ಐಪಿಎಲ್‌ನಲ್ಲಿ 150 ವಿಕೆಟ್, ಹರ್ಭಜನ್ ಸಮಕ್ಕೆ ನಿಂತ ಡಿಜೆ ಬ್ರಾವೋ

ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆಲ್ ರೌಂಡರ್ ಡ್ವಾಯ್ನೆ ಬ್ರಾವೋ ಅವರು ತಮ್ಮ ಹುಟ್ಟುಹಬ್ಬದ ದಿನ(ಅಕ್ಟೋಬರ್ 7)ದಂದು ಐಪಿಎಲ್ ದಾಖಲೆ ಬರೆದಿದ್ದಾರೆ. ಐಪಿಎಲ್‌ನಲ್ಲಿ 150 ವಿಕೆಟ್ ಗಳಿಸಿದ 5ನೇ ಆಟಗಾರ ಎನಿಸಿಕೊಂಡಿದ್ದಾರೆ. ಈ ಮೂಲಕ ಚೆನ್ನೈ ಆಫ್ ಸ್ಪಿನ್ನರ್ ಹರ್ಭಜನ್ ಸಿಂಗ್ ಸಮಕ್ಕೆ ನಿಂತಿದ್ದಾರೆ.
ಕೋಲ್ಕತ್ತಾ ನೈಟ್ ರೈಡರ್ಸ್ ಪಂದ್ಯಕ್ಕೂ ಮುನ್ನ ಬ್ರಾವೋ ಅವರಿಗೆ 150 ವಿಕೆಟ್ ಗಡಿ ಮುಟ್ಟಲು 3 ವಿಕೆಟ್ ಗಳ ಅಗತ್ಯವಿತ್ತು. ಉತ್ತಮ ಸ್ಪೆಲ್ ಮಾಡಿದ ಬ್ರಾವೋ 4 ಓವರ್ ಗಳಲ್ಲಿ 37 ರನ್ನಿತ್ತು 3 ವಿಕೆಟ್ ಕಿತ್ತರು. ಶಿವಂ ಮಾವಿ ನೀಡಿದ ಕ್ಯಾಚನ್ನು ವಿಕೆಟ್ ಕೀಪರ್ ಧೋನಿ ಅದ್ಭುತವಾಗಿ ಡೈವ್ ಹೊಡೆದು ಹಿಡಿಯುವ ಮೂಲಕ ಈ ಪಂದ್ಯದಲ್ಲೆ 150 ವಿಕೆಟ್ ಬ್ರಾವೋಗೆ ದಕ್ಕುವಂತಾಯಿತು.
ಐಪಿಎಲ್ ನಲ್ಲಿ ಅತ್ಯಧಿಕ ವಿಕೆಟ್ ಗಳಿಸಿದ ಬೌಲರ್ ಗಳ ಪೈಕಿ ಮುಂಬೈ ಇಂಡಿಯನ್ಸ್ ತಂಡದ ಲಸಿತ್ ಮಾಲಿಂಗ ಅಗ್ರಸ್ಥಾನದಲ್ಲಿದ್ದು, 170 ವಿಕೆಟ್ ಗಳಿಸಿದ್ದಾರೆ. ಅಮಿತ್ ಮಿಶ್ರಾ 160 ಹಾಗೂ ಪಿಯೂಶ್ ಚಾವ್ಲಾ 156 ನಂತರದ ಸ್ಥಾನದಲ್ಲಿದ್ದು, ಹರ್ಭಜನ್ ಸಿಂಗ್ ಹಾಗೂ ಬ್ರಾವೋ ತಲಾ 150 ವಿಕೆಟ್ ಗಳಿಸಿದ್ದಾರೆ.
ರಾಹುಲ್ ತ್ರಿಪಾಠಿ 81 ರನ್ ನೆರವಿನಿಂದ 167 ರನ್ ಗಳಿಸಿದ ಕೆಕೆಆರ್ ತಂಡದ ಎದುರು ಚೆನ್ನೈ ರನ್ ಚೇಸ್ ಮಾಡಲಾಗದೆ 157/5 ಸ್ಕೋರ್ ಮಾಡಿ ಸೋಲು ಕಂಡಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications