Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಪಿಎಲ್: ವಿರಾಟ್ ಕೊಹ್ಲಿ ಹಿಂದಿಕ್ಕಿ ದಾಖಲೆ ಬರೆದ ಡೇವಿಡ್ ವಾರ್ನರ್

IPL 2020: David Warner becomes quickest to Score 5000 runs in IPL history

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ ಮತ್ತೊಂದು ಪಂದ್ಯ ಸೂಪರ್ ಓವರ್ ನಲ್ಲಿ ಅಂತ್ಯ ಕಂಡಿದೆ. ಗೆಲುವಿನ ಹೊಸ್ತಿಲಲ್ಲಿ ಡೇವಿಡ್ ವಾರ್ನರ್ ನೇತೃತ್ವದ ಸನ್ ರೈಸರ್ಸ್ ಹೈದರಾಬಾದ್ ತಂಡ ಮುಗ್ಗರಿಸಿದೆ. ಆದರೆ, ಸೋಲು ಕಂಡ ಪಂದ್ಯದಲ್ಲೂ ವಾರ್ನರ್ ದಾಖಲೆ ಬರೆದಿದ್ದಾರೆ.

ಈ ಪಂದ್ಯದಲ್ಲಿ ವಾರ್ನರ್ 4ನೇ ಕ್ರಮಾಂಕದಲ್ಲಿ ಆಡಿ 33 ಎಸೆತಗಳಲ್ಲಿ 47ರನ್ (5 ಬೌಂಡರಿ) ಗಳಿಸಿದರು. ಸೂಪರ್ ಓವರ್ ನಲ್ಲಿ ಶೂನ್ಯಕ್ಕೆ ಔಟಾದರು. ನಿಗದಿತ 20 ಓವರ್ ಗಳಲ್ಲಿ ಕೆಕೆಆರ್ 163/5 ಹಾಗೂ ಹೈದರಾಬಾದ್ 163/6 ಗಳಿಸಿದ್ದರಿಂದ ಸೂಪರ್ ಓವರ್ ಆಡಬೇಕಾಯಿತು. ಸೂಪರ್ ಓವರ್ ನಲ್ಲಿ ಸನ್ ರೈಸರ್ಸ್ ಕೇವಲ 2 ರನ್ ಗಳಿಸಿ ವಾರ್ನರ್ ವಿಕೆಟ್ ಕಳೆದುಕೊಂಡಿತು. ಕೆಕೆಆರ್ ಅಂತಿಮವಾಗಿ ಗೆಲುವಿನ ನಗೆ ಬೀರಿತು.

ಐಪಿಎಲ್ ನಲ್ಲಿ 5000ರನ್:
ಐಪಿಎಲ್ ನಲ್ಲಿ 5000ರನ್ ಗಳಿಸುವ ಮೂಲಕ ಡೇವಿಡ್ ವಾರ್ನರ್ ಅವರು 5000ರನ್ ಕ್ಲಬ್ ಸೇರಿದ ಮೊದಲ ವಿದೇಶಿ ಆಟಗಾರ ಎನಿಸಿಕೊಂಡಿದ್ದಾರೆ. ಒಟ್ಟಾರೆ, ನಾಲ್ಕನೇ ಕ್ರಿಕೆಟರ್ ಆಗಿದ್ದಾರೆ. ವಿರಾಟ್ ಕೊಹ್ಲಿ, ಸುರೇಶ್ ರೈನಾ, ರೋಹಿತ್ ಶರ್ಮ ಉಳಿದ ಮೂವರು ಆಟಗಾರರು.

IPL 2020: David Warner becomes quickest to Score 5000 runs in IPL history

ಕೊಹ್ಲಿ ಹಿಂದಿಕ್ಕಿದ ವಾರ್ನರ್
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ ಅವರು 5000ರನ್ ಗಡಿಯನ್ನು ದಾಟಲು 157 ಇನ್ನಿಂಗ್ಸ್ ತೆಗೆದುಕೊಂಡಿದ್ದರು. ಆದರೆ, ಹೈದರಾಬಾದ್ ತಂಡದ ನಾಯಕ ಡೇವಿಡ್ ವಾರ್ನರ್ 135 ಇನ್ನಿಂಗ್ಸ್ ಗಳಲ್ಲೇ 5000ರನ್ ಮೈಲಿಗಲ್ಲು ದಾಟಿದ್ದು, ತ್ವರಿತಗತಿಯಲ್ಲಿ ಈ ಸಾಧನೆ ಮಾಡಿದ್ದಾರೆ.

ಟಾಪ್ 4 ರನ್ ಸ್ಕೋರರ್ಸ್;
ವಿರಾಟ್ ಕೊಹ್ಲಿ 186 ಪಂದ್ಯ, 178 ಇನ್ನಿಂಗ್ಸ್, 5759ರನ್
ಸುರೇಶ್ ರೈನಾ 193 ಪಂದ್ಯ, 192 ಇನ್ನಿಂಗ್ಸ್ , 5368 ರನ್
ರೋಹಿತ್ ಶರ್ಮ 197 ಪಂದ್ಯ, 192 ಇನ್ನಿಂಗ್ಸ್, 5158 ರನ್
ಡೇವಿಡ್ ವಾರ್ನರ್ 135 ಪಂದ್ಯ, 135 ಇನ್ನಿಂಗ್ಸ್, 5037ರನ್

Story first published: Monday, October 19, 2020, 9:54 [IST]
Other articles published on Oct 19, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+