Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಪಿಎಲ್: ಅಕ್ಸರ್ ಪಟೇಲ್ ನಮಗೆ ದೊಡ್ಡ ಆಸ್ತಿ ಎಂದ ಶಿಖರ್ ಧವನ್

IPL 2020: Axar Patel has been a great asset for us-Shikhar Dhawan

ಶಾರ್ಜಾ: ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಪಂದ್ಯ ಗೆಲ್ಲಿಸಿದ ಕೀರ್ತಿ ಡೆಲ್ಲಿ ಕ್ಯಾಪಿಟಲ್ಸ್ ಆರಂಭಿಕ ಬ್ಯಾಟ್ಸ್‌ಮನ್ ಶಿಖರ್ ಧವನ್‌ಗೆ ಹೇಗೆ ಸಲ್ಲಬೇಕೋ ಹಾಗೇ ತಂಡದ ಗೆಲುವಿನಲ್ಲಿ ಡೆಲ್ಲಿ ಬೌಲರ್ ಅಕ್ಸರ್ ಪಟೇಲ್‌ಗೂ ಸಲ್ಲಬೇಕು. ಡೆಲ್ಲಿ ತಂಡದಲ್ಲಿ 7ನೇ ಬ್ಯಾಟಿಂಗ್ ಕ್ರಮಾಂಕದಲ್ಲಿ ಬಂದಿದ್ದ ಪಟೇಲ್ ಕೇವಲ 5 ಎಸೆತಗಳಲ್ಲಿ 21 ರನ್ ಚಚ್ಚಿದ್ದರು.

ಅಕ್ಸರ್ ಪಟೇಲ್ ಸ್ಫೋಟಕ ಬ್ಯಾಟಿಂಗ್ ನೆರವಿನಿಂದಲೇ ಡೆಲ್ಲಿ ಕ್ಯಾಪಿಟಲ್ಸ್ ತಂಡ ಚೆನ್ನೈ ಸೂಪರ್ ಕಿಂಗ್ಸ್ ನೀಡಿದ್ದ 180 ರನ್ ಗುರಿ ತಲುಪಲು ಸಾಧ್ಯವಾಗಿದ್ದು. ರೋಚಕ ಹಂತಕ್ಕೆ ತಲುಪಿದ್ದ ಪಂದ್ಯವನ್ನು ಅಕ್ಸರ್ ಪಟೇಲ್ ಮೂರು ಸಿಕ್ಸರ್ ಚಚ್ಚಿ ಮುಗಿಸಿಕೊಟ್ಟಿದ್ದರು.

ಶನಿವಾರ (ಅಕ್ಟೋಬರ್ 17) ಶಾರ್ಜಾ ಮೈದಾನದಲ್ಲಿ ನಡೆದಿದ್ದ ಪಂದ್ಯದಲ್ಲಿ ಡೆಲ್ಲಿ ಗೆಲುವಿನ ಹೀರೋ ಅನ್ನಿಸಿರುವ ಅಕ್ಸರ್ ಪಟೇಲ್ ಅವರನ್ನು ಶಿಖರ್ ಧವನ್ ಶ್ಲಾಘಿಸಿದ್ದಾರೆ. ಇದೇ ಪಂದ್ಯದಲ್ಲಿ ಗಬ್ಬರ್ ಸಿಂಗ್ ಧವನ್ ಕೂಡ 58 ಎಸೆತಗಳಿಗೆ 101 ರನ್ ಕೊಡುಗೆ ನೀಡಿದ್ದರು.

'ಅಕ್ಸರ್ ಪಟೇಲ್ ನಮಗೆ ದೊಡ್ಡ ಆಸ್ತಿಯಿದ್ದಂತೆ. ನಾವು ಯಾವಾಗ ಅವರಿಂದ ಉತ್ತಮ ಓವರ್ ನಿರೀಕ್ಷಿಸುತ್ತೇವೊ ಆಗ ಅವರು ಅದನ್ನು ನೀಡುತ್ತಾರೆ. ಅವರು ಸಾಮಾನ್ಯವಾಗಿ ಒಳ್ಳೆಯ ಎಕನಾಮಿಕಲ್ ಬೌಲರ್,' ಎಂದು ಧವನ್ ಹೇಳಿದ್ದಾರೆ. ಸಿಎಸ್‌ಕೆ ವಿರುದ್ಧದ ಪಂದ್ಯದಲ್ಲಿ ಅಕ್ಸರ್ 4 ಓವರ್ ಎಸೆದು 23 ರನ್ ನೀಡಿದ್ದರು. ಆದರೆ ವಿಕೆಟ್ ಲಭಿಸಿರಲಿಲ್ಲ.

Story first published: Sunday, October 18, 2020, 13:02 [IST]
Other articles published on Oct 18, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+