ಚೆನ್ನೈ ಯಾವುದೇ ಆಟಗಾರರನ್ನೂ ವ್ಯಾಪಾರ ನಡೆಸುತ್ತಿಲ್ಲ: ಸಿಎಸ್‌ಕೆ ಸಿಇಒ

ದುಬೈ: ಕಳೆದ ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಆಡಿದ್ದ ಲೆಗ್ ಸ್ಪಿನ್ನರ್ ಇಮ್ರಾನ್ ತಾಹಿರ್ 17 ಪಂದ್ಯಗಳಲ್ಲಿ 26 ವಿಕೆಟ್‌ಗಳನ್ನು ಪಡೆದು ಪರ್ಪಲ್ ಕ್ಯಾಪ್‌ನೊಂದಿಗೆ ಸೀಸನ್ ಮುಗಿಸಿದ್ದರು. ಆದರೆ ಕಳೆದ ವರ್ಷ ಅದ್ಭುತ ಬೌಲಿಂಗ್ ಸಾಧನೆ ತೋರಿದ್ದ ಇಮ್ರಾನ್ ಈ ಬಾರಿಯ ಸೀಸನ್‌ನಲ್ಲಿ ಇನ್ನೂ ಒಂದೂ ಪಂದ್ಯವನ್ನಾಡಿಲ್ಲ.
ಟೂರ್ನಿ ಶುರುವಾಗಿ ಈಗಾಗಲೇ ಲೀಗ್ ಹಂತದ ಅರ್ಧದಷ್ಟು ಪಂದ್ಯಗಳು ನಡೆದಿವೆ. ಆದರೂ ತಾಹಿರ್ ಆಡದಿದ್ದರಿಂದ ತಾಹಿರ್ ಅವರನ್ನು ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ಮಿಡ್ ಸೀಸನ್ ಟ್ರಾನ್ಸ್‌ಫರ್ ಮುಖಾಂತರ ಮಾರಾಟ ನಡೆಸಲಿದೆಯೇ ಎಂಬ ಮಾತುಗಳು ಕ್ರಿಕೆಟ್ ವಲಯದಲ್ಲಿ ಕೇಳಿ ಬಂದಿತ್ತು. ಇದಕ್ಕೆ ಸಿಎಸ್‌ಕೆ ಸಿಇಒ ಕಾಸಿ ವಿಸ್ವನಾಥನ್ ಸ್ಪಷ್ಟನೆ ನೀಡಿದ್ದಾರೆ.
ಎಎನ್‌ಐ ಜೊತೆ ಮಾತನಾಡಿದ ಕಾಸಿವಿಸ್ವನಾಥನ್, ಯುನೈಟೆಡ್ ಅರಬ್ ಸ್ಟೇಡಿಯಂಗಳ ಪಿಚ್ ಇಬ್ಬರು ವಿದೇಶಿ ಬ್ಯಾಟ್ಸ್‌ಮಮ್‌ಗಳು ಮತ್ತು ಇಬ್ಬರು ವೇಗಿ ಆಲ್ ರೌಂಡರ್‌ಗಳನ್ನು ಆಡಿಸಬೇಕಾದ ಅನಿವಾರ್ಯತೆ ತಂದೊಡ್ಡಿದೆ. ಆದರೆ ಮುಂದಿನ ದಿನಗಳಲ್ಲಿ ಪಿಚ್ ಸ್ಪಿನ್‌ಗೆ ಅನುಕೂಲವೆನಿಸಲು ಶುರುವಾದಾಗ ಇಮ್ರಾನ್ ತಾಹಿರ್ ಅವರನ್ನು ಬಳಸಿಕೊಳ್ಳುವ ಸಾಧ್ಯತೆಯಿದೆ ಎಂದು ಹೇಳಿದ್ದಾರೆ.
'ಟೂರ್ನಿ ಮುಂದುವರೆದಂತೆ ಇಮ್ರಾನ್ ತಾಹಿರ್ ಅವರನ್ನು ಆಡಿಸುವ ಬಗ್ಗೆ ಖಂಡಿತಾವಾಗಿಯೂ ಚಿತ್ರಣ ಲಭಿಸಲಿದೆ. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಇಬ್ಬರು ವಿದೇಶಿ ಬ್ಯಾಟ್ಸ್ಮನ್‌ಗಳು ಮತ್ತು ವೇಗಿ ಆಲ್ ರೌಂಡರ್‌ಗಳನ್ನು ಆಡಿಸಬೇಕಾದ ಪರಿಸ್ಥಿತಿಯಿದೆ,' ಎಂದು ಕಾಸಿ ವಿಸ್ವನಾಥನ್ ಮಾಹಿತಿ ನೀಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications