ಐಪಿಎಲ್ 2020: ಆರ್‌ಸಿಬಿ ತಂಡಕ್ಕೆ ಹಿನ್ನಡೆ, ಪ್ರಮುಖ ಬೌಲರ್‌ಗೆ ಗಾಯ

ಬೆಂಗಳೂರು: 13ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಟ್ರೋಫಿ ಗೆಲ್ಲುವ ಆಸೆ ಉಳಿಸಿಕೊಂಡಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಹಿನ್ನಡೆಯ ಸಂಗತಿ ಕೇಳಿ ಬಂದಿದೆ. ತಂಡದ ವೇಗಿ ನವದೀಪ್ ಸೈನಿ ಗಾಯಕ್ಕೀಡಾಗಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಸೈನಿಗೆ ಗಾಯವಾಗಿತ್ತು. ಹೀಗಾಗಿ ಸೈನಿ, ಅಕ್ಟೋಬರ್ 28ರಂದು ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಮೈದಾನಕ್ಕಿಳಿಯೋದು ಅನುಮಾನವಾಗಿದೆ.
ಭಾನುವಾರ (ಅಕ್ಟೋಬರ್ 25) ನಡೆದಿದ್ದ ಐಪಿಎಲ್ 44ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಸೆಣಸಾಡಿದ್ದವು. ಈ ವೇಳೆ ಸಿಎಸ್‌ಕೆ ಇನ್ನಿಂಗ್ಸ್‌ನ 18ನೇ ಓವರ್‌ನಲ್ಲಿ ಸೈನಿ ಕೈ ಬೆರಳಿಗೆ ಗಾಯ ಮಾಡಿಕೊಂಡಿದ್ದರು.
ಸೈನಿಯ ಬಲ ಹೆಬ್ಬೆಟ್ಟಿಗೆ ಗಾಯವಾಗಿದೆ ಎಂಬ ಮಾಹಿತಿ ಲಭಿಸಿದೆ. ಭಾನುವಾರದ ಪಂದ್ಯದಲ್ಲಿ ಸೈನಿ 3 ಎಸೆದಿದ್ದರಾದರೂ ಅವರಿಗೆ ವಿಕೆಟ್ ಲಭಿಸಿರಲಿಲ್ಲ.

ಆರ್‌ಸಿಬಿ ಸಾಧಾರಣ ಮೊತ್ತ
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು, ದೇವದತ್ ಪಡಿಕ್ಕಲ್ 22, ಆ್ಯರನ್ ಫಿಂಚ್ 15, ವಿರಾಟ್ ಕೊಹ್ಲಿ 50, ಎಬಿ ಡಿ ವಿಲಿಯರ್ಸ್ 39 ರನ್ ಸೇರ್ಪಡೆಯೊಂದಿಗೆ 20 ಓವರ್‌ಗೆ 6 ವಿಕೆಟ್ ನಷ್ಟದಲ್ಲಿ 145 ರನ್ ಗಳಿಸಿತ್ತು.

ಹೊರ ನಡೆದಿದ್ದ ಸೈನಿ
ಸಿಎಸ್‌ಕೆ ವಿರುದ್ಧ ಪಂದ್ಯದಲ್ಲಿ ಗಾಯವಾದ ಬಳಿಕ ಸೈನಿ ಮೈದಾನದಿಂದ ಹೊರ ನಡೆದಿದ್ದರು. ಸೈನಿಯ ಗಾಯ ಯಾವಾಗ ವಾಸಿಯಾಗುತ್ತದೆ ಅನ್ನೋದು ಇನ್ನೂ ಸ್ಪಷ್ಟಗೊಂಡಿಲ್ಲ ಎಂದು ಆರ್‌ಸಿಬಿ ಫಿಸಿಯೋ ಇವಾನ್ ಸ್ಪೀಚಿ ಹೇಳಿದ್ದಾರೆ. ಆರ್‌ಸಿಬಿಗೆ ಇನ್ನೂ ಲೀಗ್ ಹಂತದ ಮೂರು ಪಂದ್ಯಗಳು ಬಾಕಿ ಉಳಿದುಕೊಂಡಿವೆ.

ಕಾದು ನೋಡಬೇಕಿದೆ
ಎಎನ್‌ಐ ಜೊತೆ ಮಾತನಾಡಿದ ಸ್ಪೀಚಿ, 'ದುಬೈ ಸ್ಟೇಡಿಯಂನಲ್ಲಿ ಕೊನೇ ಎಸೆತದ ವೇಳೆ ಸೈನಿ ಕೈಗೆ ಗಾಯವಾಗಿದೆ. ಅವರ ಬಲ ಗೈಯ ಹೆಬ್ಬೆರಳಿಗೆ ಚೆಂಡು ಬಡಿದಿದೆ. ಅದೃಷ್ಟವಶಾತ್ ಅವರಿಗೆ ಒಳ್ಳೆಯ ಸರ್ಜನ್ ಇದ್ದಾರೆ. ಅವರು ಚೆನ್ನಾಗಿ ಹೊಲಿಗೆ ಹಾಕಿದ್ದಾರೆ. ಮುಂದಿನ ಪಂದ್ಯಕ್ಕೆ ಅವರು ಸಿದ್ಧರಿದ್ದಾರೆಯೇ ಅನ್ನೋದು ಕಾದು ನೋಡಬೇಕಿದೆ,' ಎಂದಿದ್ದಾರೆ.

ಗಾಯಕ್ವಾಡ್ ಭರ್ಜರಿ ಬ್ಯಾಟಿಂಗ್
ಗುರಿ ಬೆನ್ನಟ್ಟಿದ ಚೆನ್ನೈ ಸೂಪರ್ ಕಿಂಗ್ಸ್, ಆರಂಭಿಕ ಬ್ಯಾಟ್ಸ್‌ಮನ್ ರುತುರಾಜ್ ಗಾಯಕ್ವಾಡ್ 65, ಫಾಫ್ ಡು ಪ್ಲೆಸಿಸ್ 25, ಅಂಬಾಟಿ ರಾಯುಡು 39, ಎಂಎಸ್ ಧೋನಿ 19 ರನ್‌ನೊಂದಿಗೆ 18.4ನೇ ಓವರ್‌ಗೆ 2 ವಿಕೆಟ್ ಕಳೆದು 150 ರನ್ ಬಾರಿಸಿ ಗೆಲುವನ್ನಾಚರಿಸಿತು. ಈ ಪಂದ್ಯ ಗೆದ್ದರೂ ಸಿಎಸ್‌ಕೆ ಪ್ಲೇ ಆಫ್ ಅವಕಾಶ ಕಳೆದುಕೊಂಡಿತ್ತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications