ಐಪಿಎಲ್ 2020: ಕರ್ರನ್ ಏಕಾಂಗಿ ಹೋರಾಟ, 114 ರನ್‌ಗಳಿಗೆ ಆಟ ಮುಗಿಸಿದ ಚೆನ್ನೈ ಸೂಪರ್ ಕಿಂಗ್ಸ್

ಮುಂಬೈ ಇಂಡಿಯನ್ಸ್ ವಿರುದ್ದದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಬ್ಯಾಟಿಂಗ್‌ನಲ್ಲಿ ಹೀನಾಯ ಪ್ರದರ್ಶನವನ್ನು ನೀಡಿದೆ. ಸ್ಯಾಮ್ ಕರ್ರನ್ ಅಂತಿಮ ಹಂತದಲ್ಲಿ ಹೋರಾಟ ನಡೆಸಿ ಅರ್ಧ ಶತಕವನ್ನು ದಾಖಲಿಸಿದ ಕಾರಣ ಚೆನ್ನೈ ನೂರರ ಗಡಿ ದಾಟುವಲ್ಲಿ ಯಶಸ್ವಿಯಾಯಿತು. 9 ವಿಕೆಟ್ ಕಳೆದುಕೊಂಡು ಚೆನ್ನೈ ನಿಗದಿತ 20 ಓವರ್‌ಗಳಲ್ಲಿ 114 ರನ್ ಗಳಿಸಿದೆ.
ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿದ ಚೆನ್ನೈ ಸೂಪರ್ ಕಿಂಗ್ಸ್ ಆಘಾತದ ಮೇಲೆ ಆಘಾತವನ್ನು ಅನುಭವಿಸಿತು. ಟ್ರೆಂಟ್ ಬೋಲ್ಟ್ ಹಾಗೂ ಬೂಮ್ರಾ ದಾಳಿಗೆ ಚೆನ್ನೈ ಅಕ್ಷರಶಃ ತತ್ತರಿಸಿ ಹೋಗಿತ್ತು. ಕೇವಲ 3 ರನ್‌ಗಳಿಗೆ 4 ವಿಕೆಟ್ ಕಳೆದುಕೊಂಡ ಚೆನ್ನೈ 25 ರನ್‌ಗೆ 5ನೇ ವಿಕೆಟ್, 30 ರನ್‌ಗೆ 6ನೇ ವಿಕೆಟ್ ಕಳೆದುಕೊಂಡಿತ್ತು.
ಹೀಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ವಿಕೆಟ್ ಮೇಲೆ ವಿಕೆಟ್ ಉರುಳುತ್ತಲೇ ಸಾಗಿತ್ತು. ಸ್ಯಾಮ್ ಕರ್ರನ್ ಹೊರತು ಪಡಿಸಿ ಉಳಿದ ಯಾವುದೇ ಆಟಗಾರ ಕನಿಷ್ಠ ಪ್ರತಿರೋಧ ಒಡ್ಡಲೂ ಸಾಧ್ಯವಾಗಲಿಲ್ಲ. ಸ್ಯಾಮ್ ಕರ್ರನ್ ಮಾತ್ರ 47 ಎಸೆತಗಳನ್ನು ಎದುರಿಸಿ 52 ರನ್ ಗಳಿಸಿದರು. ಈ ಮೂಲಕ ತಂಡವನ್ನು ಕನಿಷ್ಠ ರನ್‌ಗೆ ಆಲೌಟ್ ಆಗುವುದರಿಂದ ಸಾಧ್ಯವಾದಷ್ಟು ತಪ್ಪಿಸುವಲ್ಲಿ ಯಶಸ್ವಿಯಾದರು.
ಮುಂಬೈ ತಂಡದ ಬೌಲಿಂಗ್ ಭೀಕರವಾಗಿತ್ತು. ಟ್ರೆಂಟ್ ಬೋಲ್ಟ್ ಹಾಗೂ ಬೂಮ್ರಾ ಆರಂಭದಲ್ಲೇ ಚೆನ್ನೈ ತಂಡದ ಹೆಡೆಮುರಿಕಟ್ಟುವಲ್ಲಿ ಯಶಸ್ವಿಯಾದರು. ಬೋಲ್ಟ್ 4 ವಿಕೆಟ್ ಉರುಳಿಸಿದರೆ ಬೂಮ್ರಾ 2 ಹಾಗೂ ಸ್ಪಿನ್ನರ್ ರಾಹುಲ್ ಚಾಹರ್ 2 ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications