ಐಪಿಎಲ್ 2020ರ ಆವೃತ್ತಿಗೆ ಆಟಗಾರರ ಹರಾಜಿನ ದಿನಾಂಕ, ಸ್ಥಳ ನಿಗದಿ

ಕೋಲ್ಕತ್ತಾ, ನವೆಂಬರ್ 5: ಮುಂಬರಲಿರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ಗಾಗಿ ಆಟಗಾರರ ಹರಾಜು ಪ್ರಕ್ರಿಯೆ ಡಿಸೆಂಬರ್ 19ರಂದು ಕೋಲ್ಕತ್ತಾದಲ್ಲಿ ನಡೆಯಲಿದೆ. ಮುಂಬೈನಲ್ಲಿ ಮಂಗಳವಾರ (ನವೆಂಬರ್ 5) ನಡೆದ ಐಪಿಎಲ್ ಆಡಳಿತ ಸಮಿತಿಯ ಸಭೆಯಲ್ಲಿ ಇದನ್ನು ನಿರ್ಧರಿಸಲಾಯಿತು.
ಐಪಿಎಲ್ ಟೂರ್ನಿ ಸಾಮಾನ್ಯವಾಗಿ ಏಪ್ರಿಲ್-ಮೇನಲ್ಲಿ ನಡೆಯಲಿದೆ. ವಿಶೇಷವೆಂದರೆ ಟೂರ್ನಿಗಾಗಿ ಆಟಗಾರರ ಹರಾಜು ಕೋಲ್ಕತ್ತಾದಲ್ಲಿ ನಡೆಯುತ್ತಿರುವುದು ಮಾತ್ರ ಇದೇ ಮೊದಲಸಾರಿ. ಕೋಲ್ಕತ್ತಾ, ಬಾಲಿವುಡ್ ಸ್ಟಾರ್ ಶಾರುಖ್ ಖಾನ್ ಸಹ ಮಾಲಕತ್ವದ ಕೋಲ್ಕತ್ತಾ ನೈಟ್ ರೈಡರ್ಸ್‌ಗೆ ತವರು ತಾಣವಾಗಿದೆ.
'ಐಪಿಎಲ್ ಆಟಗಾರರ ಹರಾಜು ಡಿಸೆಂಬರ್ 19ರಂದು ಕೋಲ್ಕತ್ತಾದಲ್ಲಿ ನಡೆಯಲಿದೆ. ಹರಾಜು ನಡೆಯುವ ಸಾಂಪ್ರದಾಯಿಕ ತಾಣ ಬೆಂಗಳೂರಿಗೆ ಬದಲಾಗಿ ಈ ಬಾರಿ ಕೋಲ್ಕತ್ತಾದಲ್ಲಿ ಹರಾಜು ನಡೆಸಲು ನಿರ್ಧರಿಸಲಾಗಿದೆ,' ಎಂದು ಐಪಿಎಲ್ ಆಡಳಿತ ಸಮಿತಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕಳೆದ ಬಾರಿ ಅಂದರೆ 2019ರಲ್ಲಿ ಆಟಗಾರರ ಹರಾಜಿಗೆ ಪ್ರತೀ ಫ್ರಾಂಚೈಸಿಗೂ 82 ಕೋ.ರೂ. ಅನುವು ಮಾಡಲಾಗಿತ್ತು. ಈ ಬಾರಿ ಅಂದರೆ 2020ರ ಆವೃತ್ತಿಯಲ್ಲಿ ಪ್ರತಿ ಫ್ರಾಂಚೈಸಿಗೆ 85 ಕೋಟಿ. ರೂ. ಅನುವು ನೀಡಲಾಗಿದೆ. ಕಳೆದ ಬಾರಿ ಮುಂಬೈ ಇಂಡಿಯನ್ಸ್ ಚಾಂಪಿಯನ್ಸ್, ಚೆನ್ನೈ ಸೂಪರ್ ಕಿಂಗ್ಸ್ ರನ್ನರ್ಸ್ ಪ್ರಶಸ್ತಿ ಗೆದ್ದಿತ್ತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications