ಐಪಿಎಲ್: ಪಾಯಿಂಟ್ಸ್ ಟೇಬಲ್‌ನಲ್ಲಿ ಬದಲಾವಣೆ, ಅಗ್ರ ಸ್ಥಾನಕ್ಕೆ ಡೆಲ್ಲಿ

ದುಬೈ: ಇಂಡಿಯನ್ ಪ್ರೀಮಿಯರ್ ಲೀಗ್ ಪಾಯಿಂಟ್ಸ್ ಟೇಬಲ್‌ನಲ್ಲಿ ಮಹತ್ವದ ಬದಲಾವಣೆಯಾಗಿದೆ. ಟೇಬಲ್‌ನಲ್ಲಿ ಮೊದಲ ಸ್ಥಾನದಲ್ಲಿದ್ದ ರಾಜಸ್ಥಾನ್ ರಾಯಲ್ಸ್ ಅನ್ನು ಡೆಲ್ಲಿ ಕ್ಯಾಪಿಟಲ್ಸ್ ಕೆಳಗಿಳಿಸಿದೆ. ಡಿಸಿ ಈಗ ನಂ.1 ಸ್ಥಾನ ಆವರಿಸಿದೆ. ರಾಜಸ್ಥಾನ್ ತಂಡ ಮೂರನೇ ಸ್ಥಾನಕ್ಕೆ ಕುಸಿದಿದೆ.
13ನೇ ಆವೃತ್ತಿಯ ಐಪಿಎಲ್‌ನಲ್ಲಿ ಈವರೆಗೆ 12 ಪಂದ್ಯಗಳು ಮುಗಿದಿವೆ. ಈ ಮಧ್ಯೆ ಪಾಯಿಂಟ್ಸ್ ಟೇಬಲ್‌ನಲ್ಲೂ ಏರುಪೇರಾಗಿವೆ. ಅಗ್ರ ಸ್ಥಾನದಲ್ಲಿದ್ದ ತಂಡಗಳು ಕೆಳಕ್ಕೆ ಕುಸಿಯುತ್ತಿದ್ದರೆ, ತಳದಲ್ಲಿದ್ದ ತಂಡಗಳು ಮೇಲೇರುತ್ತ ಟೂರ್ನಿಗೆ ಜಿದ್ದಾಜಿದ್ದಿ ಹೆಚ್ಚಿಸುತ್ತಿದೆ.
ಈವರೆಗಿನ ಪಂದ್ಯಗಳನ್ನು ಗಮನಿಸಿದರೆ, ಆಡಿರುವ 3 ಪಂದ್ಯಗಳಲ್ಲಿ 2 ಪಂದ್ಯ ಗೆದ್ದು 4 ಪಾಯಿಂಟ್ಸ್ ಕಲೆ ಹಾಕಿರುವ ಡೆಲ್ಲಿ ಕ್ಯಾಪಿಟಲ್ಸ್ +0.483 ನೆಟ್ ರನ್‌ರೇಟ್‌ನೊಂದಿಗೆ ಮೊದಲ ಸ್ಥಾನದಲ್ಲಿದೆ. 3ರಲ್ಲಿ 2 ಪಂದ್ಯ ಗೆದ್ದಿರುವ ಕೆಕೆಆರ್ 4 ಪಾಯಿಂಟ್ಸ್ ಮತ್ತು +0.117 ನೆಟ್ ರನ್‌ರೇಟ್ ನೊಂದಿಗೆ 2ನೇ ಸ್ಥಾನಕ್ಕೇರಿದೆ.
ಇನ್ನು 3ನೇ ಸ್ಥಾನದಲ್ಲಿ ರಾಜಸ್ಥಾನ್ ರಾಯಲ್ಸ್ (3ರಲ್ಲಿ 2 ಗೆಲುವು, 4 ಪಾಯಿಂಟ್ಸ್, -0.219 ರನ್‌ರೇಟ್), 4ನೇ ಸ್ಥಾನದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (3ರಲ್ಲಿ 2 ಜಯ, 4 ಪಾಯಿಂಟ್ಸ್, -1.450 ರನ್‌ರೇಟ್), 5ನೇ ಸ್ಥಾನದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ (3ರಲ್ಲಿ 1 ಗೆಲುವು, 2 ಪಾಯಿಂಟ್ಸ್, +1.498 ರನ್‌ರೇಟ್) ಇದೆ.
6ನೇ ಸ್ಥಾನದಲ್ಲಿ ಮುಂಬೈ ಇಂಡಿಯನ್ಸ್ (3ರಲ್ಲಿ 1 ಗೆಲುವು, 2 ಪಾಯಿಂಟ್ಸ್, +0.654 ನೆಟ್ ರನ್‌ರೇಟ್), 7ನೇ ಸ್ಥಾನದಲ್ಲಿ ಸನ್ ರೈಸರ್ಸ್ ಹೈದರಾಬಾದ್ (3ರಲ್ಲಿ 1 ಗೆಲುವು, 2 ಪಾಯಿಂಟ್ಸ್, -0.228), 8ನೇ ಸ್ಥಾನದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (3ರಲ್ಲಿ 1 ಜಯ, 2 ಪಾಯಿಂಟ್ಸ್, -0.840) ಇವೆ. ಗುರುವಾರ 13ನೇ ಪಂದ್ಯದಲ್ಲಿ ಕಿಂಗ್ಸ್ XI ಪಂಜಾಬ್ ಮತ್ತು ಮುಂಬೈ ಇಂಡಿಯನ್ಸ್ ಕಾದಾಡಲಿವೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications