ಐಪಿಎಲ್ 2020: ಚೆನ್ನೈ ಸೂಪರ್ ಕಿಂಗ್ಸ್ vs ಸನ್‌ರೈಸರ್ಸ್ ಹೈದರಾಬಾದ್, ಸಂಭಾವ್ಯ ತಂಡ

ದುಬೈ: ಐಪಿಎಲ್ ಅಂಗಳದಲ್ಲಿ ಸನ್‌ರೈಸರ್ಸ್ ಹೈದಬಾಬಾದ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಶುಕ್ರವಾರ ಮುಖಾಮುಖಿಯಾಗುತ್ತಿದೆ. ಈ ಎರಡು ತಂಡಗಳು ಆಡಿರುವ ಮೂರು ಪಂದ್ಯಗಳಲ್ಲಿ ಎರಡು ಸೋಲು ಹಾಗೂ ಒಂದು ಗೆಲುವನ್ನು ಕಂಡಿದೆ. ಈ ಮೂಲಕ ಅಂಕಪಟ್ಟಿಯಲ್ಲಿ ಕೊನೆಯ ಎರಡು ಸ್ಥಾನಗಳನ್ನು ಈ ಎರಡು ತಂಡಗಳು ಪಡೆದುಕೊಂಡಿದೆ.
ಇಂದಿನ ಪಂದ್ಯದಲ್ಲಿ ಗೆಲ್ಲುವ ಮೂಲಕ ಎರಡು ತಂಡಗಳಿಗೂ ಕೂಡ ಅಂಕಪಟ್ಟಿಯಲ್ಲಿ ಸ್ಥಾನವನ್ನು ಉತ್ತಮಪಡಿಸಿಕೊಳ್ಳುವ ಅವಕಾಶವಿದೆ. ಹಾಗಾದಿ ಈ ಕಾದಾಟದಲ್ಲಿ ಯಾರ ಕೈ ಮೇಲಾಗಲಿದೆ ಎಂಬುದು ಈಗ ಕುತೂಹಲವನ್ನು ಮೂಡಿಸಿದೆ. ಕಳೆದ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡ ಭರ್ಜರಿ ಗೆಲುವನ್ನು ಕಂಡಿದ್ದು ಇಂದಿನ ಪಂದ್ಯದಲ್ಲೂ ಮೇಲುಗೈ ಸಾಧಿಸುವ ಉತ್ಸಾಹದಲ್ಲಿದೆ.
ಇನ್ನು ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಗಾಯಾಳಾಗಿದ್ದ ಅಂಬಾಟಿ ರಾಯುಡು ಇಂದಿನ ಪಂದ್ಯದಲ್ಲಿ ಕಣಕ್ಕಿಳಿಯಲಿದ್ದಾರೆ. ಅಂಬಾಟಿ ಆಗಮನ ತಂಡಕ್ಕೆ ದೊಡ್ಡ ಬಲವನ್ನು ನೀಡುವುದು ಖಚಿತ. ಜೊತೆಗೆ ಟಿ20 ಸ್ಪೆಶಲಿಸ್ಟ್ ಡ್ವೇಯ್ನ್ ಬ್ರಾವೋ ಕೂಡ ಇಂದಿನ ಆಡುವ ಬಳಗದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಯಿದೆ. ಮತ್ತೊಂದೆಡೆ ಸನ್‌ರೈಸರ್ಸ್ ಹೈದರಾಬಾದ್ ತಂಡದಲ್ಲಿ ಕೇನ್ ವಿಲಿಯಮ್ಸನ್ ಎಷ್ಟು ಮೌಲ್ಯಯುತ ಆಟಗಾರ ಎಂಬುದನ್ನು ಕಳೆದ ಪಂದ್ಯದಲ್ಲಿ ಸಾಭೀತುಪಡಿಸಿದ್ದಾರೆ. ಹೀಗಾಗಿ ಇಂದಿನ ಪಂದ್ಯದಲ್ಲೂ ಅವರು ಕಣಕ್ಕಿಳಿಯುವುದು ಪಕ್ಕಾ.
ಚೆನ್ನೈ ಸೂಪರ್ ಕಿಂಗ್ಸ್ ಸಂಭಾವ್ಯ ತಂಡ: ಶೇನ್ ವ್ಯಾಟ್ಸನ್, ಫಾಫ್ ಡು ಪ್ಲೆಸಿಸ್, ಮುರಳಿ ವಿಜಯ್ / ಋತುರಾಜ್ ಗಾಯಕ್ವಾಡ್, ಕೇದಾರ್ ಜಾಧವ್, ಎಂ.ಎಸ್.ಧೋನಿ (ನಾಯಕ ಮತ್ತು ವಿಕೆಟ್ ಕೀಪರ್), ಸ್ಯಾಮ್ ಕರ್ರನ್, ರವೀಂದ್ರ ಜಡೇಜಾ, ಜೋಶ್ ಹ್ಯಾಜಲ್‌ವುಡ್ / ಡ್ವೇಯ್ನ್ ಬ್ರಾವೋ, ಪಿಯೂಷ್ ಚಾವ್ಲಾ ಮತ್ತು ದೀಪಕ್ ಚಾಹರ್.
ಸನ್‌ರೈಸರ್ಸ್ ಹೈದರಾಬಾದ್: ಜಾನಿ ಬೈರ್‌ಸ್ಟೋವ್ (ವಿಕೆಟ್ ಕೀಪರ್), ಡೇವಿಡ್ ವಾರ್ನರ್ (ನಾಯಕ), ಕೇನ್ ವಿಲಿಯಮ್ಸನ್, ಮನೀಶ್ ಪಾಂಡೆ, ಪ್ರಿಯಮ್ ಗಾರ್ಗ್, ಅಬ್ದುಲ್ ಸಮದ್, ಅಭಿಷೇಕ್ ಶರ್ಮಾ, ರಶೀದ್ ಖಾನ್, ಭುವನೇಶ್ವರ್ ಕುಮಾರ್, ಖಲೀಲ್ ಅಹ್ಮದ್, ಮತ್ತು ಟಿ ನಟರಾಜನ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications