಾದಲ್ಲಿ ನಡೆಯಲಿದೆ. ಕೋಲ್ಕತ್ತಾದಲ್ಲಿ ಹರಾಜು ನಡೆಯುತ್ತಿರುವುದು ಇದೇ ಮೊದಲಬಾರಿ. ಈ ಮೊದಲು ಸಾಮಾನ್ಯವಾಗಿ ಬೆಂಗಳೂರಿನಲ್ಲಿ ಹರಾಜು ನಡೆಯುತ್ತಿತ್ತು.

ಕೋಲ್ಕತ್ತಾದ ತವರು ತಾಣ
ಐಪಿಎಲ್‌ನಲ್ಲಿ ಎರಡು ಬಾರಿ ಚಾಂಪಿಯನ್ ಪಟ್ಟ ಗೆದ್ದಿರುವ ಕೋಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ ತವರು ತಾಣವಾದ ಕೋಲ್ಕತ್ತಾದಲ್ಲಿ ಈ ಬಾರಿ ಆಟಗಾರರ ಹರಾಜು ನಡೆಯುತ್ತಿದೆ. ಕೋಲ್ಕತ್ತಾಕ್ಕೆ 'ಸಿಟಿ ಆಫ್ ಜಾಯ್' (ಖುಷಿಯ ನಗರ) ಎಂಬ ಹೆಸರಿದೆ.

ಹರಾಜಿನ ಆಟಗಾರರ ಸಂಖ್ಯೆ?
ಮುಂಬೈ ಇಂಡಿಯನ್ಸ್, ಚೆನ್ನೈ ಸೂಪರ್ ಕಿಂಗ್ಸ್, ಸನ್ ರೈಸರ್ಸ್ ಹೈದರಾಬಾದ್, ಕಿಂಗ್ಸ್ XI ಪಂಜಾಬ್, ಕೋಲ್ಕತ್ತಾ ನೈಟ್ ರೈಡರ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ರಾಜಸ್ಥಾನ್ ರಾಯಲ್ಸ್ ಹೀಗೆ ಎಲ್ಲಾ ತಂಡಗಳು ಒಟ್ಟು 71 ಆಟಗಾರರನ್ನು ಹೊರಬಿಟ್ಟಿವೆ. 71 ಆಟಗಾರರು ಹರಾಜಿನಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ.

ನೇರ ಪ್ರಸಾರ ಎಲ್ಲಿ?
ಸಾಮಾನ್ಯವಾಗಿ ಮಾರ್ಚ್ ಏಪ್ರಿಲ್‌ನಲ್ಲಿ ನಡೆಯುವ ಐಪಿಎಲ್ ಟೂರ್ನಿಯ ಹರಾಜು ಪ್ರಕ್ರಿಯೆ ಟೂರ್ನಿಗೆ ಸುಮಾರು 3 ತಿಂಗಳು ಮುಂಚಿತವಾಗಿಯೇ ನಡೆಯಲಿದೆ. ಡಿಸೆಂಬರ್ 19ರಂದು ನಡೆಯುವ ಹರಾಜು ಪ್ರಕ್ರಿಯೆ ಹಾಟ್‌ಸ್ಟಾರ್‌ನಲ್ಲಿ ನೇರಪ್ರಸಾರಗೊಳ್ಳಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications