ಐಪಿಎಲ್ 2020: ಪವರ್ ಪ್ಲೇನಲ್ಲಿ ಕೆಟ್ಟ ದಾಖಲೆ ಬರೆದ ಚೆನ್ನೈ ಸೂಪರ್ ಕಿಂಗ್ಸ್

ಮುಂಬೈ ಇಂಡಿಯನ್ಸ್ ವಿರುದ್ದದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಕಳಪೆ ಪ್ರದರ್ಶನವನ್ನು ನೀಡಿದೆ. ಮುಂಬೈ ವೇಗಿಗಳ ದಾಳಿಗೆ ಚೆನ್ನೈ ದಾಂಡಿಗರು ಫೆವಿಲಿಯನ್ ಪೆರೇಡ್ ನಡೆಸಿದ್ದಾರೆ. ಐಪಿಎಲ್ ಇತಿಹಾಸದಲ್ಲಿ ಚೆನ್ನೈ ಪವರ್‌ಪ್ಲೇನಲ್ಲಿ ತನ್ನ ಕೆಟ್ಟ ದಾಖಲೆಯನ್ನು ಬರೆದುಕೊಂಡಿದೆ.
ಶಾರ್ಜಾದಲ್ಲಿ ನಡೆದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ತನ್ನ ಇತಿಹಾಸದಲ್ಲಿ ಅತಿ ಕೆಟ್ಟ ಆರಂಭವನ್ನು ಪಡೆದುಕೊಂಡಿತು. ಶಾರ್ಜಾದಲ್ಲಿ ನಡೆದ ಪಂದ್ಯದಲ್ಲಿ ಮೊದಲ ಪವರ್‌ಪ್ಲೆನಲ್ಲಿ ಸಿಎಸ್‌ಕೆ ತಂಡ 24/5 ವಿಕೆಟ್ ಕಳೆದುಕೊಂಡಿತ್ತು. ಇದು ಪವರ್‌ಪ್ಲೇನಲ್ಲಿ ಚೆನ್ನೈ ತಂಡದ ಅತಿ ಕಳಪೆ ಪ್ರದರ್ಶನವೆನಿಸಿಕೊಂಡಿದೆ.
ಪವರ್‌ಪ್ಲೇನಲ್ಲಿ ಚೆನ್ನೈ ತಂಡದ ಈ ಹಿಂದೆ 2011ರಲ್ಲಿ ಕೆಟ್ಟ ಪ್ರದರ್ಶನವನ್ನು ನೀಡಿತ್ತು. ಆರ್‌ಸಿಬಿ ವಿರುದ್ಧ ನಡೆದ ಅಂದಿನ ಪಂದ್ಯದಲ್ಲಿ ಸಿಎಸ್‌ಕೆ ಪವರ್‌ಪ್ಲೇನಲ್ಲಿ 23 ರನ್‌ಗಳಿಗೆ 4 ವಿಕೆಟ್ ಕಳೆದುಕೊಂಡಿತ್ತು. ಮುಂಬೈ ವಿರುದ್ಧದ ಪಂದ್ಯದಲ್ಲಿ ಈ ಪ್ರದರ್ಶನಕ್ಕಿಂತಲೂ ಹೀನಾಯ ಪ್ರದರ್ಶನ ನೀಡಿದೆ.
ಯುವ ಆಟಗಾರರಾದ ಋತುರಾಜ್ ಗಾಯಕ್ವಾಡ್, ಎನ್ ಜಗದೀಶನ್ ಅವರನ್ನ ಕಣಕ್ಕಿಳಿಸದ ಬಗ್ಗೆ ಸಾಕಷ್ಟು ಮಾತುಗಳು ಕೇಳಿ ಬಂದಿದ್ದ ಹಿನ್ನೆಲೆಯಲ್ಲಿ ಇಂದಿನ ಪಮದ್ಯದಲ್ಲಿ ಧೋನಿ ಈ ಇಬ್ಬರು ಆಟಗಾರರಿಗೂ ಅವಕಾಶವನ್ನು ನೀಡಿದ್ದರು. ಆದರೆ ಈ ಇಬ್ಬರು ಕೂಡ ಸೊನ್ನೆ ಸುತ್ತುವ ಮೂಲಕ ತಂಡಕ್ಕೆ ಹಿನ್ನೆಡೆಯನ್ನುಂಟು ಮಾಡಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications