For Quick Alerts
ALLOW NOTIFICATIONS  
For Daily Alerts
 

ಎಂಎಸ್ ಧೋನಿಯ ಸಿಎಸ್‌ಕೆ ಈಗಲೂ ಪ್ಲೇ ಆಫ್‌ಗೆ ಪ್ರವೇಶಿಸಬಲ್ಲದು!

IPL 2020: Can MS Dhoni’s Chennai Super Kings still make it to playoffs?

ದುಬೈ: ಸದ್ಯ ನಡೆಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಭಾರತದ ಮಾಜಿ ನಾಯಕ ಎಂಎಸ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ಸ್ಥಿತಿ ಚೆನ್ನಾಗಿಲ್ಲ. ಆಡಿರುವ 11 ಪಂದ್ಯಗಳಲ್ಲಿ 8 ಪಂದ್ಯಗಳನ್ನು ಸೋತಿರುವ ಸಿಎಸ್‌ಕೆ ಅಂಕಪಟ್ಟಿಯಲ್ಲಿ ಕೊನೇ ಸ್ಥಾನಕ್ಕೆ ಕುಸಿದಿದೆ. ಅಂದರೆ ಅದರರ್ಥ ಸಿಎಸ್‌ಕೆ ಈ ಬಾರಿಯ ಟೂರ್ನಿಯಲ್ಲಿ ಬಹುತೇಕ ಹೊರ ಬಿದ್ದಂತೆಯೇ. ಹಾಗಂತ ಚೆನ್ನೈ ಹೊರ ಬಿದ್ದಾಗಿದೆ ಎಂದು ಈಗಲೇ ಹೇಳುವಂತಿಲ್ಲ. ಸಿಎಸ್‌ಕೆಗೆ ಈಗಲೂ ಪ್ಲೇ ಆಫ್‌ಗೆ ಪ್ರವೇಶಿಸುವ ಅವಕಾಶವಿದೆ ಎನ್ನುತ್ತಿದೆ ಅಂಕಿ ಅಂಶಗಳು!

ಅಕ್ಟೋಬರ್ 23ರಂದು ನಡೆದಿದ್ದ ಐಪಿಎಲ್ 41ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ 10 ವಿಕೆಟ್‌ಗಳ ಹೀನಾಯ ಸೋಲನುಭವಿಸಿತ್ತು. ಈ ಸೋಲು ಸಿಎಸ್‌ಕೆ ನಟ್ ರನ್‌ರೇಟ್ ಇನ್ನೂ ಕುಸಿಯುವಂತೆ ಮಾಡಿದೆ.

ಈಗ ಸಿಎಸ್‌ಕೆ 11ರಲ್ಲಿ 3 ಗೆಲುವಿನೊಂದಿಗೆ 6 ಅಂಕ ಕಲೆ ಹಾಕಿದೆ. -0.733 ನೆಟ್ ರನ್‌ರೇಟ್ ಚೆನ್ನೈ ಹೊಂದಿದೆ. ಹಾಗಾದರೆ ಸಿಎಸ್‌ಕೆ ಪ್ಲೇ ಆಫ್‌ಗೆ ಪ್ರವೇಶಿಸಲು ಏನು ಮಾಡಬೇಕು?

ಪ್ಲೇ ಆಫ್ ಸಾಧ್ಯತೆ ಇನ್ನೂ ಇದೆ

ಪ್ಲೇ ಆಫ್ ಸಾಧ್ಯತೆ ಇನ್ನೂ ಇದೆ

ಚೆನ್ನೈ ಸೂಪರ್ ಕಿಂಗ್ಸ್ ಈಗಿರುವ ಸ್ಥಿತಿಯಲ್ಲಿ ಈಗಲೂ ಲೆಕ್ಕಾಚಾರಗಳ ಆಧಾರದಲ್ಲಿ ಸಿಎಸ್‌ಕೆಗೆ ಪ್ಲೇ ಆಫ್‌ಗೆ ಹೋಗಲು ಅವಕಾಶವಿದೆ. ಐಪಿಎಲ್ ಅಂಕಪಟ್ಟಿಯಲ್ಲಿ ಚೆನ್ನೈ ಅಗ್ರ 4 ಸ್ಥಾನಕ್ಕೇರಬೇಕಾದರೆ ಉಳಿದ ಮೂರು ಪಂದ್ಯಗಳಲ್ಲಿ ದೊಡ್ಡ ಅಂತರದಲ್ಲಿ ಪಂದ್ಯ ಗೆಲ್ಲಬೇಕು.

ದೊಡ್ಡ ಗೆಲುವು ಸಿಕ್ಕರೆ ಚಾನ್ಸ್ ಇದೆ

ದೊಡ್ಡ ಗೆಲುವು ಸಿಕ್ಕರೆ ಚಾನ್ಸ್ ಇದೆ

ಚೆನ್ನೈ ನೆಟ್‌ ರನ್‌ರೇಟ್‌ ತೀರಾ ಕಮ್ಮಿಯಿದೆ. ಒಂದು ವೇಳೆ ಸಿಎಸ್‌ಕೆ ಮುಂದಿನ ಪಂದ್ಯಗಳನ್ನು ಕೆಲವೇ ಅಂತರದಿಂದ ಗೆದ್ದರೆ ನೆಟ್‌ ರನ್‌ರೇಟ್ ಸುಧಾರಿಸುವುದು ತುಂಬಾ ಕಷ್ಟ. ಹೀಗಾಗಿ ಪ್ಲೇ ಆಫ್ ಸಾಧ್ಯತೆಗಳನ್ನು ಹೆಚ್ಚಿಸಿಕೊಳ್ಳಲು ಧೋನಿ ನಾಯಕತ್ವದ ತಂಡ ಮುಂದಿನ ಮೂರೂ ಪಂದ್ಯಗಳಲ್ಲಿ ದೊಡ್ಡ ಅಂತರದಲ್ಲಿ ಗೆಲ್ಲಬೇಕು.

ಬೇರೆ ತಂಡಗಳ ಸೋಲು-ಗೆಲುವೂ ಮುಖ್ಯ

ಬೇರೆ ತಂಡಗಳ ಸೋಲು-ಗೆಲುವೂ ಮುಖ್ಯ

ಚೆನ್ನೈ ತಂಡ ಪ್ಲೇ ಆಫ್‌ಗೆ ಪ್ರವೇಶಿಸುವ ಸಾಧ್ಯತೆ ಸಂಪೂರ್ಣ ಚೆನ್ನೈ ಗೆಲುವೊಂದನ್ನೇ ಅವಲಂಭಿಸಿಲ್ಲ. ಬದಲಿಗೆ ಬೇರೆ ತಂಡಗಳ ಸೋಲು ಗೆಲುವನ್ನು ಅವಂಭಿಸಿದೆ. 6 ಅಂಕಗಳು ಸಿಎಸ್‌ಕೆ ಖಾತೆಯಲ್ಲಿರುವುದರಿಂದ, ಕೆಕೆಆರ್ ಮುಂದಿನ ಮೂರು ಪಂದ್ಯಗಳಲ್ಲಿ ಒಂದರಲ್ಲೂ ಗೆಲ್ಲಬಾರದು. ಅಥವಾ ಸನ್ ರೈಸರ್ಸ್ ಹೈದರಾಬಾದ್ ಮತ್ತು ಕಿಂಗ್ಸ್ 11 ಪಂಜಾಬ್ ಮುಂದಿನ 3 ಪಂದ್ಯಗಳಲ್ಲಿ 1ಕ್ಕಿಂತಲೂ ಹೆಚ್ಚಿನ ಪಂದ್ಯಗಳಲ್ಲಿ ಗೆಲ್ಲಬಾರದು. ಇನ್ನು ರಾಜಸ್ಥಾನ್ ರಾಯಲ್ಸ್ ತಂಡ ಮುಂದಿನ 3 ಪಂದ್ಯಗಳಲ್ಲಿ 2ಕ್ಕಿಂತ ಹೆಚ್ಚಿನ ಪಂದ್ಯಗಳನ್ನು ಗೆಲ್ಲಬಾರದು.

ಪಂದ್ಯ ಸೋತರೆ ಕತೆ ಮುಗಿಯಿತು

ಪಂದ್ಯ ಸೋತರೆ ಕತೆ ಮುಗಿಯಿತು

ಚೆನ್ನೈ ಸೂಪರ್ ಕಿಂಗ್ಸ್‌ಗೆ ಇನ್ನು 3 ಪಂದ್ಯಗಳು ಬಾಕಿ ಉಳಿದಿವೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು, ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಕಿಂಗ್ಸ್ 11 ಪಂಜಾಬ್ ವಿರುದ್ಧ ಚೆನ್ನೈ ಆಡಲಿದೆ. ಇದರಲ್ಲಿ ಒಂದು ಪಂದ್ಯ ಸೋತರೂ ಚೆನ್ನೈ ಹೊರ ಬೀಳಲಿದೆ. ಪಂದ್ಯಗಳನ್ನು ಗೆದ್ದರೂ ಹೆಚ್ಚು ಅಂತರದಿಂದ ಗೆದ್ದರಷ್ಟೇ ಪ್ಲೇ ಆಫ್ ಆಸೆ ಜೀವಂತವಾಗಿರಲಿದೆ.

Story first published: Sunday, October 25, 2020, 8:40 [IST]
Other articles published on Oct 25, 2020
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+