For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2020: ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸಂಪೂರ್ಣ ಮಾಹಿತಿ ಹಾಗೂ ಪ್ಲಸ್-ಮೈನಸ್ ಅಂಶಗಳು

Ipl 2020, Chennai Super Kings Team: Strength, Weakness And Full Details

ಐಪಿಎಲ್ ಇತಿಹಾಸದ ಅತ್ಯಂತ ಯಶಸ್ವಿ ತಂಡಗಳಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಕೂಡ ಒಂದು. ಅತಿ ಹೆಚ್ಚು ಬಾರಿ ಫೈನಲ್ ಪ್ರವೇಶಿಸಿದ ತಂಡ ಎಮಬ ಹೆಗ್ಗಳಿಕೆಯನ್ನು ಚೆನ್ನೈ ಸೂಪರ್ ಕಿಂಗ್ಸ್ ತಂಡ ಪಡೆದುಕೊಂಡಿದ್ದು 3 ಬಾರಿ ಚಾಂಪಿಯನ್ ಪಟ್ಟಕ್ಕೇರಿದ ದಾಖಲೆಯನ್ನೂ ಹೊಂದಿದೆ.

ಈ ಬಾರಿಯ ಐಪಿಎಲ್ ಆರಂಭಕ್ಕೂ ಮುನ್ನವೇ ಕೆಲ ಅನಿರೀಕ್ಷಿತ ಘಟನೆಗಳು ಚೆನ್ನೈ ಸೂಪರ್ ಕಿಂಗ್ಸ್ ಪಾಳಯದಲ್ಲಿ ನಡೆಯಿತು. ಆದರೆ ಸದ್ಯ ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಎಲ್ಲವೂ ಸುಸೂತ್ರವಾಗಿ ನಡೆಯುತ್ತಿದ್ದು ಆಟಗಾರರು ಕಠಿಣ ಅಭ್ಯಾಸದಲ್ಲಿ ತೊಡಗಿದ್ದಾರೆ. ಈ ಬಾರಿಯೂ ಟೂರ್ನಿಯಲ್ಲಿ ಶ್ರೇಷ್ಠ ಪ್ರದರ್ಶನ ನೀಡುವ ವಿಶ್ವಾಸವನ್ನು ವ್ಯಕ್ತಪಡಿಸುತ್ತಿದ್ದಾರೆ.

ಮೂರು ಬಾರಿಯ ಚಾಂಪಿಯನ್ ಚೆನ್ನಯ ಸೂಪರ್ ಕಿಂಗ್ಸ್ ತಂಡದ ಈ ಬಾರಿಯ ತಂಡ ಹೇಗಿದೆ? ತಂಡದ ಪ್ಲಸ್ ಹಾಗೂ ಮೈನಸ್ ಅಂಶಗಳು ಯಾವುದು ಮುಂದೆ ಓದಿ..

ಪ್ಲಸ್ ಪಾಯಿಂಟ್

ಪ್ಲಸ್ ಪಾಯಿಂಟ್

ಚೆನ್ನೈ ಸೂಪರ್ ಕಿಂಗ್ಸ್‌ಗೆ ವಿಶ್ವ ಶ್ರೇಷ್ಠ ನಾಯಕ ಎಂಎಸ್ ಧೋನಿಯ ನಾಯಕತ್ವ ಇದೆ. ಸುದೀರ್ಘ ಕಾಲ ತಂಡವನ್ನು ಮುನ್ನಡೆಸಿದ ಅನುಭವವಿರುವ ಧೋನಿ ಕಠಿಣ ಸಂದರ್ಭಗಳಲ್ಲಿ ತಂಡವನ್ನು ಸಮಚಿತ್ತದಿಂದ ಮುನ್ನಡೆಸುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಇನ್ನು ತಂಡದಲ್ಲಿನ ಸ್ಪಿನ್ ಬಲ ಈ ಬಾರಿ ಯುಎಇನಲ್ಲಿ ಚೆನ್ನೈಗೆ ಮುಖ್ಯ ಪಾತ್ರವಹಿಸುವ ಸಾಧ್ಯತೆಯಿದೆ. ಹರ್ಭಜನ್ ಸಿಂಗ್ ಅಲಭ್ಯತೆಯ ಹೊರತಾಗಿಯೂ ಚೆನ್ನೈ ತಂಡದಲ್ಲಿ ವಿಶ್ವ ಶ್ರೇಷ್ಠ ಸ್ಪಿನ್ನರ್‌ಗಳಾದ ಇಮ್ರಾನ್ ತಾಹೀರ್, ಪಿಯೂಷ್ ಚಾವ್ಲ, ರವೀಂದ್ರ ಜಡೇಜಾ, ಮಿಚೆಲ್ ಸ್ಯಾಂಟ್ನರ್‌ ಇದ್ದಾರೆ. ಇನ್ನು ಶೇನ್ ವಾಟ್ಸನ್ ರವೀಂದ್ರ ಜಡೇಜಾ, ಡ್ವೆಯ್ನ್ ಬ್ರಾವೋ ಅವರಂತಾ ಸ್ಪೋಟಕ ಆಟಗಾರರ ಬಲವೂ ಧೋನಿ ಬಳಗಕ್ಕಿದೆ.

ಮೈನಸ್ ಪಾಯಿಂಟ್

ಮೈನಸ್ ಪಾಯಿಂಟ್

ಚೆನ್ನೈ ತಂಡದ ಮುಖ್ಯ ಆಟಗಾರ ಸುರೇಶ್ ರೈನಾ ಅನುಪಸ್ಥಿತಿ ಈ ಬಾರಿಯ ಟೂರ್ನಿಯಲ್ಲಿ ತಂಡಕ್ಕೆ ಮುಖ್ಯವಾಗಿ ಕಾಡಲಿದೆ. ಇದರ ಜೊತೆಗೆ ಹರ್ಭಜನ್ ಸಿಂಗ್ ಕೂಡ ಅಲಭ್ಯರಾಗಿದ್ದಾರೆ. ಇನ್ನು ಐಪಿಎಲ್ ಟೂರ್ನಿಯ ಹಿರಿಯ ಆಟಗಾರರ ತಂಡ ಎಂಬ ಹೆಸರನ್ನು ಪಡೆದಿರುವ ತಂಡ ಸಿಎಸ್‌ಕೆ. ಬಹುತೇಕ ಆಟಗಾರರು 35ರ ಆಸುಪಾಸು ಹಾಗೂ ಅದಕ್ಕೂ ಹೆಚ್ಚಿನ ವಯಸ್ಸಿನವರಾಗಿದ್ದಾರೆ. ಇದು ತಂಡಕ್ಕೆ ಹಿನ್ನಡೆಯಾಗುವ ಸಾಧ್ಯತೆಯೂ ಇದೆ. ಇನ್ನು ಧೋನಿ ಸೇರಿದಂತೆ ಅಂಬಾಟಿ ರಾಯುಡು ಸುದೀರ್ಘ ಕಾಲದಿಂದ ಸ್ಪರ್ಧಾತ್ಮಕ ಕ್ರಿಕೆಟ್‌ನಿಂದ ದೂರವಿದ್ದಾರೆ. ಧೋನಿ ಕಳೆದ ವಿಶ್ವಕಪ್‌ನಿಂದ ಹೊರ ಬಂದ ಬಳಿಕ ಕ್ರಿಕೆಟ್‌ನಿಂದ ದೂರವಿದ್ದರೆ ರಾಯುಡು ವಿಶ್ವಕಪ್‌ನಲ್ಲಿ ಸ್ಥಾನವನ್ನು ಪಡೆದುಕೊಳ್ಳದ ನಂತರ ನಿವೃತ್ತಿಯನ್ನೇ ಪಡೆದುಕೊಂಡಿದ್ದರು. ಬಳಿಕ ತಮ್ಮ ನಿರ್ಧಾರ ಬದಲಿಸಿಕೊಂಡಿದ್ದರು.

ಚೆನ್ನೈ ಸೂಪರ್ ಕಿಂಗ್ಸ್ ಸ್ಕ್ವಾಡ್

ಚೆನ್ನೈ ಸೂಪರ್ ಕಿಂಗ್ಸ್ ಸ್ಕ್ವಾಡ್

ಎಂ.ಎಸ್.ಧೋನಿ (ನಾಯಕ & ವಿಕೆಟ್ ಕೀಪರ್), ಇಮ್ರಾನ್ ತಾಹಿರ್, ದೀಪಕ್ ಚಹರ್, ಫಾಫ್ ಡು ಪ್ಲೆಸಿಸ್, ಶಾರ್ದುಲ್ ಠಾಕೂರ್, ಮಿಚೆಲ್ ಸ್ಯಾಂಟ್ನರ್, ಡ್ವೇನ್ ಬ್ರಾವೋ, ಜೋಶ್ ಹ್ಯಾಜಲ್‌ವುಡ್, ಕೇದಾರ್ ಜಾಧವ್, ಕರ್ಣ್ ಶರ್ಮಾ, ಪಿಯೂಷ್ ಚಾವ್ಲಾ, ಅಂಬಾಟಿ ರಾಯುಡು, ಲುಂಗಿ ಎನ್‌ಗಿಡಿ, ಸ್ಯಾಮ್ ಕರ್ರನ್ , ಶೇನ್ ವ್ಯಾಟ್ಸನ್, ಮೋನು ಕುಮಾರ್, ಸಾಯಿ ಕಿಶೋರ್ನಾರಾಯಣ್ ಜಗದೀಸನ್, ರುತುರಾಜ್ ಗಾಯಕವಾಡ್, ಕೆ.ಎಂ.ಆಸಿಫ್, ರವೀಂದ್ರ ಜಡೇಜಾ, ಮುರಳಿ ವಿಜಯ್

ಚೆನ್ನೈ ತಂಡದ ಸಂಪೂರ್ಣ ವೇಳಾಪಟ್ಟಿ

ಚೆನ್ನೈ ತಂಡದ ಸಂಪೂರ್ಣ ವೇಳಾಪಟ್ಟಿ

19 ಸೆಪ್ಟೆಂಬರ್, ಶನಿವಾರ, ಮುಂಬೈ ಇಂಡಿಯನ್ಸ್ Vs ಚೆನ್ನೈ ಸೂಪರ್ ಕಿಂಗ್ಸ್ 7:30 PM ಅಬುಧಾಬಿ
22 ಸೆಪ್ಟೆಂಬರ್, ಮಂಗಳವಾರ, ರಾಜಸ್ಥಾನ್ ರಾಯಲ್ಸ್ Vs ಚೆನ್ನೈ ಸೂಪರ್ ಕಿಂಗ್ಸ್ 7:30 PM ಶಾರ್ಜಾ
25 ಸೆಪ್ಟೆಂಬರ್, ಶುಕ್ರವಾರಚೆನ್ನೈ ಸೂಪರ್ ಕಿಂಗ್ಸ್ Vs ಡೆಲ್ಲಿ ಕ್ಯಾಪಿಟಲ್ಸ್ 7:30 PM ದುಬೈ
02 ಅಕ್ಟೋಬರ್, ಶುಕ್ರವಾರ ಚೆನ್ನೈ ಸೂಪರ್ ಕಿಂಗ್ಸ್ Vs ಸನ್ ರೈಸರ್ಸ್ ಹೈದರಾಬಾದ್ 7:30 PM ದುಬೈ
04 ಅಕ್ಟೋಬರ್, ಭಾನುವಾರ ಕಿಂಗ್ಸ್ ಇಲೆವೆನ್ ಪಂಜಾಬ್ Vs ಚೆನ್ನೈ ಸೂಪರ್ ಕಿಂಗ್ಸ್ 7:30 PM ದುಬೈ
07 ಅಕ್ಟೋಬರ್, ಬುಧವಾರ ಕೋಲ್ಕತಾ ನೈಟ್ ರೈಡರ್ಸ್ Vs ಚೆನ್ನೈ ಸೂಪರ್ ಕಿಂಗ್ಸ್ 7:30 PM ಅಬುಧಾಬಿ
10 ಅಕ್ಟೋಬರ್, ಶನಿವಾರ, ಚೆನ್ನೈ ಸೂಪರ್ ಕಿಂಗ್ಸ್ Vs ರಾಯಲ್ ಚಾಲೆಂಜರ್ಸ್ ಬೆಂಗಳೂರು 7:30 PM ದುಬೈ
13 ಅಕ್ಟೋಬರ್, ಮಂಗಳವಾರ ಸನ್ ರೈಸರ್ಸ್ ಹೈದರಾಬಾದ್ Vs ಚೆನ್ನೈ ಸೂಪರ್ ಕಿಂಗ್ಸ್ 7:30 PM ದುಬೈ
17 ಅಕ್ಟೋಬರ್, ಶನಿವಾರ, ದೆಹಲಿ ಕ್ಯಾಪಿಟಲ್ಸ್ Vs ಚೆನ್ನೈ ಸೂಪರ್ ಕಿಂಗ್ಸ್ 7:30 PM ಶಾರ್ಜಾ
19 ಅಕ್ಟೋಬರ್, ಸೋಮವಾರ, ಚೆನ್ನೈ ಸೂಪರ್ ಕಿಂಗ್ಸ್ Vs ರಾಜಸ್ಥಾನ್ ರಾಯಲ್ಸ್ 7:30 PM ಅಬು ಧಾಬಿ
23 ಅಕ್ಟೋಬರ್, ಶುಕ್ರವಾರ, ಚೆನ್ನೈ ಸೂಪರ್ ಕಿಂಗ್ಸ್ Vs ಮುಂಬೈ ಇಂಡಿಯನ್ಸ್ 7:30 PM ಶಾರ್ಜಾ
24 ಅಕ್ಟೋಬರ್, ಭಾನುವಾರ, ರಾಯಲ್ ಚಾಲೆಂಜರ್ಸ್ ಬೆಂಗಳೂರು Vs ಚೆನ್ನೈ ಸೂಪರ್ ಕಿಂಗ್ಸ್ 3:30 PM ದುಬೈ
29 ಅಕ್ಟೋಬರ್, ಗುರುವಾರ, ಚೆನ್ನೈ ಸೂಪರ್ ಕಿಂಗ್ಸ್ Vs ಕೋಲ್ಕತಾ ನೈಟ್ ರೈಡರ್ಸ್ 7:30 PM ದುಬೈ
01 ನವೆಂಬರ್, ಭಾನುವಾರ, ಚೆನ್ನೈ ಸೂಪರ್ ಕಿಂಗ್ಸ್ Vs ಕಿಂಗ್ಸ್ ಇಲೆವೆನ್ ಪಂಜಾಬ್ 3:30 PM ಅಬುಧಾಬಿ

Story first published: Monday, September 14, 2020, 15:22 [IST]
Other articles published on Sep 14, 2020
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+