ಕ್ವಾರಂಟೈನ್ ಅವಧಿಯನ್ನು ವಿಸ್ತರಿಸಿದ ಸಿಎಸ್‌ಕೆ: ಸೆಪ್ಟೆಂಬರ್ 1 ರಿಂದ ಟ್ರೈನಿಂಗ್

ಮೂರು ಬಾರಿಯ ಐಪಿಎಎಲ್ ಚಾಂಪಿಯನ್ ತಂಡ ಚೆನ್ನೈ ಸೂಪರ್ ಕಿಂಗ್ಸ್ ತಂಡ ದುಬೈನಲ್ಲಿ ತನ್ನ ಕ್ವಾರಂಟೈನ್ ಅವಧಿಯನ್ನು ವಿಸ್ತರಣೆ ಮಾಡಿಕೊಂಡಿದೆ. ಹೀಗಾಗಿ 13ನೇ ಆವೃತ್ತಿಯ ಐಪಿಎಲ್‌ಗೆ ಮುನ್ನ ತರಬೇತಿ ಶಿಬಿರವನ್ನು ಸೆಪ್ಟೆಂಬರ್ 1 ರಿಂದ ಆರಂಭಿಸಲು ತೀರ್ಮಾನವನ್ನು ತೆಗೆದುಕೊಂಡಿದೆ.
ಚೆನ್ನೈ ಸೂಪರ್ ಕಿಂಗ್ಸ್ ತಂಡ ಕಳೆದ 21ನೇ ತಾರೀಕಿನಂದು ದುಬೈಗೆ ಬಂದಿಳಿದಿತ್ತು. ಶುಕ್ರವಾರದಿಂದ ಸಿಎಸ್‌ಕೆ ತಂಡದ ಅಭ್ಯಾಸ ಶಿಬಿರವನ್ನು ನಿರೀಕ್ಷಿಸಲಾಗಿತ್ತು. ಆದರೆ ಕ್ರಿಕ್ ಇನ್ಫೋ ವರದಿಯ ಪ್ರಕಾರ ಸಿಎಸ್‌ಕೆ ಫ್ರಾಂಚೈಸಿ ತನ್ನ ಕ್ವಾರಂಟೈನ್ ಅವಧಿಯನ್ನುವಿಸ್ತರಿಸಿಕೊಂಡಿದೆ. ಬಿಸಿಸಿಐ ಎಸ್‌ಒಪಿ ಪ್ರಕಾರ 6 ದಿನಗಳ ಕ್ವಾರಂಟೈನ್ ಅವಧಿ ಇಂದಿಗೆ ಶುಕ್ರವಾರಕ್ಕೆ ಪೂರ್ಣಗೊಂಡಿದೆ.
ಸಿಎಸ್‌ಕೆ ಯಾವ ಕಾರಂಕ್ಕಾಗಿ ಈ ನಿರ್ಧಾರಕ್ಕೆ ಬಂದಿದೆ ಎಂಬ ಬಗ್ಗೆ ಇನ್ನು ಮಾಹಿತಿಗಳು ಲಭ್ಯವಾಗಿಲ್ಲ. ಈ ಕುರಿತಾಗಿ ಈವರೆಗೂ ಯಾವುದೇ ಅಧಿಕೃತ ಹೇಳಿಕೆ ಅಥವಾ ಮಾಧ್ಯಮ ಪ್ರಕಟಣೆಯನ್ನು ಸಿಎಸ್‌ಕೆ ಫ್ರಾಂಚೈಸಿ ಹೊರಡಿಸಿಲ್ಲ.
ಕೊರೊನಾ ವೈರಸ್‌ನ ಕಾರಣದಿಂದಾಗಿ ಬಿಸಿಸಿಐ ನಿಯಮಾವಳಿಯನ್ನು ರೂಪಿಸಿದ್ದು ಯುಎಇನಲ್ಲಿ ಆರು ದಿನಗಳ ಕ್ವಾರಂಟೈನ್ ಅವಧಿಯನ್ನು ಪೂರೈಸಬೇಕಾಗುತ್ತದೆ. ಈ ಅವಧಿಯಲ್ಲಿ ಆಟಗಾರರು 1, 3 ಹಾಗೂ 5ನೇ ದಿನ ಕೊರೊನ ಪರೀಕ್ಷೆಗೆ ಒಳಪಡಬೇಕಾಗುತ್ತದೆ. ಇದರಲ್ಲಿ ನೆಗೆಟಿವ್ ವರದಿ ಪಡೆದರೆ ಮಾತ್ರ ತಂಡದ ಜೈವಿಕ ವಲಯಕ್ಕೆ ಸೇರ್ಪಡೆಗೊಂಡು ತರಬೇತಿಯಲ್ಲಿ ತೊಡಗಿಸಿಕೊಳ್ಳಬಹುದಾಗಿದೆ.
ಸಿಎಸ್‌ಕೆ ತಂಡದ ಈ ನಿರ್ಧಾರದಿಂದಾಗಿ ಈ ಬಾರಿಯ ಟೂರ್ನಿಯಲ್ಲಿ ಯುಎಇನಲ್ಲಿ ಶಿಬಿರವನ್ನು ಆರಂಭಿಸುವ ಕೊನೆಯ ತಂಡವಾಗಿ ಉಳಿಯಲಿದೆ. ಆದರೆ ಸಿಎಸ್‌ಕೆ ತಂಡ ಯುಎಇಗೆ ತೆರಳುವ ಮುನ್ನ ತರಬೇತಿ ಶಿಬಿರವನ್ನು ಚೆನ್ನೈನಲ್ಲಿ ಆಯೋಜನೆಯನ್ನು ಮಾಡಿದ ಏಕೈಕ ತಂಡವಾಗಿತ್ತು. ಇದರಲ್ಲಿ ಹಿರಿಯ ಆಟಗಾರರಾದ ಎಂಸ್ ಧೋನಿ, ಸುರೇಶ್ ರೈನಾ ಹಾಗೂ ಅಂಬಾಟಿ ರಾಯುಡು, ಪಿಯೂಷ್ ಚಾವ್ಲಾ ಕೂಡ ಪಾಲ್ಗೊಂಡಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications