ಐಪಿಎಲ್ 2020: ಮೊದಲ ಪಂದ್ಯದಲ್ಲೇ ಚೆನ್ನೈ ಬೆಂಬಲಿಗರ ಟ್ರೋಲ್‌ಗೆ ತುತ್ತಾದ ಮುರಳಿ ವಿಜಯ್

ಚೆನ್ನೈ ಸೂಪರ್ ಕಿಂಗ್ಸ್ ತಂಡದ ಅನುಭವಿ ಆಟಗಾರ ಸುರೇಶ್ ರೈನಾ ಅಲಭ್ಯತೆಯಲ್ಲಿ ನಿರೀಕ್ಷೆಯಂತೆಯೇ ಮುರಳಿ ವಿಜಯ್ ಈ ಬಾರಿ ಆಡುವ ಅವಕಾಶವನ್ನು ಗಳಿಸಿಕೊಂಡಿದ್ದಾರೆ. ಆದರೆ ಮುರಳಿ ವಿಜಯ್ ಮುಂಬೈ ಇಂಡಿಯನ್ಸ್ ವಿರುದ್ದದ ಮೊದಲ ಪಂದ್ಯದಲ್ಲಿ ಮಾಡಿದ ಯಡವಟ್ಟಿಗೆ ಅಭಿಮಾನಿಗಳ ಕೋಪಕ್ಕೆ ತುತ್ತಾಗಿದ್ದಾರೆ. ಸಾಕಷ್ಟು ಟ್ರೋಲ್‌ಗೆ ಈಡಾಗಿದ್ದಾರೆ.
ಮುಂಬೈ ಇಂಡಿಯನ್ಸ್ ನೀಡಿದ ಸವಾಲಿನ ಮೊತ್ತವನ್ನು ಚೆನ್ನೈ ಸೂಪರ್ ಕಿಂಗ್ಸ್ ಬೆನ್ನತ್ತಿತ್ತು. ಆರಂಭಿಕರಾಗಿ ಶೇನ್ ವಾಟ್ಸನ್ ಜೊತೆಗೆ ಮುರಳಿ ವಿಜಯ್ ಕಣಕ್ಕಿಳಿದಿದ್ದರು. ಆದರೆ ಈ ಇಬ್ಬರೂ ಆರಂಭಿಕರು ಎರಡನೇ ಓವರ್ ಪೂರ್ಣಗೊಳ್ಳುವ ಮುನ್ನವೇ ವಿಕೆಟ್ ಒಪ್ಪಿಸುವ ಮೂಲಕ ಚೆನ್ನೈಗೆ ಸಂಕಷ್ಟದ ಮುನ್ಸೂಚನೆಯನ್ನು ನೀಡಿದ್ದರು. ಅದರಲ್ಲೂ ಮುರಳಿ ವಿಜಯ್ ಲೆಗ್‌ಸೈಡ್‌ನಿಂದ ಆಚೆಗೆ ಹೋಗುತ್ತಿದ್ದ ಚೆಂಡಿಗೆ ಅಂಪೈರ್ ನೀಡಿದ ಔಟ್ ತೀರ್ಪಿಗೆ ಬಲಿಯಾದರು.

ಡಿಆರ್‌ಎಸ್ ಅವಕಾಶ ಬಳಸಿಕೊಳ್ಳದ ವಿಜಯ್
ಮುರಳಿ ವಿಜಯ್ ಓಟ್ ಆದ ಕೂಡಲೇ ಅಂಪಾಯರ್ ತೀರ್ಪು ಮರುಪರಿಶೀಲಿಸುವ ಅವಕಾಶವನ್ನು ಹೊಂದಿದ್ದರು. ಆದರೆ ಅದನ್ನು ಬಳಸಿಕೊಳ್ಳದ ಮುರಳಿ ವಿಜಯ್ ನೇರವಾಗಿ ಫೆವಿಲಿಯನ್ ಹಾದಿ ಹಿಡಿದರು. ಹೀಗಾಗಿ 6 ರನ್‌ಗೆ ಚೆನ್ನೈ ತಂಡ 2ನೇ ವಿಕೆಟ್ ಕಳೆದುಕೊಂಡಂತಾಗಿತ್ತು. ಹೀಗಾಗಿ ತಂಡದ ಗೆಲವು ಕಠಿಣವಾಗುವ ಸಂಭವವಿತ್ತು.

ಭರ್ಜರಿ ಆಟವಾಡಿದ ಡು ಪ್ಲೆಸಿಸ್- ರಾಯುಡು
ಆದರೆ ಅದೃಷ್ಠವಶಾತ್ ಮುಂದೆ ಫಾಪ್ ಡು ಪ್ಲೆಸಿಸ್ ಹಾಗೂ ಅಂಬಾಟಿ ರಾಯುಡು ತಂಡಕ್ಕೆ ನೆರವಾಗುವ ಮೂಲಕ ಗೆಲುವನ್ನು ಖಾತ್ರಿಪಡಿಸಿದ್ದರು. ಇಬ್ಬರೂ ತಲಾ ಅರ್ಧ ಶತಕವನ್ನು ಬಾರಿಸಿ ಭರ್ಜರಿ ಗೆಲುವಿಗೆ ಕಾರಣರಾದರು. ಈ ಮೂಲಕ ಮುರಳಿ ವಿಜಯ್ ಮಾಡಿದ ಯಡವಟ್ಟು ತಂಡಕ್ಕೆ ನಷ್ಟವನ್ನೇನು ಮಾಡಲಿಲ್ಲ.

ಕಾಲೆಳೆಯುತ್ತಿದ್ದಾರೆ ಅಭಿಮಾನಿಗಳು
ಹಾಗಿದ್ದರೂ ಅಭಿಮಾನಿಗಳು ಮುರಳಿ ವಿಜಯ್ ಬಗ್ಗೆ ಸಾಕಷ್ಟು ಟ್ರೋಲ್‌ಗಳನ್ನು ಮಾಡಿತ್ತಿದ್ದಾರೆ. ವಿಕೆಟ್‌ನಿಂದ ಸಾಕಷ್ಟು ಆಚೆಗೆ ಚೆಂಡು ಹೋಗುತ್ತಿದ್ದರೂ ಅದನ್ನು ಗುರುತಿಸಲು ಮುರಳಿ ವಿಜಯ್‌ಗೆ ಸಾಧ್ಯವಾಗಲಿಲ್ಲ ಎಂದು ಕಾಲೆಳೆಯುತ್ತಿದ್ದಾರೆ.

ಲಾಕ್‌ಡೌನ್ ಸಂದರ್ಭದಲ್ಲೂ ಟ್ರೋಲಿಗರಿಗೆ ಆಹಾರವಾಗಿದ್ದ ವಿಜಯ್
ಇನ್ನು ಮುರಳಿ ವಿಜಯ್ ಲಾಕ್‌ಡೌನ್ ಸಂದರ್ಭದಲ್ಲೂ ಟ್ರೋಲಿಗರಿಗೆ ಆಹಾರವಾಗಿದ್ದರು. ವಿಡಿಯ ಸಂವಾದವೊಂದರಲ್ಲಿ ಯಾರೊಂದಿಗೆ ಡಿನ್ನರ್ ಮಾಡಲು ಬಯಸುತ್ತೀರಿ ಎಂಬ ಪ್ರಶ್ನೆಗೆ ವಿಜಯ್ ಆಸ್ಟ್ರೇಲಿಯಾದ ಮಹಿಳಾ ತಂಡದ ಆಟಗಾರ್ತಿ ಇಲಿಯಾಸ್ ಪೆರ್ರಿ ಹೆಸರು ಹೇಳಿದ್ದರು. ಈ ಸಂದರ್ಭದಲ್ಲಿ ನಾನಾ ರೀತಿಯಲ್ಲಿ ಅಭಿಮಾನಿಗಳು ಮುರಳಿ ವಿಜಯ್ ಅವರನ್ನು ತಮಾಷೆಯಾಡಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications