For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 4500ರನ್ ಕ್ಲಬ್ ಸೇರಿದ ಯೂನಿವರ್ಸಲ್ ಬಾಸ್ ಗೇಲ್

IPL 2020: Chris Gayle becomes 8th player to cross 4500 IPL runs

ಐಪಿಎಲ್ 2020ರಲ್ಲಿ ಎಂಟು ಪಂದ್ಯಗಳ ನಂತರ ಮೈದಾನಕ್ಕಿಳಿದ ಯೂನಿವರ್ಸಲ್ ಬಾಸ್ ಕ್ರಿಸ್ಟೋಫರ್ ಹೆನ್ರಿ ಗೇಲ್ ಭರ್ಜರಿಯಾಗಿ ತಮ್ಮ ಎಂಟ್ರಿಯನ್ನು ಘೋಷಿಸಿದರು. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ನೀಡಿದ್ದ 172 ರನ್ ಚೇಸ್ ಮಾಡಲು ಪಂಜಾಬ್ ತಂಡದ ಆರಂಭಿಕ ಆಟಗಾರರಾಗಿ ಇಳಿಯದೇ ಮೂರನೇ ಕ್ರಮಾಂಕದಲ್ಲಿ ಗೇಲ್ ಆಡಿದ್ದು ವಿಶೇಷವಾಗಿತ್ತು.

ಈ ಪಂದ್ಯದಲ್ಲಿ 16ರನ್ ಗಳಿಸುತ್ತಿದ್ದಂತೆ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ 4500ರನ್ ಗಳಿಸಿದ ಆಟಗಾರರ ಪಟ್ಟಿ ಸೇರಿದರು. ಈ ಸಾಧನೆ ಮಾಡಿದ 8ನೇ ಆಟಗಾರ ಎನಿಸಿಕೊಂಡಿದರು. ಎಬಿ ಡಿ ವಿಲಿಯರ್ಸ್ ಹಾಗೂ ಡೇವಿಡ್ ವಾರ್ನರ್ ನಂತರ ಈ ಗಡಿ ದಾಟಿದ ಮೂರನೇ ವಿದೇಶಿ ಆಟಗಾರ ಎನಿಸಿಕೊಂಡರು. 2018ರ ಹರಾಜಿನಲ್ಲಿ 2 ಕೋಟಿ ಮೂಲ ಬೆಲೆಗೆ ಕಿಂಗ್ಸ್ ಎಲೆವನ್ ಪಂಜಾಬ್ ಖರೀದಿಸಿದ್ದನ್ನು ಮರೆಯುವಂತಿಲ್ಲ.

45 ಎಸೆತಗಳಲ್ಲಿ 53ರನ್ ಗಳಿಸಿ ಇನ್ನು ಒಂದು ಎಸೆತ ಇರುವಾಗ ರನೌಟ್ ಆದರು. ಕೊನೆ ಓವರ್, ಕೊನೆ ಎಸೆತದ ತನಕ ಎಳೆದು ಕುತೂಹಲ ಮೂಡಿಸಿತ್ತು. ಅಂತಿಮವಾಗಿ 8 ವಿಕೆಟ್ ಗಳಿಂದ ಪಂಜಾಬ್ ಜಯ ದಾಖಲಿಸಿತು.

ಕ್ರಿಸ್ ಗೇಲ್ ಐಪಿಎಲ್ ಅಂಕಿ ಅಂಶ:
ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಮೂಲಕ ಐಪಿಎಲ್ ಆಡಲು ಆರಂಭಿಸಿದ ಕ್ರಿಸ್ ಗೇಲ್ ಕ್ಲಿಕ್ ಆಗಿದ್ದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸೇರಿದ ಮೇಲೆ ಎಂದರೆ ತಪ್ಪಾಗಲಾರದು. 2012ರಲ್ಲಿ 160 ಸ್ಟ್ರೈಕ್ ರೇಟ್ ನಂತೆ 733ರನ್ ಚೆಚ್ಚಿದರು.

125 ಪಂದ್ಯಗಳಲ್ಲಿ 41.13ರನ್ ಸರಾಸರಿಯಂತೆ 151.02 ಸ್ಟ್ರೈಕ್ ರೇಟ್ ನಂತೆ 4484 ಪ್ಲಸ್ ರನ್ ಗಳಿಸಿದ್ದಾರೆ. 6 ಶತಕ, 28 ಅರ್ಧಶತಕ ಗಳಿಸಿದ್ದು, 175 ವೈಯಕ್ತಿಕ ಗರಿಷ್ಠ ಮೊತ್ತ.

ಗೇಲ್ ಐಪಿಎಲ್ ದಾಖಲೆ
* 2013ರಲ್ಲಿ ಪುಣೆ ವಿರುದ್ಧ ಬಾರಿಸಿದ 175ರನ್ ಇಲ್ಲಿತನಕ ವಯಕ್ತಿಕ ಗರಿಷ್ಠ ಮೊತ್ತ.
* ಇನ್ನಿಂಗ್ಸ್ ನಲ್ಲಿ ಅತಿ ಹೆಚ್ಚು(17) ಸಿಕ್ಸರ್ ಬಾರಿಸಿದ ದಾಖಲೆ.
* ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ಸಿಕ್ಸರ್ (329) ಗಳಿಕೆ.

ಐಪಿಎಲ್ 2020: ಸಮಗ್ರ ಸುದ್ದಿ, ವಿಶ್ಲೇಷಣೆ, ಅಂಕಿ ಅಂಶಗಳ್ಳುಳ್ಳ ವಿಶೇಷ ಪುಟ

Story first published: Friday, October 30, 2020, 22:39 [IST]
Other articles published on Oct 30, 2020
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+