ಐಪಿಎಲ್‌ನಲ್ಲಿ ಅತ್ಯಧಿಕ ಸಿಕ್ಸರ್ ಸಿಡಿಸಿದ ಆಟಗಾರರು ಇವರು
ಐಪಿಎಲ್ ಎಂದರೆ ಕ್ರಿಕೆಟ್ ಪ್ರೇಮಿಗಳ ಪಾಲಿಗೆ ಹಬ್ಬದಂತೆ. ಭಾರತ ಮಾತ್ರವಲ್ಲ, ಕ್ರಿಕೆಟ್ ಆಡುವ ಎಲ್ಲ ದೇಶಗಳೂ ಐಪಿಎಲ್‌ನತ್ತ ಬೆರಗಿನಿಂದ ನೋಡುತ್ತವೆ. ಎಷ್ಟೋ ದೇಶಗಳ ಆಟಗಾರರಿಗೆ ಐಪಿಎಲ್‌ನಲ್ಲಿ ಆಡುವ ಅವಕಾಶ ಸಿಗುವುದೇ ದೊಡ್ಡ ಭಾಗ್ಯದಂತಿದೆ. ವಿಶ್ವಕಪ್ ಟೂರ್ನಿಗಳಂತೆಯೇ ಐಪಿಎಲ್ಅನ್ನು ಜನರು ಆಸಕ್ತಿಯಿಂದ ನೋಡುತ್ತಾರೆ.
ಟಿ20 ಎಂದರೆ ಏಕದಿನದ ಪಂದ್ಯದ ಹೈಲೇಟ್ಸ್ ಇದ್ದಂತೆ. ಬೌಂಡರಿ ಸಿಕ್ಸರ್‌ಗಳ ಸುರಿಮಳೆ ಸಾಮಾನ್ಯ. ಪ್ರೇಕ್ಷಕರು ಬಯಸುವುದನ್ನು ಸಹ ಅದನ್ನೇ. ತಮ್ಮ ನೆಚ್ಚಿನ ಆಟಗಾರ ಅಬ್ಬರಿಸುವುದನ್ನು ನಿರೀಕ್ಷಿಸುತ್ತಾರೆ. ಜಗತ್ತಿನ ಅತ್ಯುತ್ತಮ ತಾಂತ್ರಿಕ ಕೌಶಲವುಳ್ಳ ಆಟಗಾರ ಎನಿಸಿಕೊಂಡವರು ಇಲ್ಲಿ ವಿಫಲರಾಗಬಹುದು. ಅಷ್ಟೇನೂ ಪ್ರತಿಭಾವಂತ ಆಟಗಾರನಲ್ಲ ಎಂದು ಕಡೆಗಣಿಸಿದಾತ ಇಲ್ಲಿ ರಾತ್ರೋರಾತ್ರಿ ಹೀರೋ ಆಗಬಹುದು.
ಹೀಗಾಗಿ ಇಲ್ಲಿ ಕ್ಲಾಸಿಕ್ ಆಟಗಾರರಿಗಿಂತಲೂ ದೊಡ್ಡ ಹೊಡೆತಗಳನ್ನು ಬಾರಿಸುವವರಿಗೇ ಆದ್ಯತೆ. ಅಂತಹ ದಾಂಡಿಗರು ಸಿಕ್ಸರ್‌ಗಳ ಹೊಳೆ ಹರಿಸಿದ್ದಾರೆ. ಹೀಗೆ ಐಪಿಎಲ್‌ನ ಇದುವರೆಗಿನ ಆವೃತ್ತಿಗಳಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳನ್ನು ಸಿಡಿಸಿರುವವರ ಪಟ್ಟಿ ಇಲ್ಲಿದೆ. ಮುಂದೆ ಓದಿ.

ಕ್ರಿಸ್ ಗೇಲ್
ಪ್ರಸಕ್ತ ಸಾಲಿನ ಐಪಿಎಲ್‌ನಲ್ಲಿ ವೆಸ್ಟ್ ಇಂಡೀಸ್‌ನ ಸ್ಫೋಟಕ ಬ್ಯಾಟ್ಸ್‌ಮನ್ ಕ್ರಿಸ್ ಗೇಲ್ ಇದುವರೆಗೂ ಒಂದೂ ಪಂದ್ಯವನ್ನು ಆಡಿಲ್ಲ. ಅಲ್ಲದೆ, ಈ ಹಿಂದಿನ ಆವೃತ್ತಿಗಳಲ್ಲಿಯೂ ಅನೇಕ ಪಂದ್ಯಗಳನ್ನು ತಪ್ಪಿಸಿಕೊಂಡಿದ್ದರು. ಆದರೂ ಅವರು ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಗೇಲ್ ಇದುವರೆಗೂ 125 ಪಂದ್ಯಗಳಲ್ಲಿ 326 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ.

ಎಬಿ ಡಿವಿಲಿಯರ್ಸ್
ಎರಡನೆಯ ಸ್ಥಾನದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಪ್ರತಿನಿಧಿಸುತ್ತಿರುವ ಎಬಿ ಡಿವಿಲಿಯರ್ಸ್ ಇದ್ದಾರೆ. ಆದರೆ ಮೊದಲ ಸ್ಥಾನದಲ್ಲಿರುವ ಗೇಲ್‌ಗೂ ಡಿವಿಲಿಯರ್ಸ್‌ಗೂ 107 ಸಿಕ್ಸರ್‌ಗಳ ಅಂತರವಿದೆ. 159 ಪಂದ್ಯಗಳನ್ನು ಆಡಿರುವ ಡಿವಿಲಿಯರ್ಸ್ 219 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ.

ಎಂಎಸ್ ಧೋನಿ
ಈ ಬಾರಿಯ ಐಪಿಎಲ್‌ನಲ್ಲಿ ರನ್ ಗಳಿಸಲು ಪರದಾಡುತ್ತಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಎಂಎಸ್ ಧೋನಿ ಮೂರನೇ ಸ್ಥಾನದಲ್ಲಿದ್ದಾರೆ. 196 ಪಂದ್ಯಗಳನ್ನು ಆಡಿರುವ ಧೋನಿ, 213 ಸಿಕ್ಸರ್‌ಗಳನ್ನು ಸಿಡಿಸಿದ್ದಾರೆ.

ಉಳಿದ ಆಟಗಾರರ ವಿವರ
* ರೋಹಿತ್ ಶರ್ಮಾ - 208
* ಸುರೇಶ್ ರೈನಾ - 194
* ವಿರಾಟ್ ಕೊಹ್ಲಿ - 193
* ಕೀರನ್ ಪೊಲಾರ್ಡ್- 189
* ಡೇವಿಡ್ ವಾರ್ನರ್- 186
* ಶೇನ್ ವಾಟ್ಸನ್- 185
* ಯೂಸುಫ್ ಪಠಾಣ್- 158
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications